* ವಿವಿಎಸ್ ಲಕ್ಷ್ಮಣ್​​ ವಿರುದ್ಧ ಗಂಗೂಲಿ ಗರಂ ಆಗಿದ್ದೇಕೆ..?* ದೀಪಕ್​ ಚಹರ್​ ಮರು ಇಂಜುರಿಗೆ ಬಿಸಿಸಿಐ ಕೆಂಡಾಮಂಡಲ* NCAಯ ಈ ನಿರ್ಲಕ್ಷ್ಯ ಧೋರಣೆ ಇನ್ನೆಷ್ಟು ದಿನ..? : 

ಮುಂಬೈ, (ಏ.16) : ಬಿಸಿಸಿಐ, ಇತಿಹಾಸದಲ್ಲೇ ಮೊದಲ ಬಾರಿ ಬಲಿಷ್ಠ ಅಧ್ಯಕ್ಷನನ್ನ ಕಂಡಿದೆ. ಬಂಗಾಳದ ಹುಲಿ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷಗಾದೆಗೇರಿದ ಬಳಿಕ ಮಹತ್ತರ ಬದಲಾವಣೆಗಳಾಗಿವೆ. ಆಡಳಿತಾತ್ಮಕತೆಯಿಂದ ಹಿಡಿದು, ಭಾರತ ತಂಡದ ಕ್ರಿಕೆಟ್​ ಬೆಳವಣಿಗೆಯಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಿದ್ದಾರೆ. ಇದರ ಆದಿಯಾಗಿಯೇ ವಿವಿಎಸ್ ಲಕ್ಷ್ಮಣ್​ರನ್ನ NCA ಡೈರೆಕ್ಟರ್ ಆಗಿ ನೇಮಿಸುವಲ್ಲಿ ಯಶಸ್ವಿಗೊಂಡಿದ್ರು. 

ರಾಹುಲ್ ದ್ರಾವಿಡ್​ರಂತೆ ಶಿಸ್ತು, ಸಂಯಮಕ್ಕೆ ಲಕ್ಷ್ಮಣ್​ ಕೂಡ ಹೆಸರುವಾಸಿ. ಇವರ ಮಾರ್ಗದರ್ಶನದಲ್ಲಿ NCAಗೆ ಹೊಸ ಚೈತನ್ಯ ತುಂಬಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ರು. ಆದ್ರೆ ಮೊದಲ ಹೆಜ್ಜೆಯಲ್ಲಿ ವಿವಿಎಸ್​​ ಲಕ್ಷ್ಮಣ್​ ಎಡವಿದಂತಿದೆ. ಹೀಗಾಗಿ ಎನ್​ಸಿಎ ಮುಖ್ಯಸ್ಥರ ವಿರುದ್ಧ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಫುಲ್​​ ಗರಂ ಆಗಿದ್ದಾರೆ.

ಖದರ್ ಕಳೆದುಕೊಂಡ IPL, 14 ವರ್ಷದ ಐಪಿಎಲ್​​​ ಯಶಸ್ವಿ ಓಟಕ್ಕೆ ಬಿತ್ತಾ ಬ್ರೇಕ್​​..?

ದೀಪಕ್​ ಚಹರ್​ ಮರು ಇಂಜುರಿಗೆ ಬಿಸಿಸಿಐ ಕೆಂಡಾಮಂಡಲ: 
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದ ಯುವ ವೇಗಿ ದೀಪಕ್ ಚಹರ್​ NCA ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ರು. ಸದ್ಯ ಈ ಬೌಲರ್​ ಗಂಭೀರ ಬೆನ್ನು ನೋವಿಗೆ ತುತ್ತಾಗಿ, 2022ನೇ ಐಪಿಎಲ್​​ನಿಂದ ಹೊರಬಿದ್ದಿದ್ದಾರೆ. ಇದೇ ವಿಚಾರವಾಗಿ ಸೌರವ್ ಗಂಗೂಲಿ, NCA ವಿರುದ್ಧ ಕಿಡಿ ಕಾರಿದ್ದು, ಖಡಕ್ ಎಚ್ಚರಿಯೊಂದನ್ನ ನೀಡಿದ್ದಾರೆ.

ಅವ್ಯವಸ್ಥೆ ಸರಿಪಡಿಸಿಕೊಳ್ಳಿ ಎಂದು NCAಗೆ ಖಡಕ್​​ ವಾರ್ನಿಂಗ್​:
ದೀಪಕ್ ಚಹರ್ ಮರು ಇಂಜುರಿ ಸುದ್ದಿ ಗಂಗೂಲಿ ಪಿತ್ತ ನೆತ್ತಿಗೇರುವಂತೆ ಮಾಡಿದೆ. NCA ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದ ಯಂಗ್ ಬೌಲರ್​ ಶೀಘ್ರದಲ್ಲೇ ಗುಣಮುಖರಾಗಿ ಐಪಿಎಲ್​ ಮರುಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ರು. ಆದ್ರೆ NCAಯಲ್ಲಿರುವಾಗಲೇ 2ನೇ ಬಾರಿ ಇಂಜುರಿಗೆ ಒಳಗಾಗಿ ಐಪಿಎಲ್​​ ತೊರೆದಿದ್ದಲ್ಲದೇ, ಮುಂದಿನ ನಾಲ್ಕು ತಿಂಗಳು ಟೀಮ್​ ಇಂಡಿಯಾದಿಂದ ಹೊರಗುಳಿಯಲಿದ್ದಾರೆ. ಅಲ್ಲದೇ ಟಿ20 ವಿಶ್ವಕಪ್​​ ಆಡುವುದು ಕೂಡ ಅನುಮಾನ ಎನ್ನಲಾಗ್ತಿದೆ. ಒಂದು ವೇಳೆ ಚಹರ್​ ಚುಟುಕು ದಂಗಲ್​​ನಿಂದ ಹೊರಬಿದ್ರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ. 

ಈ ಕಹಿ ಸುದ್ದಿಯನ್ನ ಬಿಸಿಸಿಐಯಿಂದ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಪುನಶ್ಚೇತನ ಶಿಬಿರದಲ್ಲಿರುವಾಗಲೇ ಚಹರ್ ಇಂಜುರಿಗೆ ಒಳಗಾಗಿದ್ದು ಬಿಗ್​​ಬಾಸ್​​ಗಳಿಗೆ ಆಶ್ವರ್ಯ ತರಿಸಿದೆ. ನಿಮ್ಮ ಅಸಡ್ಡೆಯಿಂದಲೇ ಇದು ಜರುಗಿದೆ. ಆದಷ್ಟು ಬೇಗ ನಿಮ್ಮ ಅವ್ಯವಸ್ಥೆ ಬಗೆಹರಿಸಿಕೊಳ್ಳಿ ಎಂದು NCAಗೆ ಖಡಕ್​ ವಾರ್ನಿಂಗ್​​ ಮಾಡಿದೆ.

NCAಯ ಈ ನಿರ್ಲಕ್ಷ್ಯ ಧೋರಣೆ ಇನ್ನೆಷ್ಟು ದಿನ..? : 
ಅಂದಹಾಗೇ ವೀಕ್ಷಕರೇ, NCA ಎಡವಟ್ಟಿನಿಂದಾಗಿ ಪ್ಲೇಯರ್ಸ್​ ಶಿಕ್ಷೆ ಅನುಭವಿಸ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಘಟನೆಗಳು ಜರುಗಿವೆ. ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಕೂಡ ಸುದೀರ್ಘ ಕಾಲ NCA ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ ಬಳಿಕ ಮತ್ತೆ ಗಾಯಕ್ಕೆ ತುತ್ತಾಗಿದ್ರು. ರವೀಂದ್ರ ಜಡೇಜಾ, ರೋಹಿತ್​ ಶರ್ಮಾ ಹಾಗೂ ಸೂರ್ಯಕುಮಾರ್​ ಯಾದವ್​ ಇಂಜುರಿ ವಿಚಾರದಲ್ಲಿಯೂ NCA ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎದ್ದಿತ್ತು. ಫೈನಲಿ NCA ಇನ್ನಾದರೂ ಆಟಗಾರರ ಇಂಜುರಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಬಿಟ್ಟು, ತಪ್ಪು ತಿದ್ದಿಕೊಳ್ಳಲಿ.