Asianet Suvarna News Asianet Suvarna News

ಬಾಂಗ್ಲಾದೇಶ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಮತ್ತೆ ಶಕೀಬ್‌ ಅಲ್ ಹಸನ್ ನಾಯಕ!

* ಬಾಂಗ್ಲಾದೇಶ ಟೆಸ್ಟ್ ನಾಯಕರಾಗಿ ಶಕೀಬ್ ಅಲ್ ಹಸನ್ ನೇಮಕ

* ಮೂರನೇ ಬಾರಿಗೆ ಬಾಂಗ್ಲಾದೇಶ ಟೆಸ್ಟ್ ನಾಯಕರಾಗಿ ಶಕೀಬ್‌ಗೆ ಮಣೆ

* ಮೊಮಿನುಲ್‌ ಹಕ್‌ ನಾಯಕತ್ವ ತ್ಯಜಿಸಿದ ಕಾರಣ ಶಕೀಬ್‌ಗೆ ಪಟ್ಟ

Bangladesh Name All rounder Shakib Al Hasan Test captain For 3rd Time kvn
Author
Bengaluru, First Published Jun 3, 2022, 8:25 AM IST

ಢಾಕಾ(ಜೂ.03): ಬಾಂಗ್ಲಾದೇಶ ಟೆಸ್ಟ್‌ ತಂಡದ ನಾಯಕರಾಗಿ ಶಕೀಬ್‌ ಅಲ್‌ ಹಸನ್‌ (Bangladesh Test Captain Shakib Al Hasan) ಮತ್ತೊಮ್ಮೆ ನೇಮಕಗೊಂಡಿದ್ದಾರೆ. ಇದರೊಂದಿಗೆ ಶಕೀಬ್ ಮೂರನೇ ಬಾರಿಗೆ ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಮೊಮಿನುಲ್‌ ಹಕ್‌ ನಾಯಕತ್ವ ತ್ಯಜಿಸಿದ ಕಾರಣ, ಆ ಸ್ಥಾನಕ್ಕೆ ಶಕೀಬ್‌ರನ್ನು ನೇಮಿಸಲಾಗಿದೆ. ಲಿಟನ್ ದಾಸ್‌, ಬಾಂಗ್ಲಾದೇಶ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಎಡಗೈ ಬ್ಯಾಟರ್‌ ಮೊಮಿನುಲ್ ಹಕ್‌ (Mominul Haque), 2022ರಲ್ಲಿ ಆರು ಟೆಸ್ಟ್‌ ಪಂದ್ಯಗಳನ್ನಾಡಿ ಕೇವಲ 16.20ರ ಬ್ಯಾಟಿಂಗ್ ಸರಾಸರಿಯಲ್ಲಿ 162 ರನ್‌ಗಳನ್ನಷ್ಟೇ ಬಾರಿಸಿದ್ದರು. ಮೊಮಿನುಲ್ ಹಕ್ ನಾಯಕತ್ವದಲ್ಲಿ ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ದ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡವು 0-1 ಅಂತರದಲ್ಲಿ ಸೋಲು ಕಂಡಿತ್ತು. ಇದೀಗ 35 ವರ್ಷದ ಶಕೀಬ್ ಅಲ್ ಹಸನ್‌ ಮೂರನೇ ಬಾರಿಗೆ ಬಾಂಗ್ಲಾದೇಶ ಟೆಸ್ಟ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಇನ್ನು ಬಾಂಗ್ಲಾದೇಶ ತಂಡವು ಈ ತಿಂಗಳಾಂತ್ಯದಲ್ಲಿ ವೆಸ್ಟ್ ಇಂಡೀಸ್‌ ಇಂಡೀಸ್ ವಿರುದ್ದ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

2019ರಲ್ಲಿ ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದ ವಿಚಾರವನ್ನು ಮುಚ್ಚಿಟ್ಟಕಾರಣ ಐಸಿಸಿ ಶಕೀಬ್‌ರನ್ನು ನಿಷೇಧಗೊಳಿಸಿತ್ತು. ಆಗ ಅವರ ಬದಲು ಮೊಮಿನುಲ್‌ಗೆ ನಾಯಕತ್ವ ನೀಡಲಾಗಿತ್ತು. ಶಕೀಬ್ ಅಲ್ ಹಸನ್ ನಾಯಕತ್ವದಲ್ಲಿ ಬಾಂಗ್ಲಾದೇಶ 17 ಪಂದ್ಯಗಳಲ್ಲಿ 3 ಗೆಲುವು, 12 ಸೋಲುಗಳನ್ನು ಕಂಡಿತ್ತು. ಶಕೀಬ್‌ ಅಲ್ ಹಸನ್ 2009ರಲ್ಲಿ ಮೊದಲ ಬಾರಿಗೆ ನಾಯಕರಾಗಿದ್ದರು. ಬಳಿಕ ಮತ್ತೆ 2017ರಲ್ಲಿ ನಾಯಕತ್ವ ನೀಡಲಾಗಿತ್ತು. 14 ಟೆಸ್ಟ್‌ಗಳಲ್ಲಿ ಶಕೀಬ್‌ ತಂಡವನ್ನು ಮುನ್ನಡೆಸಿದ್ದಾರೆ.

ಇಂಗ್ಲೆಂಡ್‌ ದಾಳಿಗೆ ಕಿವೀಸ್‌ ತತ್ತರ: 132ಕ್ಕೆ ಆಲೌಟ್‌!

ಲಂಡನ್‌: ಜೇಮ್ಸ್‌ ಆ್ಯಂಡರ್‌ಸನ್‌ ಮುಂದಾಳತ್ವದ ಇಂಗ್ಲೆಂಡ್‌ನ ವೇಗದ ಬೌಲಿಂಗ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್‌್ಸನಲ್ಲಿ ಕೇವಲ 132 ರನ್‌ಗೆ ಆಲೌಟ್‌ ಆಗಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಕಿವೀಸ್‌ಗೆ ಆ್ಯಂಡರ್‌ಸನ್‌, ಬ್ರಾಡ್‌ ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮ್ಯಾಥ್ಯೂ ಪಾಟ್ಸ್‌ ಆಘಾತ ನೀಡಿದರು. 

Ind vs SA ಟಿ2​0 ಸರಣಿಯನ್ನಾಡಲು ಭಾರತಕ್ಕೆ ಬಂದಿಳಿದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ

12 ರನ್‌ಗೆ 4 ವಿಕೆಟ್‌ ಕಳೆದುಕೊಂಡ ಕಿವೀಸ್‌ ಚೇತರಿಸಿಕೊಳ್ಳಲಿಲ್ಲ. 45 ರನ್‌ಗೆ 7 ವಿಕೆಟ್‌ಗಳು ಪತನಗೊಂಡವು. ಕಾಲಿನ್‌ ಡಿ ಗ್ರಾಂಡ್‌ಹೋಮ್‌(42), ಟಿಮ್‌ ಸೌಥಿ(26) ಮತ್ತು ಟ್ರೆಂಟ್‌ ಬೌಲ್ಟ್‌(14) ಹೋರಾಟದ ನೆರವಿನಿಂದ ತಂಡ 100 ರನ್‌ ಗಡಿ ದಾಟಿತು. ಆ್ಯಂಡರ್ಸನ್‌ ಮತ್ತು ಪಾಟ್ಸ್‌ ತಲಾ 4, ಬ್ರಾಡ್‌ ಮತ್ತು ನಾಯಕ ಸ್ಟೋಕ್ಸ್‌ ತಲಾ 1 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 81 ರನ್‌ ಗಳಿಸಿದೆ.

Follow Us:
Download App:
  • android
  • ios