ನವದೆಹಲಿ(ಮಾ.19): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗ ಐಷಾರಾಮಿ ವಿಮಾನ ಪ್ರಯಾಣಕ್ಕೂ ಕತ್ತರಿ ಹಾಕಿದ್ದು, ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥರು ಮಾತ್ರ ಬ್ಯುಸನೆಸ್‌ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸಲು ಅವಕಾಶ ಮಾಡಿಕೊಡಲಾಗಿದೆ. 

ಇದನ್ನೂ ಓದಿ: ಈ ಬಾರಿ ಐಪಿಎಲ್ ಟೂರ್ನಿ ನಡೆಯೋದು ಡೌಟ್..!

ಉಳಿದಂತೆ ಸಮಿತಿಯ ಎಲ್ಲಾ ಸದಸ್ಯರು ಎಕಾನಮಿ ಕ್ಲಾಸ್‌ನಲ್ಲೇ ಪ್ರಯಾಣ ಬೆಳೆಸಬೇಕಿದೆ. ಈ ನಿಯಮ ಕಿರಿಯರ ಆಯ್ಕೆ ಸಮಿತಿಯ ಸದಸ್ಯರಿಗೂ ಅನ್ವಯವಾಗಲಿದೆ. ಬಿಸಿಸಿಐ ಈ ನಿರ್ಧಾರದಿಂದ ಮೊನ್ನೆ ಮೊನ್ನೆಯಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಕನ್ನಡಿಗ ಸುನಿಲ್‌ ಜೋಶಿ ಅವರು ಈ ಅವಕಾಶ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಈ ಐವರು ಟೀಂ ಇಂಡಿಯಾ ಪ್ರತಿನಿಧಿಸಿದ್ದರು ಎನ್ನೋದು ನೆನಪಿದೆಯಾ..?

ಪ್ರಯಾಣದ ಅವಧಿ 7 ಗಂಟೆಗಿಂತ ಹೆಚ್ಚಿದ್ದರೆ ಮಾತ್ರ ಆಯ್ಕೆ ಸಮಿತಿಯ ಇತರೆ ಸದಸ್ಯರಿಗೂ ಬ್ಯುಸಿನೆಸ್‌ ಕ್ಲಾಸ್‌ ಸೌಕರ್ಯ ಸಿಗಲಿದೆ. ಹೊಸ ನಿಯಮದಿಂದ ಬಿಸಿಸಿಐಗೆ ವಾರ್ಷಿಕ ಲಕ್ಷಾಂತರ ರುಪಾಯಿ ಉಳಿತಾಯವಾಗಲಿದೆ ಎನ್ನಲಾಗಿದೆ.