Asianet Suvarna News Asianet Suvarna News

ಇಂಗ್ಲೆಂಡ್‌ ಸರಣಿಯಲ್ಲಿ ಅಹ್ಮದಾಬಾದ್‌ಗೆ 7 ಪಂದ್ಯ: ಕ್ರಿಕೆಟ್ ಸಂಸ್ಥೆಗಳ ಬೇಸರ

ಭಾರತ-ಇಂಗ್ಲೆಂಡ್ ನಡುವಿನ ಸರಣಿಯ 12 ಪಂದ್ಯಗಳ ಪೈಕಿ 7 ಪಂದ್ಯಗಳು ಅಹಮದಾಬಾದ್‌ನಲ್ಲೇ ಆಯೋಜಿಸಿರುವುದಕ್ಕೆ ಬೇರೆ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ಮೇಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

BCCI Face Heat Over Venue Allocation For India vs England Series kvn
Author
New Delhi, First Published Dec 14, 2020, 9:21 AM IST

ನವದೆಹಲಿ(ಡಿ.14): ಮುಂದಿನ ವರ್ಷ ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ ಕ್ರಿಕೆಟ್‌ ಸರಣಿಯಲ್ಲಿ ಬಿಸಿಸಿಐನ ಧೋರಣೆಗೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ. 

ಇಂಗ್ಲೆಂಡ್‌ ಸರಣಿಯ 12 ಪಂದ್ಯಗಳ ಪೈಕಿ 7 ಪಂದ್ಯಗಳಿಗೆ ಗುಜರಾತ್‌ ಕ್ರಿಕೆಟ್‌ ಸಂಸ್ಥೆ (ಜಿಸಿಎ)ಯ ಅಹಮದಾಬಾದ್‌ ಆತಿಥ್ಯ ವಹಿಸಲಿದೆ. ಹೀಗಾಗಿ ಇತರೆ ಸಂಸ್ಥೆಗಳು ಬೇಸರಗೊಂಡಿದ್ದು, ಈ ಸಂಬಂಧ ಬಿಸಿಸಿಐಗೆ ಪ್ರಶ್ನೆ ಕೇಳಿವೆ. 2021ರಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಕ್ರಿಕೆಟ್‌ ಸರಣಿಯ ಪಂದ್ಯಗಳನ್ನು ಅಹಮದಾಬಾದ್‌, ಚೆನ್ನೈ ಹಾಗೂ ಪುಣೆಯಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. 

ಇಂಗ್ಲೆಂಡ್ ತಂಡದ ಭಾರತ ಪ್ರವಾಸ; ಟೆಸ್ಟ್, ಏಕದಿನ,ಟಿ20 ವೇಳಾಪಟ್ಟಿ ಪ್ರಕಟ!

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತವರು ರಾಜ್ಯ ಬಂಗಾಳ ಕೂಡ ಬಿಸಿಸಿಐಗೆ ಪ್ರಶ್ನೆ ಕೇಳಿದ ಸಂಸ್ಥೆಗಳ ಪಟ್ಟಿಯಲ್ಲಿದೆ. ಬಿಸಿಸಿಐನ ಈ ನಡೆಗೆ ಮುಂಬೈ ಹಾಗೂ ಕೋಲ್ಕತಾ ಕ್ರಿಕೆಟ್‌ ಸಂಸ್ಥೆಗಳು ಆಶ್ಚರ್ಯ ವ್ಯಕ್ತಪಡಿಸಿವೆ. ಬರೋಬ್ಬರಿ ಒಂದು ವರ್ಷದ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ನಡೆಯುತ್ತಿರುವುದರಿಂದ ಕೇವಲ ಮೈದಾನದಲ್ಲಿ ಕ್ರಿಕೆಟ್‌ ಟೂರ್ನಿ ಆಯೋಜಿಸಿರುವುದು ಉಳಿದ ಕ್ರಿಕೆಟ್ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ.

Follow Us:
Download App:
  • android
  • ios