ಪರ್ತ್(ಮಾ.21): ಆಸ್ಪ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, ಐಪಿಎಲ್‌ 13ನೇ ಆವೃತ್ತಿ ನಡೆದರೆ ಪಾಲ್ಗೊಳ್ಳಲಿದ್ದಾರೆ ಎಂದು ಅವರ ವ್ಯವಸ್ಥಾಪಕ ಖಚಿತಪಡಿಸಿದ್ದಾರೆ. 

IPL 2020: ಹೊಸ ನಾಯಕನ ನೇಮಿಸಿದ ಸನ್‌ರೈಸರ್ಸ್ ಹೈದರಾಬಾದ್!

ಆಸ್ಪ್ರೇಲಿಯಾ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡದಿರಲು ಕ್ರಿಕೆಟ್‌ ಆಸ್ಪ್ರೇಲಿಯಾ ಚಿಂತನೆ ನಡೆಸುತ್ತಿದೆ ಎನ್ನುವ ಸುದ್ದಿ ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಇದೇ ವೇಳೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯ ‘ದ ಹಂಡ್ರೆಡ್‌ ಲೀಗ್‌’ನಲ್ಲಿ ಆಡುವುದಿಲ್ಲ ಎಂದು ವಾರ್ನರ್‌ ತಿಳಿಸಿದ್ದಾರೆ. ಟೂರ್ನಿ ನಡೆಯುವ ಸಮಯದಲ್ಲಿ ಜಿಂಬಾಬ್ವೆ ವಿರುದ್ಧ ಸೀಮಿತ ಓವರ್‌ ಸರಣಿ ನಡೆಯಲಿರುವ ಕಾರಣ, ರಾಷ್ಟ್ರೀಯ ತಂಡದ ಸೇವೆಗೆ ಮೊದಲ ಆದ್ಯತೆ ನೀಡುವುದಾಗಿ ವಾರ್ನರ್‌ ಹೇಳಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ವಿಶ್ವ ಟಿ20ಗೂ ಕೊರೋನಾ ಅಡ್ಡಿ?

ಟಿ20 ಕ್ರಿಕೆಟನ್ನು ಮತ್ತಷ್ಟು ರೋಚಕಗೊಳಿಸುವ ನಿಟ್ಟಿನಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ‘ದಿ ಹಂಡ್ರೆಡ್‌’ ಹೆಸರಿನಲ್ಲಿ 100 ಎಸೆತಗಳ ಟೂರ್ನಿಯನ್ನು ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಲು ಕಾತರಿಸುತ್ತಿದೆ. ಜು.17ರಿಂದ ಆ.15ರ ವರೆಗೂ ಪುರುಷರ, ಜು.22ರಿಂದ ಆ.14ರ ವರೆಗೂ ಮಹಿಳಾ ಟೂರ್ನಿ ನಡೆಯಲಿದೆ. ಎರಡೂ ಟೂರ್ನಿಗಳಲ್ಲಿ ತಲಾ 8 ತಂಡಗಳು ಪಾಲ್ಗೊಳ್ಳಲಿವೆ. ತಾರಾ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಆಡುವುದಾಗಿ ಖಚಿತಪಡಿಸಿದ್ದಾರೆ.

ಕೊರೋನಾ ಸೋಂಕು ಎಷ್ಟುಬೇಗ ನಿಯಂತ್ರಣಕ್ಕೆ ಬರುತ್ತದೆಯೋ, ಕ್ರಿಕೆಟ್‌ ಯಾವಾಗ ಶುರುವಾಗತ್ತೋ ಎಂದು ಆಟಗಾರರು, ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಸೋಂಕಿನ ಭೀತಿ ಮತ್ತಷ್ಟುತಿಂಗಳುಗಳ ಕಾಲ ಮುಂದುವರಿದರೆ, ಕ್ರಿಕೆಟ್‌ ಜಗತ್ತು ಅಪಾರ ಪ್ರಮಾಣದ ನಷ್ಟಅನುಭವಿಸುವುದು ನಿಶ್ಚಿತ.