ಅಹಮದಾಬಾದ್(ಡಿ.24): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತನ್ನ ಪ್ರಧಾನ ವ್ಯವಸ್ಥಾಪಕ ಕೆವಿಪಿ ರಾವ್ ಅವರ ತಲೆದಂಡವಾಗಿದೆ. ದೇಶದ ಪರ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಕೆವಿಪಿ ರಾವ್ ಧನ್ಯವಾದ ಅರ್ಪಿಸಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಯಾಕಾಗಿ ತಲೆದಂಡವಾಗಿದೆ ಎನ್ನುವುದು ಗೊತ್ತಿಲ್ಲ. ಈಗಿನಿಂದಲೇ ತಮ್ಮ ಹುದ್ದೆ ತೊರೆಯುತ್ತಾರೋ ಇಲ್ಲವೇ ಕೆಲವು ದಿನಗಳ ಬಳಿಕ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಾರೋ ಗೊತ್ತಿಲ್ಲ ಎಂದು ಬಿಸಿಸಿಐ ಹಿರಿಯ ಸದಸ್ಯರೊಬ್ಬರು ಅಹಮದಾಬಾದ್ ಮಿರರ್ ಸುದ್ದಿವಾಹಿನಿಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ: ಇಂದು ಮಹತ್ವದ ತೀರ್ಮಾನ

55 ವರ್ಷದ ಕೆವಿಪಿ ರಾವ್ ಈ ಹಿಂದೆ ಬಿಹಾರ ಕ್ರಿಕೆಟ್‌ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಕಳೆದ 10 ವರ್ಷಗಳಿಂದ ಬಿಸಿಸಿಐನೊಂದಿಗೆ ನಿಕಟ ಸಂಬಂಧ ಹೊಂದಿದ್ದ ರಾವ್, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಡಮಿ ಹಾಗೂ ದೇಸಿ ಕ್ರಿಕೆಟ್‌ನ ಮೇಲ್ವಸ್ತುವಾರಿ ನೋಡಿಕೊಳ್ಳುತ್ತಿದ್ದರು.