ಲಕ್ನೋ(ಫೆ.27): ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಭಾರತೀಯ ಮಹಿಳಾ ಕ್ರಿಕೆಟ್ ಮತ್ತೆ ಆರಂಭಗೊಳ್ಳುತ್ತಿದೆ. 5 ಏಕದಿನ ಹಾಗೂ 3 ಟಿ20 ಸರಣಿಗಳ ಪಂದ್ಯಕ್ಕಾಗಿ ಸೌತ್ ಆಫ್ರಿಕಾ ತಂಡ ಭಾರತ ಪ್ರವಾಸ ಮಾಡುತ್ತಿದೆ. ಮಾರ್ಚ್ 7 ರಿಂದ 23ರ ವರೆಗೆ ಲಕ್ನೋದಲ್ಲಿ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮಹಿಳಾ ಸರಣಿ ನಡೆಯಲಿದೆ.

ಜಸ್ಪ್ರೀತ್ ಮನವಿಗೆ ಸ್ಪಂದಿಸಿದ ಬಿಸಿಸಿಐ; 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅಲಭ್ಯ!.

ಸೌತ್ ಆಫ್ರಿಕಾ ವಿರುದ್ಧದ ಸರಣಿಗಾಗಿ ಬಿಸಿಸಿಐ ಏಕದಿನ ಹಾಗೂ ಟಿ20 ತಂಡ ಪ್ರಕಟಿಸಿದೆ. ಏಕದಿನ ಸರಣಿಗೆ ಮಿಥಾಲಿ ರಾಜ್ ಮುನ್ನಡೆಸಿದರೆ, ಟಿ20 ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿದ್ದಾರೆ. ಲಕ್ನೋದಲ್ಲಿ ಅಟಲ್ ಬಿಹಾರಿ ವಾಜಪೇಯಿ ಎಕಾನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ.

ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ!

ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಅಲಭ್ಯಕೆ ಕಾಡುತ್ತಿದೆ. ಇನ್ನು ಶಿಖಾ ಪಾಂಡೆ, ಎಕ್ತಾ ಬಿಸ್ಟ್ ಹಾಗೂ ತಾನಿಯಾ ಭಾಟಿಯಾ ಕೂಡ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಏಕದಿನ ತಂಡ:
ಮಿಥಾಲಿ ರಾಜ್(ನಾಯಕ), ಸ್ಮೃತಿ ಮಂದಾನ, ಜೇಮಿ ರೋಡ್ರಿಗೆಸ್, ಪೂನಮ್ ರಾವತ್, ಪ್ರಿಯಾ ಪೂನಿಯಾ, ಯಸ್ಟಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್, ಡಿ. ಹೆಮಲತಾ, ದೀಪ್ತಿ ಶರ್ಮಾ, ಸುಶ್ಮಾ ವರ್ಮಾ, ಶ್ವೇತಾ ವರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಜುಲನ್ ಗೋಸ್ವಾಮಿ, ಮಾನ್ಸಿ ಜೋಶಿ, ಪೂನಮ್ ಯಾದವ್, ಸಿ ಪ್ರಥ್ಯೂಶಾ, ಮೊನಿಕಾ ಪಟೇಲ್ 

ಟಿ20 ತಂಡ:
ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ಜೇಮಿ ರೋಡ್ರಿಗೆಸ್, ದೀಪ್ತಿ ಶರ್ಮಾ, ರಿಚಾ ಘೋಶ್, ಹರ್ಲಿನ್ ಡಿಯೋಲ್, ಸುಷ್ಮಾ ವರ್ಮಾ, ನಝಾತ್ ಪ್ರವೀಣ್, ಆಯುಶಿ ಸೋನಿ, ಅರುಂದತಿ ರೆಡ್ಡಿ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್,  ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಸಿ. ಪ್ರಥ್ಯೂಶಾ, ಸಿಮ್ರನ್ ದಿಲಲ್ ಬಹದ್ದೂರ್