Asianet Suvarna News Asianet Suvarna News

'ಹೆಂಡ್ತಿ ಕೆಲಸ ಮಾಡಿದರೆ, ಸಮಾಜ ಹಾಳಾಗುತ್ತದೆ..' ವಿವಾದಾತ್ಮಕ ಪೋಸ್ಟ್‌ ಮಾಡಿದ ಕ್ರಿಕೆಟಿಗ

ಬಾಂಗ್ಲಾದೇಶವು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಎರಡು ಸೂಪರ್ 4 ಪಂದ್ಯಗಳಲ್ಲಿ ಸೋಲು ಅನುಭವಿಸಿದ ನಂತರ ಏಷ್ಯಾ ಕಪ್ 2023 ರ ಫೈನಲ್ ತಲುಪಲು ವಿಫಲವಾಗಿತ್ತು.
 

Bangladesh bowler Tanzim Hasan Sakib under fire over misogynist remarks san
Author
First Published Sep 19, 2023, 9:33 PM IST

ನವದೆಹಲಿ (ಸೆ.19): ಸೋಶಿಯಲ್ ಮೀಡಿಯಾದಲ್ಲಿ ಮಹಿಳಾ ದ್ವೇಷಿ ಪೋಸ್ಟ್‌ ಮಾಡುವ ಮೂಲಕ ಬಾಂಗ್ಲಾದೇಶದ ಯುವ ವೇಗಿ ವಿವಾದಕ್ಕೆ ಸಿಲುಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅದ್ಭುತ ಪಾದಾರ್ಪಣೆ ಮಾಡಿದ ಬೆನ್ನಲ್ಲಿಯೇ ಅವರು ಮಾಡಿರುವ ಪೋಸ್ಟ್‌ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲಿಯೇ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಬಾಂಗ್ಲಾ ವೇಗಿಗೆ ಎಚ್ಚರಿಕೆಯನ್ನೂ ನೀಡಿದೆ. ಕಳದ ಶುಕ್ರವಾರ ಏಷ್ಯಾಕಪ್‌ ಪಂದ್ಯದಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಾಲ್ಕನೇ ಎಸೆತದಲ್ಲಿಯೇ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಅವರ ವಿಕೆಟ್‌ ಉರುಳಿಸುವ ಮೂಲಕ ಮಿಂಚಿದ್ದ 20 ವರ್ಷದ ವೇಗಿ ತಂಜೀಮ್‌ ಹಸನ್‌ ಶಕೀಬ್‌, ಕೊನೆಯ ಓವರ್‌ನಲ್ಲಿ ಅದ್ಭುತ ದಾಳಿ ಸಂಘಟಿಸಿ ತಂಡದ ಗೆಲುವಿಗೂ ಕಾರಣರಾಗಿದ್ದರು. ಆದರೆ, ಯುವ ವೇಗಿ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ಗೆ ಮಹಿಳಾ ಹಕ್ಕುಗಳ ಕಾರ್ಯಕರ್ತರು ಹಾಗೂ ಸ್ತ್ರೀವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  2020 ರಲ್ಲಿ ಬಾಂಗ್ಲಾದೇಶ ಅಂಡರ್-19 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ ನಂತರ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ತಂಜೀಮ್‌, "ಹೆಂಡತಿ ಕೆಲಸ ಮಾಡುತ್ತಿದ್ದರೆ, ಗಂಡನ ಹಕ್ಕುಗಳನ್ನು ನಿಗದಿಯಂತೆ ಸಿಗೋದಿಲ್ಲ" ಎಂದು ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

.“ಹೆಂಡತಿ ಕೆಲಸ ಮಾಡುತ್ತಿದ್ದರೆ, ಮಗುವಿನ ಹಕ್ಕುಗಳನ್ನು ಖಾತರಿಪಡಿಸುವುದಿಲ್ಲ. ಹೆಂಡತಿ ಕೆಲಸ ಮಾಡಿದರೆ ಅವಳ ಸೌಂದರ್ಯ ಹಾಳಾಗುತ್ತದೆ. ಹೆಂಡತಿ ಕೆಲಸ ಮಾಡಿದರೆ ಸಂಸಾರ ಹಾಳಾಗುತ್ತದೆ. ಹೆಂಡತಿ ಕೆಲಸ ಮಾಡಿದರೆ ಮುಸುಕು ಹಾಳಾಗುತ್ತದೆ. ಹೆಂಡತಿ ದುಡಿದರೆ ಸಮಾಜ ಹಾಳಾಗುತ್ತದೆ' ಎಂದು ಫೇಸ್‌ಬುಕ್‌ನಲ್ಲಿ ಅವರು ಬರೆದುಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಕಾರಣವಾದ ಗಾರ್ಮೆಂಟ್ಸ್‌ ಫ್ಯಾಕ್ಟರಿಗಳಲ್ಲಿ ಮಹಿಳೆಯರೇ ದೊಡ್ಡ ಪ್ರಮಾಣದಲ್ಲಿ ದುಡಿಯುತ್ತಿದ್ದಾರೆ. ಇದರ ನಡುವೆ ಮಹಿಳೆಯರ ಬಗ್ಗೆ ಮಾಡಿರುವ ಈ ಕಾಮೆಂಟ್‌ಗಳು ವಿವಾದಕ್ಕೆ ಕಾರಣವಾಗಿದೆ.

ಇನ್ನೊಂದು ಪೋಸ್ಟ್‌ನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಪುರುಷ ಸ್ನೇಹಿತರೊಂದಿಗೆ ಮುಕ್ತವಾಗಿ ಬೆರೆಯಲು ಒಗ್ಗಿಕೊಂಡಿರುವ ಮಹಿಳೆಯನ್ನು ಮದುವೆಯಾದರೆ ಅವರ ಪುತ್ರರು ಸಾಧಾರಣ ತಾಯಿಯನ್ನು ಹೊಂದಿರುವುದಿಲ್ಲ ಎಂದು ತಂಜಿಮ್ ಪುರುಷರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಪೋಸ್ಟ್‌ ಮಾಡಿದ್ದರು.

ಇವರ ಈ ಕಾಮೆಂಟ್ಸ್‌ಗಳು ಪ್ಯಾರಿಸ್‌ ಮೂಲದ ಸ್ತೀವಾದಿ ಲೇಖಕಿ ಜನ್ನತುನ್ ನಯೀಮ್ ತೀವ್ರವಾಗಿ ಟೀಕಿಸಿದ್ದಾರೆ. ಇಂದು ಬಾಂಗ್ಲಾದೇಶದ ತಂಡದ ಆಟಗಾರರು ಧರಿಸುತ್ತಿರುವ ಜೆರ್ಸಿಗಳನ್ನುಹೆಚ್ಚಾಗಿ  ಮಹಿಳೆಯರೇ ಇರುವ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ ಎನ್ನುವ ಅರಿವು ಇದ್ದುಕೊಂಡು ಮಾತನಾಡಬೇಕು ಎಂದಿದ್ದಾರೆ. "ನಿಮ್ಮ ತಾಯಿಯನ್ನು ನೀವು ಸಾಮಾನ್ಯ ಮನುಷ್ಯ ಎಂದು ಪರಿಗಣಿಸದಿದ್ದಕ್ಕಾಗಿ ನಾನು ನಿಮ್ಮ ಬಗ್ಗೆ ವಿಷಾದಿಸುತ್ತೇನೆ" ಎಂದು ಅವರು ಬರೆದಿದದ್ದಾರೆ.

'ನನಗೆ ಆ ಸೀನ್‌ನಲ್ಲಿ ನಟಿಸೋಕೆ ಇಷ್ಟ ಇರ್ಲಿಲ್ಲ, ಹೇಸಿಗೆ ಅನಿಸಿತ್ತು..' ಮೊನಾಲಿಸಾ 'ಸದಾ' ನೇರ ಮಾತು!

ಇನ್ನೊಂದೆಡೆ ಲೇಖಕ ಸ್ವಕ್ರಿಟೊ ನೋಮನ್, ಇದು ಬಹಳ ಬೇಸರವದ ವಿಚಾರ ಎಂದು ಹೇಳಿದ್ದಾರೆ. ಅದಲ್ಲದೆ, ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ತನ್ನ ಆಟಗಾರ ತಂಜೀಮ್‌ನಿಂದ ದೇಶದ ಮಹಿಳೆರಿಗೆ ಕ್ಷಮೆ ಕೇಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪತ್ರಕರ್ತ ಮೆಜ್ಬೌಲ್ ಹಕ್ ಕೂಡ ಪ್ರತಿಕ್ರಿಯೆ ನೀಡಿದ್ದು,  “ಇಂತಹ ವಿಕೃತ ರೂಪದ ಸ್ತ್ರೀದ್ವೇಷದ ಸ್ಥಿತಿಯು ಸ್ವೀಕಾರಾರ್ಹವಲ್ಲ. ಅವರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಆತ ಟೀಕೆಗೆ ಅರ್ಹ' ಎಂದಿದ್ದಾರೆ.

ಮುಖೇಶ್‌ ಅಂಬಾನಿ ಮನೆಗೆ ಬಂದ ಗಣಪ, ಕುಟುಂಬ ಸಮೇತ ದರ್ಶನ ಪಡೆದ ರಾಜ್‌ ಠಾಕ್ರೆ!


ಇನ್ನೊಂದೆಡೆ ಬಿಸಿಬಿ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದು, ಮೇಲ್ನೋಟಕ್ಕೆ ಇಂಥ ಪೋಸ್ಟ್‌ ಹಾಕಿರುವುದು ಸಾಬೀತಾಗಿರುವ ಕಾರಣ, ತಂಜೀಮ್‌ಗೆ ಎಚ್ಚರಿಕೆಯನ್ನೂ ನೀಡಿದೆ.“ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ ಎಂದು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆ ಮುಖ್ಯಸ್ಥ ಜಲಾಲ್ ಯೂನಸ್ ತಿಳಿಸಿದ್ದಾರೆ.

Follow Us:
Download App:
  • android
  • ios