ಮುಂಬೈ(ಮಾ.07): ಕ್ರಿಕೆಟ್‌ ಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಏಪ್ರಿಲ್ 9 ರಂದು ಐಪಿಎಲ್ 2021 ಆರಂಭವಾಗಲಿದ್ದು, ಮೇ 20ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೂಲಕ ಬರೋಬ್ಬರಿ ಎರಡು ತಿಂಗಳು ದೇಶಾದ್ಯಂತ ಐಪಿಎಲ್ ಫೀವರ್ ಆವರಿಸಲಿದೆ.

ಇನ್ನು ಏಪ್ರಿಲ್ 9 ರಂದು ಚೆನ್ನೈನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಕಾದಾಟದ ಮೂಲಕ ಈ ಸೀಸನ್‌ನ ಚೊಚ್ಚಲ ಪಂದ್ಯ ಆರಮಭಗೊಳ್ಳಲಿದೆ. ಇನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪ್ಲೇ ಆಫ್ ಹಾಗೂ ಮೇ 30ರಂದು ನಡೆಯಲಿರುವ ಈ ಸೀಜನ್‌ನ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. 

ಬರೋಬ್ಬರಿ ಎರಡು ವರ್ಷಗಳ ಬಳಿಕ ಐಪಿಎಲ್ ಪಂದ್ಯಗಳು ಭಾರತದಲ್ಲಿ ನಡೆಯಲಿದ್ದು, ಸಹಜವಾಗೇ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿಸಿದೆ. ಚೆನ್ನೈ, ಅಹಮದಾಬಾದ್ ಹೊರತುಪಡಿಸಿ ಬೆಂಗಳೂರು, ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾ ಮೈದಾನಗಳಲ್ಲೂ ಐಪಿಎಲ್ ಹಬ್ಬ ಆವರಿಸಲಿದೆ. 

ಒಟ್ಟು 56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಮುಂಬೈ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ತಲಾ 10 ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಪಂದ್ಯಗಳು 3:30 ಹಾಗೂ ಸಂಜೆ ಪಂದ್ಯಗಳು  7:30ಕ್ಕೆ ಆರಮಭಗೊಳ್ಳಲಿವೆ. 

ಕಳೆದ ವರ್ಷ ಕೊರೋನಾ ಹಾವಳಿ ನಡುವೆ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ದುಬೈನಲ್ಲಿ ಆಯೋಜಿಸಿದ್ದ ಪಂದ್ಯಗಳು ಯಶಸ್ವಿಯಾಗಿದ್ದವು. ಇದೇ ರೀತಿ ಈ ಬಾರಿಯ ಪಂದ್ಯಗಳು ಯಾವುದೇ ಅಡೆ ತಡೆ ಇಲ್ಲದೇ ನಡೆಯುವ ವಿಶ್ವಾಸ ಬಿಸಿಸಿಐ ಹೊಂದಿದೆ. 

ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ: