Asianet Suvarna News Asianet Suvarna News

100ನೇ ಟೆಸ್ಟ್‌ ಪಂದ್ಯದಲ್ಲಿ 200 ಬಾರಿಸಿದ ಡೇವಿಡ್ ವಾರ್ನರ್‌..! ಹಲವು ದಾಖಲೆಗಳು ನುಚ್ಚುನೂರು..!

* ನೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ ಡೇವಿಡ್ ವಾರ್ನರ್‌
* ಮೂರು ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಓಪನ್ನರ್ ವಾರ್ನರ್
* ದಕ್ಷಿಣ ಆಫ್ರಿಕಾ ಎದುರು ಮೊದಲ ಇನಿಂಗ್ಸ್‌ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ

Australian Opener David Warner becomes second batter to score a 200 in 100th Test kvn
Author
First Published Dec 27, 2022, 2:02 PM IST

ಮೆಲ್ಬರ್ನ್‌(ಡಿ.27): ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್‌, ಟೆಸ್ಟ್‌ ಕ್ರಿಕೆಟ್‌ನ ನೂರನೇ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಜಗತ್ತಿನ ಎರಡನೇ ಹಾಗೂ ಶತಕ ಸಿಡಿಸಿದ 10ನೇ ಬ್ಯಾಟರ್‌ ಎನ್ನುವ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಶತಕದ ಬರ ಅನುಭವಿಸುತ್ತಾ ಬಂದಿದ್ದ ಡೇವಿಡ್ ವಾರ್ನರ್‌, ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಸ್ಮರಣೀಯ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಇದು, ಡೇವಿಡ್ ವಾರ್ನರ್‌ ಪಾಲಿಗೆ 25ನೇ ಟೆಸ್ಟ್‌ ಶತಕವಾಗಿದ್ದು, ಮೂರನೇ ಟೆಸ್ಟ್ ದ್ವಿಶತಕ ಕೂಡಾ ಇದಾಗಿದೆ. ಇದರೊಂದಿಗೆ ನೂರನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಜಗತ್ತಿನ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಡೇವಿಡ್ ವಾರ್ನರ್ ಪಾತ್ರರಾಗಿದ್ದರು. ಈ ಮೊದಲು ಜೋ ರೂಟ್ ತಮ್ಮ ನೂರನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದ್ದರು. ಇದೀಗ ವಾರ್ನರ್ ಕೂಡಾ ಅದೇ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಇನ್ನು ಡೇವಿಡ್‌ ವಾರ್ನರ್‌, ತಮ್ಮ ನೂರನೇ ಏಕದಿನ ಹಾಗೂ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ಜಗತ್ತಿನ ಎರಡನೇ ಬ್ಯಾಟರ್ ಎನ್ನುವ ದಾಖಲೆಗೂ ಪಾತ್ರರಾಗಿದ್ದಾರೆ. ಈ ಮೊದಲು ವೆಸ್ಟ್‌ ಇಂಡೀಸ್‌ನ ಗಾರ್ಡನ್‌ ಗ್ರೀನಿಡ್ಜ್‌ ತಮ್ಮ ನೂರನೇ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇದೇ ವೇಳೆ ವಾರ್ನರ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 8000+ ರನ್ ಬಾರಿಸಿದ 8ನೇ ಆಸ್ಟ್ರೇಲಿಯಾದ ಬ್ಯಾಟರ್ ಎನ್ನುವ ಕೀರ್ತಿಗೆ ವಾರ್ನರ್‌ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾಗೆ 197 ರನ್‌ಗಳ ಮುನ್ನಡೆ: 

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ದಕ್ಷಿಣ ಆಫ್ರಿಕಾ ತಂಡವು 189 ರನ್‌ಗಳಿಗೆ ಸರ್ವಪತನ ಕಂಡಿತು. ಇದಾದ ಬಳಿಕ ಮೊದಲ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಉಸ್ಮಾನ್ ಖವಾಜ ಹಾಗೂ ಮಾರ್ನಸ್ ಲಬುಶೇನ್ ವಿಕೆಟ್ ಕಳೆದುಕೊಂಡಿತಾದರೂ, ಇದಾದ ಬಳಿಕ ಮೂರನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಜೋಡಿ 239 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಟೀವ್ ಸ್ಮಿತ್, 85 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೇ, ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, 254 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 200 ರನ್ ಬಾರಿಸಿ ರಿಟೈರ್ಡ್‌ಹರ್ಟ್‌ ಆದರು. 

ಭಾರತ ಕ್ರಿಕೆಟ್ ಆಡೋದು ನಿಲ್ಲಿಸಿದರೆ ನಿಮ್ಮ ಪಾಡೇನು? ಟ್ರೋಲ್ ಮಾಡಲೆತ್ನಿಸಿದ ಪತ್ರಕರ್ತನಿಗೆ ಅಶ್ವಿನ್ ಛಾಟಿ ಏಟು!

ಇನ್ನು ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 6 ರನ್ ಬಾರಿಸಿ ರಿಟೈರ್ಡ್‌ಹರ್ಟ್ ಆದರು. ಸದ್ಯ ಟ್ರಾವಿಸ್ ಹೆಡ್(48) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ(09) ರನ್ ಬಾರಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸದ್ಯ ಆಸ್ಟ್ರೇಲಿಯಾ ತಂಡವು ಮೆಲ್ಬರ್ನ್‌ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯದ ವೇಳೆಗೆ  3 ವಿಕೆಟ್ ಕಳೆದುಕೊಂಡು 386 ರನ್ ಬಾರಿಸಿದ್ದು, ಒಟ್ಟಾರೆ 197 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಮೂಲಕ ಒಟ್ಟಾರೆ 197 ರನ್‌ಗಳ ಮುನ್ನಡೆ ಸಾಧಿಸಿದೆ.

Follow Us:
Download App:
  • android
  • ios