ಮುಂಬೈ(ಜ.13): 2020-21ರ ಸಾಲಿನ ರಣಜಿ ಟ್ರೋಫಿಯನ್ನು ಫೆಬ್ರವರಿಯಿಂದ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಜ.17ರಂದು ನಡೆಯಲಿರುವ ಸಭೆಯಲ್ಲಿ ನಿರ್ಧರಿಸುವ ನಿರೀಕ್ಷೆ ಇದೆ. 

‘ಸದ್ಯ ನಡೆಯುತ್ತಿರುವ ಮುಷ್ತಾಕ್‌ ಅಲಿ ಟಿ20 ರೀತಿಯಲ್ಲೇ ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಪಂದ್ಯಾವಳಿ ನಡೆಯಲಿದೆ. ಟಿ20ಗೆ ಆತಿಥ್ಯ ನೀಡಿರುವ 6 ನಗರಗಳಲ್ಲೇ ಪಂದ್ಯಗಳನ್ನು ನಡೆಸ ಲಾಗುತ್ತದೆ. ಈಗಿರುವ ರೀತಿಯಲ್ಲೇ 6 ಗುಂಪುಗಳು ಇರಲಿವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಎಲ್‌ಗೂ ಮೊದಲು ಗುಂಪು ಹಂತ, ಐಪಿಎಲ್‌ ಬಳಿಕ ನಾಕೌಟ್‌ ಹಂತ ನಡೆಸುವ ಸಾಧ್ಯತೆ ಇದೆ.

ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್‌ ಎದುರು ಕರ್ನಾಟಕಕ್ಕೆ ಹೀನಾಯ ಸೋಲು

ಶೇ.90% ರಷ್ಟು ಫೆಬ್ರವರಿಯಲ್ಲಿಯೇ ರಣಜಿ ಟ್ರೋಫಿ ಆರಂಭವಾಗುವ ಸಾಧ್ಯತೆಯಿದೆ. 6 ತಂಡಗಳ 5 ಗುಂಪು ಹಾಗೂ 8 ತಂಡಗಳನ್ನೊಳಗೊಂಡ ಒಂದು ಗುಂಪು ಮಾಡುವ ಚಿಂತನೆ ಬಿಸಿಸಿಐ ಮುಂದಿದೆ ಎಂದು ಮೂಲಗಳು ಖಚಿತಪಡಿಸಿವೆ. ಇದೇ ವೇಳೆ 14ನೇ ಆವೃತ್ತಿಯ ಐಪಿಎಲ್ ಟ್ರೋಫಿಗೂ ಮುನ್ನ ರಣಜಿ ಟ್ರೋಫಿ ಲೀಗ್ ಹಂತದ ಪಂದ್ಯಗಳು, ಐಪಿಎಲ್ ಪಂದ್ಯಗಳು ಮುಕ್ತಾಯವಾದ ಬಳಿಕ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್ ಹಾಗೂ ಫೈನಲ್‌ ಹೀಗೆ ನಾಕೌಟ್‌ ಪಂದ್ಯಗಳನ್ನು ಬಿಸಿಸಿಐ ಆಯೋಜಿಸಲಿದೆ ಎನ್ನಲಾಗಿದೆ.