BCCI ಅಧ್ಯಕ್ಷ ಹುದ್ದೆಗೆ ಸೌರವ್ ಗಂಗೂಲಿ ಸ್ಪರ್ಧೆ ಇಲ್ಲ; ದಾದಾ ಯುಗಾಂತ್ಯ..?ಅಕ್ಟೋಬರ್ 18ರಂದು ನಡೆಯಲಿರುವ ಬಿಸಿಸಿಐ ಚುನಾವಣೆಒಟ್ಟು 38 ಕ್ರಿಕೆಟ್‌ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ

ನವದೆಹಲಿ(ಅ.08): ಅಕ್ಟೋಬರ್ 18ರಂದು ನಡೆಯಲಿರುವ ಬಿಸಿಸಿಐ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಮತ್ತೊಮ್ಮೆ ಸ್ಪರ್ಧಿಸದಿರಲು ಹಾಲಿ ಅಧ್ಯಕ್ಷ ಸೌರವ್‌ ಗಂಗೂಲಿ ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಅಧ್ಯಕ್ಷ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಕೂಲಿಂಗ್‌ ಆಫ್‌ ನಿಯಮವನ್ನು ಸಡಿಲಗೊಳಿಸುವಂತೆ ಗಂಗೂಲಿ ಹಾಗೂ ಶಾ ನೇತೃತ್ವದಲ್ಲಿ ಬಿಸಿಸಿಐ ಸುಪ್ರೀಂ ಕೋರ್ಚ್‌ ಮೆಟ್ಟಿಲೇರಿತ್ತು. ನ್ಯಾ.ಚಂದ್ರಚೂಡ್‌ ಅವರ ನೇತೃತ್ವದ ಪೀಠ ಸತತ 6 ವರ್ಷ ಅಧಿಕಾರದಲ್ಲಿ ಇರಬಹುದು ಎಂದು ತೀರ್ಪು ನೀಡಿತ್ತು.

ಬಿಸಿಸಿಐ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಕುರಿತಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಚ್‌, ಬಿಸಿಸಿಐ ಮನವಿಯನ್ನು ಪುರಸ್ಕರಿಸಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಕೂಲಿಂಗ್‌ ಆಫ್‌ ಇಲ್ಲದೇ ಇನ್ನೂ 3 ವರ್ಷ ಅಧಿಕಾರದಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟಿತ್ತು. ನ್ಯಾ.ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾ.ಹಿಮಾ ಕೊಹ್ಲಿ ಅವರಿದ್ದ ದ್ವಿಸದಸ್ಯ ಪೀಠವು ಯಾವುದೇ ಪದಾಧಿಕಾರಿ ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತು ಬಿಸಿಸಿಐನಲ್ಲಿ ಒಟ್ಟು ಸತತ 12 ವರ್ಷ ಕಾಲ ಅಧಿಕಾರದಲ್ಲಿ ಇರಬಹುದು ಎಂದಿದ್ದು, ಆ ಬಳಿಕ 3 ವರ್ಷ ಕೂಲಿಂಗ್‌ ಆಫ್‌ ಅವಧಿಯಲ್ಲಿರಬೇಕು ಎಂದು ಆದೇಶಿಸಿದೆ.

ಒಬ್ಬ ಪದಾಧಿಕಾರಿ ರಾಜ್ಯ ಸಂಸ್ಥೆಯಲ್ಲಿ ಸತತ 2 ಬಾರಿ 3 ವರ್ಷಗಳ ಅವಧಿ ಬಳಿಕ ಕೂಲಿಂಗ್‌ ಆಫ್‌ ಇಲ್ಲದೇ ಬಿಸಿಸಿಐನಲ್ಲಿ ಸತತ ಎರಡು ಬಾರಿ 3 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬಹುದಾಗಿದೆ. ಆದರೆ 6 ವರ್ಷಗಳ ಬಳಿಕ ಬಿಸಿಸಿಐ ಇಲ್ಲವೇ ರಾಜ್ಯ ಸಂಸ್ಥೆಯಲ್ಲೇ ಮುಂದುವರಿಯಬೇಕಿದ್ದರೆ 3 ವರ್ಷ ಕೂಲಿಂಗ್‌ ಆಫ್‌ ಕಡ್ಡಾಯ ಎಂದು ಪುನರುಚ್ಚರಿಸಿತ್ತು.

ಇದೇ ವೇಳೆ ವರದಿಗಳ ಪ್ರಕಾರ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಹಾಲಿ ಅಧ್ಯಕ್ಷ ರೋಜರ್‌ ಬಿನ್ನಿ ಆಯ್ಕೆಯಾಗುವ ಸಾಧ್ಯತೆ ಇದೆ. ಬಿನ್ನಿಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರಿಂದ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಇನ್ನು ಕಾರ‍್ಯದರ್ಶಿ ಸ್ಥಾನಕ್ಕೆ ಜಯ್‌ ಶಾ ಪುನರಾಯ್ಕೆ ಸಾಧ್ಯತೆ. ಒಟ್ಟು 38 ಕ್ರಿಕೆಟ್‌ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸಲಿದ್ದು, ಅಧ್ಯಕ್ಷ, ಕಾರ‍್ಯದರ್ಶಿ, ಉಪಾಧ್ಯಕ್ಷ, ಜಂಟಿ ಕಾರ‍್ಯದರ್ಶಿ ಹಾಗೂ ಖಜಾಂಚಿ ಹುದ್ದೆಗೆ ಆಯ್ಕೆ ನಡೆಯಲಿದೆ.

ವಿಂಡೀಸ್‌ ವಿರುದ್ಧ ಟಿ20 ಸರಣಿ ಗೆದ್ದ ಆಸ್ಪ್ರೇಲಿಯಾ

ಬ್ರಿಸ್ಬೇನ್‌: ವೆಸ್ಟ್‌ಇಂಡೀಸ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 31 ರನ್‌ಗಳಿಂದ ಗೆದ್ದ ಆಸ್ಪ್ರೇಲಿಯಾ 2-0 ಅಂತರದಲ್ಲಿ ಸರಣಿ ಗೆದ್ದಿದೆ. ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ 20 ಓವರಲ್ಲಿ 7 ವಿಕೆಟ್‌ಗೆ 178 ರನ್‌ ಗಳಿಸಿತು. ಡೇವಿಡ್‌ ವಾರ್ನರ್‌ 41 ಎಸೆತದಲ್ಲಿ 75, ಟಿಮ್‌ ಡೇವಿಡ್‌ 20 ಎಸೆತದಲ್ಲಿ 42 ರನ್‌ ಸಿಡಿಸಿದರು.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಟ; ಡ ಪ್ರಕಮಯಾಂಕ್‌ಗೆ ನಾಯಕ ಪಟ್ಟ..!

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವಿಂಡೀಸ್‌ ಪರ ಯಾರೊಬ್ಬರೂ ದೊಡ್ಡ ಇನ್ನಿಂಗ್‌್ಸ ಆಡಲಿಲ್ಲ. 29 ರನ್‌ ಗಳಿಸಿದ ಜಾನ್ಸನ್‌ ಚಾರ್ಲ್ಸ್ ತಂಡದ ಪರ ಗರಿಷ್ಠ ರನ್‌ ಗಳಿಸಿದ ಬ್ಯಾಟರ್‌ ಎನಿಸಿದರು. ವಿಂಡೀಸ್‌ 20 ಓವರಲ್ಲಿ 8 ವಿಕೆಟ್‌ಗೆ 147 ರನ್‌ ಗಳಿಸಿತು. ಮಿಚೆಲ್‌ ಸ್ಟಾರ್ಕ್ 20 ರನ್‌ಗೆ 4 ವಿಕೆಟ್‌ ಕಿತ್ತರು. ವಿಶ್ವಕಪ್‌ಗೂ ಮುನ್ನ ಆಸ್ಪ್ರೇಲಿಯಾ ಅ.9ರಿಂದ ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.