ಟ್ರಯಲ್ಸ್‌ಗೆ ಬನ್ನಿ: ವಿನೇಶ್, ಬಜರಂಗ್, ಸಾಕ್ಷಿಗೆ ಆಹ್ವಾನ
ಮಾ.10, 11ಕ್ಕೆ ನವದೆಹಲಿಯಲ್ಲಿ ಟ್ರಯಲ್ಸ್ ನಡೆಯಲಿದ್ದು, ಈ ಮೂಲಕ ಏಷ್ಯನ್ ಕುಸ್ತಿ ಕೂಟ, ಏಷ್ಯನ್ ಒಲಿಂಪಿಕ್ಸ್ ಗೇಮ್ಸ್ ಅರ್ಹತಾ ಟೂರ್ನಿ ಕುಸ್ತಿಪಟುಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಡಬ್ಲ್ಯುಎಫ್‌ಐ ತಿಳಿಸಿದೆ.
ನವದೆಹಲಿ: ಭಾರತದ ತಾರಾ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್‌ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಆಹ್ವಾನ ನೀಡಿದೆ.
ಮಾ.10, 11ಕ್ಕೆ ನವದೆಹಲಿಯಲ್ಲಿ ಟ್ರಯಲ್ಸ್ ನಡೆಯಲಿದ್ದು, ಈ ಮೂಲಕ ಏಷ್ಯನ್ ಕುಸ್ತಿ ಕೂಟ, ಏಷ್ಯನ್ ಒಲಿಂಪಿಕ್ಸ್ ಗೇಮ್ಸ್ ಅರ್ಹತಾ ಟೂರ್ನಿ ಕುಸ್ತಿಪಟುಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಡಬ್ಲ್ಯುಎಫ್‌ಐ ತಿಳಿಸಿದೆ.
ಫುಟ್ಬಾಲ್: ಮಣಿಪುರ ವಿರುದ್ಧ ಕರ್ನಾಟಕ ತಂಡಕ್ಕೆ ಸೋಲು
ಯೂಪಿಯಾ(ಅರುಣಾಚಲ ಪ್ರದೇಶ): 77ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಫೈನಲ್ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಮವಾರ ಮಣಿಪುರ ವಿರುದ್ಧ 0-1 ಗೋಲುಗಳಿಂದ ಸೋಲನುಭವಿಸಿದೆ. ಇದರೊಂದಿಗೆ ರಾಜ್ಯ ತಂಡ ಮೊದಲ ಗೆಲುವಿಗಾಗಿ ಮತ್ತಷ್ಟು ಸಮಯ ಕಾಯಬೇಕಿದೆ. ‘ಬಿ’ ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ರಾಜ್ಯ ತಂಡ ಕ್ರಮವಾಗಿ ಡೆಲ್ಲಿ ಹಾಗೂ ಮಿಜೋರಾಂ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಸೋಮವಾರದ ಪಂದ್ಯದಲ್ಲೂ ರಾಜ್ಯ ತಂಡ ನೀರಸ ಪ್ರದರ್ಶನ ನೀಡಿ ಸೋಲನುಭವಿಸಿತು. ಗುಂಪಿನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿರುವ ಕರ್ನಾಟಕ ಗುರುವಾರ ರೈಲ್ವೇಸ್ ವಿರುದ್ಧ ಸೆಣಸಾಡಲಿದೆ.
Pro Kabaddi League ಪಾಟ್ನಾ ಪೈರೇಟ್ಸ್, ಹರ್‍ಯಾಣ ಸ್ಟೀಲರ್ಸ್ ಸೆಮಿಫೈನಲ್‌ಗೆ ಲಗ್ಗೆ
ಮಾ.28ರಿಂದ ಬೆಂಗ್ಳೂರಲ್ಲಿ ಬಾಸ್ಕೆಟ್‌ಬಾಲ್ ಟೂರ್ನಿ
ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ(ಕೆಎಸ್‌ಬಿಬಿಎ)ಯ ಸಹಭಾಗಿತ್ವದಲ್ಲಿ ಸಹಕಾರ ನಗರ ಬಾಸ್ಕೆಟ್‌ಬಾಲ್ ಕ್ಲಬ್ ರಾಜ್ಯ ಮಟ್ಟದ ಕೆಬಿಜಿ ಕಪ್ ಬಾಸ್ಕೆಟ್‌ಬಾಲ್ ಟೂರ್ನಿಯನ್ನು ಫೆ.28ರಿಂದ ಮಾ.3ರ ವರೆಗೆ ನಡೆಸಲಿದೆ. ಪಂದ್ಯಗಳಿಗೆ ಕೊಡಿಗೇಹಳ್ಳಿ ಗೇಟ್ ಸಮೀಪದ ಸಹಕಾರ ನಗರ ಬಾಸ್ಕೆಟ್‌ಬಾಲ್ ಮೈದಾನ ಆತಿಥ್ಯ ವಹಿಸಲಿದೆ. ಪುರುಷರ ವಿಭಾಗದಲ್ಲಿ 18, ಮಹಿಳಾ ವಿಭಾಗದಲ್ಲಿ 9 ತಂಡಗಳು ಪಾಲ್ಗೊಳ್ಳಲಿವೆ. ಹೆಚ್ಚಿನ ಮಾಹಿತಿಗಾಗಿ ಅರುಣ್‌ಕುಮಾರ್(9448212519) ಅಥವಾ ಮೋಹನ್(7618745331) ಅವರನ್ನು ಸಂಪರ್ಕಿಸಬಹುದು ಎಂದು ಕೆಎಸ್‌ಬಿಬಿಎ ಪ್ರಕಟಣೆ ತಿಳಿಸಿದೆ.
ಏಷ್ಯಾ ಆರ್ಚರಿ ಕೂಟದಲ್ಲಿ ಭಾರತಕ್ಕೆ10 ಸ್ವರ್ಣ ಪದಕ
ಬಗ್ದಾದ್: ಏಷ್ಯಾ ಕಪ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದೀಪಿಕಾ ಕುಮಾರಿ 2 ಚಿನ್ನದ ಪದಕ ಗೆದ್ದಿದ್ದಾರೆ. ಭಾರತಕ್ಕೆ ಒಟ್ಟಾರೆ 14 ಪದಕಗಳು ಲಭಿಸಿವೆ. ಕೊನೆ ದಿನ ಭಾರತೀಯರು ಪ್ರಾಬಲ್ಯ ಸಾಧಿಸಿದ್ದು, ಎಲ್ಲಾ 7 ಫೈನಲ್‌ಗಲ್ಲಿ ಜಯಗಳಿಸಿದರು. ಒಟ್ಟಾರೆ 10 ಚಿನ್ನ, 3 ಬೆಳ್ಳಿ, 1 ಕಂಚಿನೊಂದಿಗೆ ಭಾರತ ಅಭಿಯಾನ ಕೊನೆಗೊಳಿಸಿತು. ದೀಪಿಕಾ ರೀಕರ್ವ್ ವೈಯಕ್ತಿಕ, ತಂಡ ವಿಭಾಗದಲ್ಲಿ ಚಿನ್ನ ಗೆದ್ದರು. ಪುರುಷ, ಮಿಶ್ರ ತಂಡಗಳಿಗೂ ಬಂಗಾರ ಲಭಿಸಿತು.