ಸಿಡ್ನಿ(ಅ.28): ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಮಿಚೆಲ್‌ ಜಾನ್ಸನ್‌ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಗಿ ಸ್ವತಃ ಮಿಚೆಲ್ ಜಾನ್ಸನ್‌ ಹೇಳಿದ್ದಾರೆ. 

2018ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೆ. ಆ ಬಳಿಕ ಇತರೆ ವಿಷಯಗಳ ಕಡೆಗೆ ಗಮನಹರಿಸಿದ ನಂತರ ಖಿನ್ನತೆಯಿಂದ ದೂರ ಆದೆ ಎಂದು ಜಾನ್ಸನ್‌ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.

ಆಸೀಸ್ ಮಾಜಿ ಎಡಗೈ ವೇಗಿ 2011ರ ಆ್ಯಷಸ್ ಸರಣಿಯನ್ನು ತಾವು ಅಷ್ಟು ಎಂಜಾಯ್ ಮಾಡಿರಲಿಲ್ಲ ಎಂದು ಮಿಚೆಲ್ ಜಾನ್ಸನ್ ಸತ್ಯ ಒಪ್ಪಿಕೊಂಡಿದ್ದಾರೆ. ಇದೇ ವೇಳೆ 2013-14ನೇ ಆವೃತ್ತಿಯ ಆ್ಯಷಸ್ ಸರಣಿಯಲ್ಲಿ 5 ಪಂದ್ಯಗಳಲ್ಲಿ 37 ವಿಕೆಟ್ ಕಬಳಿಸಿ ಮಿಂಚಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಹುಟ್ಟು ಹಬ್ಬದಂದು ಅರ್ಧಶತಕ: ಈ ಸಾಧನೆ ಮಾಡಿದ 2ನೇ ಕ್ರಿಕೆಟಿಗ ಡೇವಿಡ್ ವಾರ್ನರ್..!‌

73 ಟೆಸ್ಟ್‌ ಪಂದ್ಯಗಳಿಂದ 313 ವಿಕೆಟ್‌ ಪಡೆದಿರುವ ಜಾನ್ಸನ್‌ 2015ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಮಿಚೆಲ್ ಜಾನ್ಸನ್ 2015ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದದ್ಯರಾಗಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 153 ಪಂದ್ಯಗಳನ್ನಾಡಿ 239 ಹಾಗೂ 30 ಟಿ20 ಪಂದ್ಯಗಳನ್ನಾಡಿ 38 ವಿಕೆಟ್ ಕಬಳಿಸಿದ್ದಾರೆ.