ಕಿವೀಸ್ 'ಎ' ವಿರುದ್ದದ ಏಕದಿನ ಸರಣಿಗೆ ಭಾರತ 'ಎ' ಕ್ರಿಕೆಟ್ ತಂಡ ಪ್ರಕಟಭಾರತ 'ಎ' ಕ್ರಿಕೆಟ್‌ ತಂಡಕ್ಕೆ ಸಂಜು ಸ್ಯಾಮ್ಸನ್‌ಗೆ ನಾಯಕ ಪಟ್ಟನ್ಯೂಜಿಲೆಂಡ್‌ ‘ಎ’ ತಂಡದ ವಿರುದ್ಧದ 3 ಪಂದ್ಯಗಳ ಸರಣಿಗೆ ಭಾರತ 'ಎ' ತಂಡ ಪ್ರಕಟ

ನವದೆಹಲಿ(ಸೆ.17): ಸೆಪ್ಟೆಂಬರ್ 22ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್‌ ‘ಎ’ ತಂಡದ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ‘ಎ’ ತಂಡ ಪ್ರಕಟಿಸಲಾಗಿದ್ದು, ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಂಡರ್‌-19 ವಿಶ್ವಕಪ್‌ ವಿಜೇತ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಲ್ರೌಂಡರ್‌ ರಾಜ್‌ ಬಾವಾ, ಪೃಥ್ವಿ ಶಾ, ಕುಲ್ದೀನ್‌ ಸೆನ್‌, ತಿಲಕ್‌ ವರ್ಮಾ, ಕೆಎಸ್‌ ಭರತ್‌ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಂಡ: ಪೃಥ್ವಿ ಶಾ, ಅಭಿಮನ್ಯು ಈಶ್ವರನ್‌, ಗಾಯಕ್ವಾಡ್‌, ತ್ರಿಪಾಠಿ, ರಜತ್‌ ಪತಿದಾರ್‌, ಸಂಜು(ನಾಯಕ), ಭರತ್‌, ಕುಲ್ದೀಪ್‌ ಯಾದವ್‌, ಶಾಬಾಜ್‌ ಅಹ್ಮದ್‌, ರಾಹುಲ್‌ ಚಹರ್‌, ತಿಲಕ್‌, ಸೆನ್‌, ಶಾರ್ದೂಲ್‌, ಉಮ್ರಾನ್‌ ಮಲಿಕ್‌, ನವ್‌ದೀಪ್‌ ಸೈನಿ, ರಾಜ್‌.

ಟೆಸ್ಟ್‌: ಭಾರತಕ್ಕೆ ‘ಎ’ ತಂಡಕ್ಕೆ ಮೊದಲ ಇನ್ನಿಂಗ್‌್ಸ ಮುನ್ನಡೆ

ಬೆಂಗಳೂರು: ಸ್ಪಿನ್ನರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ನ್ಯೂಜಿಲೆಂಡ್‌ ‘ಎ’ ತಂಡದ ವಿರುದ್ಧದ 3ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ಇನ್ನಿಂಗ್‌್ಸ ಮುನ್ನಡೆ ಪಡೆದಿದೆ. ಮೊದಲ ಇನ್ನಿಂಗ್‌್ಸನಲ್ಲಿ 293ಕ್ಕೆ ಆಲೌಟಾಗಿದ್ದ ಭಾರತ, 2ನೇ ದಿನ ಪ್ರವಾಸಿ ತಂಡವನ್ನು 237ಕ್ಕೆ ಕಟ್ಟಿಹಾಕಿತು.

Duleep Trophy ಸೆಂಟ್ರಲ್ ಝೋನ್ ವಿರುದ್ದ ಆಕರ್ಷಕ ಶತಕ ಚಚ್ಚಿದ ಪೃಥ್ವಿ ಶಾ

ಮಾರ್ಕ್ ಚಾಪ್ಮನ್‌(92), ಹಾಗೂ ಸೀನ್‌ ಸೋಲಿಯಾ(51) ಮಾತ್ರ ಭಾರತೀಯ ಬೌಲರ್‌ಗಳ ಮುಂದೆ ಪ್ರತಿತೋಧ ತೋರಿದರು. ಡೇನ್‌ ಕ್ಲೇವರ್‌ 34 ರನ್‌ ಕೊಡುಗೆ ನೀಡಿದರು. ಸೌರಭ್‌ ಕುಮಾರ್‌ 48ಕ್ಕೆ 4, ರಾಹುಲ್‌ ಚಹರ್‌ 53ಕ್ಕೆ 3 ವಿಕೆಟ್‌ ಪಡೆದರು. ಬಳಿಕ 2ನೇ ಇನ್ನಿಂಗ್‌್ಸ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 40 ರನ್‌ ಕಲೆ ಹಾಕಿದ್ದು, ಒಟ್ಟು 96 ರನ್‌ ಮುನ್ನಡೆ ಪಡೆದಿದೆ. ನಾಯಕ ಪ್ರಿಯಾಂಕ್‌ ಪಾಂಚಾಲ್‌(17), ಋುತುರಾಜ್‌ ಗಾಯಕ್ವಾಡ್‌(18) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಅಂಡರ್ 19 ವಿಶ್ವಕಪ್‌ಗೆ ವೇಳಾಪಟ್ಟಿ ಸಿದ್ಧ

ದುಬೈ: ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ ವೇಳಾಪಟ್ಟಿಯನ್ನು ಐಸಿಸಿ ಶುಕ್ರವಾರ ಪ್ರಕಟಿಸಿದ್ದು, ಬಹುನಿರೀಕ್ಷಿತ ಟೂರ್ನಿ ದ.ಆಫ್ರಿಕಾದಲ್ಲಿ 2023ರ ಜನವರಿ 14ರಿಂದ 29ರ ವರೆಗೆ ನಡೆಯಲಿದೆ. ಟೂರ್ನಿಯಲ್ಲಿ 15 ದಿನಗಳ ಕಾಲ 41 ಪಂದ್ಯಗಳು ನಡೆಯಲಿದ್ದು, ಬೆನೊನಿ ಹಾಗೂ ಪಾಶ್‌ಚೆಸ್ಟೂ್ರಮ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. 

ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳು ನಾಲ್ಕು ಗುಂಪುಗಳನ್ನಾಡಿ ವಿಂಗಡಿಸಲಾಗಿದೆ. ಪ್ರತೀ ಗುಂಪಿನಿಂದ ತಲಾ 3 ತಂಡಗಳು ಸೂಪರ್‌ ಸಿಕ್ಸ್‌ ಲೀಗ್‌ ಹಂತಕ್ಕೆ ಪ್ರವೇಶಿಸಲಿವೆ. ಭಾರತ ತಂಡ ‘ಡಿ’ ಗುಂಪಿನಲ್ಲಿ ದ.ಆಫ್ರಿಕಾ, ಸ್ಟಾಟ್ಲೆಂಡ್‌, ಯುಎಇ ಜೊತೆ ಸ್ಥಾನ ಪಡೆದಿದೆ. ಭಾರತ. ಜ.14ಕ್ಕೆ ದ.ಆಫ್ರಿಕಾ, 16ಕ್ಕೆ ಯುಎಇ, 18ಕ್ಕೆ ಸ್ಕಾಟ್ಲೆಂಡ್‌ ವಿರುದ್ಧ ಸೆಣಸಾಡಲಿದೆ.

ಮಹಿಳಾ ಟಿ20: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸೋಲು

ಬ್ರಿಸ್ಟೊಲ್‌: ಭಾರತ ವಿರುದ್ಧದ 3ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ಮಹಿಳಾ ತಂಡ 7 ವಿಕೆಟ್‌ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲೂ ಗೆದ್ದಿದ್ದ ಇಂಗ್ಲೆಂಡ್‌ ಸರಣಿಯನ್ನು 2-1 ಅಂತರದಿಂದ ಕೈವಶಪಡಿಸಿಕೊಂಡಿದೆ. 

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 8 ವಿಕೆಟ್‌ಗೆ ಕೇವಲ 122 ರನ್‌ ಕಲೆ ಹಾಕಿತು. ತಂಡದ ಪರ ದೀಪ್ತಿ ಶರ್ಮಾ(24), ರಿಚಾ ಘೋಷ್‌(33) ಹಾಗೂ ಪೂಜಾ ವಸ್ತ್ರಾಕರ್‌(ಔಟಾಗದೆ 19) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಸುಲಭ ಗುರಿ ಬೆನ್ನತ್ತಿದ ಆತಿಥೇಯ ತಂಡ 18.2 ಓವರ್‌ಗಳಲ್ಲಿ ಜಯ ದಾಖಲಿಸಿತು. ಸೋಫಿ ಡಂಕ್ಲಿ(49), ಅಲೈಸ್‌ ಕ್ಯಾಪ್ಸಿ(ಔಟಾಗದೆ 38) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 3 ಪಂದ್ಯಗಳ ಏಕದಿನ ಸರಣಿ ಭಾನುವಾರ ಆರಂಭವಾಗಲಿದೆ.