ಮೆಲ್ಬರ್ನ್‌[ಡಿ.31]: ಆಸ್ಪ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಶಕದ ಟೆಸ್ಟ್ ತಂಡವನ್ನು ಪ್ರಕಟಿಸಿದ್ದು, ಏಕೈಕ ಭಾರತೀಯ ಕ್ರಿಕೆಟಿಗನಿಗೆ ಸ್ಥಾನ ನೀಡಿದ್ದಾರೆ. ಈ ತಂಡದ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದಾರೆ.

ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!

ಹೌದು, ತಾವು ಹೆಸರಿಸಿರುವ ದಶಕದ ಟೆಸ್ಟ್‌ ತಂಡಕ್ಕೆ ವಿರಾಟ್‌ ಕೊಹ್ಲಿಯನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ತಂಡದಲ್ಲಿರುವ ಏಕೈಕ ಭಾರತೀಯ ಆಟಗಾರ ಕೊಹ್ಲಿ. ‘ಎಲ್ಲರೂ ದಶಕದ ತಂಡ ಪ್ರಕಟಿಸುತ್ತಿದ್ದಾರೆ. ನನ್ನದೂ ಒಂದು ಇರಲಿ’ ಎಂದು ಪಾಂಟಿಂಗ್‌ ಟ್ವೀಟ್‌ ಮಾಡಿದ್ದಾರೆ. 

ಪಾಂಟಿಂಗ್ ದಶಕದ ತಂಡದಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಆಲಿಸ್ಟರ್ ಕುಕ್ ಹಾಗೂ ಡೇವಿಡ್ ವಾರ್ನರ್ ಆರಂಭಿಕರಾಗಿದ್ದಾರೆ. ಆ ಬಳಿಕ ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವಿಕೆಟ್ ಕೀಪರ್ ಪಾತ್ರವನ್ನು ಕುಮಾರ ಸಂಗಕ್ಕರ ನಿಭಾಯಿಸಿದರೆ, ಆಲ್ರೌಂಡರ್ ಕೋಟಾದಲ್ಲಿ ಬೆನ್ ಸ್ಟೋಕ್ಸ್ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್’ಸನ್ ವೇಗದ ಬೌಲಿಂಗ್ ಸಾರಥ್ಯ ವಹಿಸಿದರೆ, ಸ್ಪಿನ್ನರ್ ಆಗಿ ನೇಥನ್ ಲಯನ್ ಸ್ಥಾನ ಪಡೆದಿದ್ದಾರೆ.  

ಪಂಟರ್ ಆಯ್ಕೆ ಮಾಡಿದ 11 ಆಟಗಾರರಿರುವ ತಂಡದಲ್ಲಿ 7 ಆಟಗಾರರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದವರಾಗಿದ್ದಾರೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. 4-5ನೇ ಶ್ರೇಯಾಂಕದಲ್ಲಿರುವ ತಂಡದಿಂದ 7 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ನಂ.1 ಟೆಸ್ಟ್ ಶ್ರೇಯಾಂಕಿತ ತಂಡದಿಂದ ಕೇವಲ ಒಬ್ಬರು ಮಾತ್ರ ಸ್ಥಾನ ನೀಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೈಬಿಟ್ಟಿದ್ದೇಕೆ. ಅಶ್ವಿನ್ ಅವರನ್ನು ಬಿಟ್ಟು ಲಯನ್’ಗೆ ಯಾವ ಆಧಾರದಲ್ಲಿ ಅವಕಾಶ ನೀಡಲಾಗಿದೆ ಎಂದೆಲ್ಲ ಪಾಂಟಿಂಗ್ ಅವರನ್ನು ಪ್ರಶ್ನಿಸಿದ್ದಾರೆ.  

ಪಾಂಟಿಂಗ್ ಹೆಸರಿರುವ ತಂಡದ ಹೀಗಿದೆ.

ತಂಡ: ವಾರ್ನರ್‌, ಕುಕ್‌, ವಿಲಿಯಮ್ಸನ್‌, ಸ್ಟೀವ್‌ ಸ್ಮಿತ್‌, ಕೊಹ್ಲಿ(ನಾಯಕ), ಸಂಗಕ್ಕಾರ(ವಿಕೆಟ್‌ ಕೀಪರ್‌), ಸ್ಟೋಕ್ಸ್‌, ಸ್ಟೇನ್‌, ಲಯನ್‌, ಬ್ರಾಡ್‌, ಆ್ಯಂಡರ್‌ಸನ್‌.