Asianet Suvarna News Asianet Suvarna News

ಟೆಸ್ಟ್‌: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಪ್ರಾಬಲ್ಯ

ಆತಿಥೇಯ ಶ್ರೀಲಂಕಾ ಎದುರು ಬಾಂಗ್ಲಾದೇಶವು ಮೊದಲ ಟೆಸ್ಟ್‌ನಲ್ಲಿ ಬೃಹತ್ ಮೊತ್ತ ಕಲೆಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

Bangladesh Cricket Team Driver Seat against Bangladesh  in 1st Test Pallekele kvn
Author
Pallekele, First Published Apr 23, 2021, 8:53 AM IST

ಪಲ್ಲೆಕಲ್ಲೆ(ಏ.23): ನಾಯಕ ಮೊಮಿನುಲ್‌ ಹಕ್‌(127) ಹಾಗೂ ನಜ್ಮುಲ್‌ ಹೊಸೈನ್‌(163) ಅಮೋಘ ಬ್ಯಾಟಿಂಗ್‌ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ 2ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 474 ರನ್‌ ಪೇರಿಸಿದೆ. ಈ ಮೂಲಕ ಪಂದ್ಯದ ಮೇಲೆ ಮೇಲುಗೈ ಸಾಧಿಸಿದೆ. 

ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್‌ಗೆ 302 ರನ್‌ ಗಳಿಸಿದ್ದ ಬಾಂಗ್ಲಾ, 2ನೇ ದಿನ ನಿಧಾನಗತಿಯ ಬ್ಯಾಟಿಂಗ್‌ ನಡೆಸಿತು. ಲಂಕಾ ಬೌಲರ್‌ಗಳನ್ನು ಕಾಡಿದ ಮೊಮಿನುಲ್‌, ನಜ್ಮುಲ್‌ ಜೋಡಿ 242 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಬ್ಯಾಡ್‌ಲೈಟ್‌ ಕಾರಣ 96 ನಿಮಿಷ ಮೊದಲೇ 2ನೇ ದಿನದಾಟ ಅಂತ್ಯಗೊಳಿಸಲಾಯಿತು.

ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಹರಸಾಹಸ ಪಟ್ಟರಾದರೂ ಯಶಸ್ವಿ ಸಿಕ್ಕಿದ್ದು ಮಾತ್ರ ಸ್ವಲ್ಪವೇ ಸ್ವಲ್ಪ. ಇದೀಗ ಮುಷ್ಫಿಕುರ್ ರಹೀಮ್‌(43*) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಲಿಟನ್‌ ದಾಸ್(25) 5ನೇ ವಿಕೆಟ್‌ಗೆ ಮುರಿಯದ 50 ರನ್‌ಗಳ ಜತೆಯಾಟ ನಿಭಾಯಿಸಿದ್ದು, ಬೃಹತ್ ಮೊತ್ತ ದಾಖಲಿಸಿ ಬಾಂಗ್ಲಾ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಐಪಿಎಲ್ 2021: ಬಲಿಷ್ಠ ಮುಂಬೈಗಿಂದು ಪಂಜಾಬ್‌ ಕಿಂಗ್ಸ್ ಸವಾಲು 

ಶ್ರೀಲಂಕಾ ಪರ ವಿಶ್ವ ಫರ್ನಾಂಡೋ 2 ವಿಕೆಟ್ ಕಬಳಿಸಿದರೆ,ಲಹಿರು ಕುಮಾರ ಹಾಗೂ ಧನಂಜಯ ಡಿಸಿಲ್ವಾ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

ಸ್ಕೋರ್‌: 
ಬಾಂಗ್ಲಾದೇಶ 474/4
(* ಎರಡನೇ ದಿನದಾಟದಂತ್ಯದ ವೇಳೆಗೆ)
 

Follow Us:
Download App:
  • android
  • ios