IPL Auction 2024: ಈ ಬಾರಿ ₹20 ಕೋಟಿಗೆ ಹರಾಜಾಗ್ತಾರಾ ಈ ಆಸೀಸ್ ಕ್ರಿಕೆಟಿಗ..?
ಕ್ರಿಕೆಟ್ ಜಗತ್ತಿನ ಶ್ರೀಮಂತ ಟೂರ್ನಿ IPLನ ಮಿನಿ ಆಕ್ಷನ್ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 19ರಂದು ದುಬೈನಲ್ಲಿ ಆಟಗಾರರು ಹರಾಜು ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಪ್ರಿಪರೇಷನ್ ನಡೆಸಿವೆ. ಹರಾಜಿನಲ್ಲಿ ಜಬರ್ದಸ್ತ್ ಪ್ಲೇಯರ್ಗಳನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳೋ ಪ್ಲಾನ್ನಲ್ಲಿವೆ.
ಬೆಂಗಳೂರು(ಡಿ.06): ಐಪಿಎಲ್ ಮಿನಿ ಆಕ್ಷನ್ಗಿನ್ನು ಎರಡು ವಾರ ಬಾಕಿಯಿದೆ. ಯಾವ ಆಟಗಾರ ಯಾವ ತಂಡ ಸೇರ್ತಾರೆ ಅನ್ನೋ ಕುತೂಹಲ ಮೂಡಿದೆ. ಅದರಲ್ಲೂ ಈ ಒಬ್ಬ ವಿದೇಶಿ ಆಟಗಾರನಿಗೆ ಬೇಡಿಕೆ ಹೆಚ್ಚಾಗಿದೆ. ಎಷ್ಟು ಕೋಟಿಯಾದ್ರೂ ಸರಿ ಈತನನ್ನ ಬುಟ್ಟಿಗೆ ಹಾಕಿ ಕೊಳ್ಳಲೇಬೇಕು ಅಂತ ಫ್ರಾಂಚೈಸಿಗಳು ಫಿಕ್ಸ್ ಆಗಿವೆ. ಅಷ್ಟಕ್ಕೂ ಯಾರು ಆ ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ.
ಹೆಡ್‌ಗಾಗಿ ಕೋಟಿ ಕೋಟಿ ಸುರಿಯಲು ರೆಡಿ..!
ಕ್ರಿಕೆಟ್ ಜಗತ್ತಿನ ಶ್ರೀಮಂತ ಟೂರ್ನಿ IPLನ ಮಿನಿ ಆಕ್ಷನ್ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 19ರಂದು ದುಬೈನಲ್ಲಿ ಆಟಗಾರರು ಹರಾಜು ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಪ್ರಿಪರೇಷನ್ ನಡೆಸಿವೆ. ಹರಾಜಿನಲ್ಲಿ ಜಬರ್ದಸ್ತ್ ಪ್ಲೇಯರ್ಗಳನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳೋ ಪ್ಲಾನ್ನಲ್ಲಿವೆ. ಅದರಲ್ಲೂ ಆಸ್ಟ್ರೇಲಿಯಾದ ಡ್ಯಾಶಿಂಗ್ ಓಪನರ್, ಟ್ರಾವಿಸ್ ಹೆಡ್‌ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಯೆಸ್, ಹೆಡ್ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಎಷ್ಟೇ ಕೋಟಿಯಾದ್ರೂ ಸರಿ ಈ ಎಡಗೈ ಬ್ಯಾಟರ್‌ನ ಬುಟ್ಟಿಗೆ ಹಾಕಿ ಕೊಳ್ಳಲೇಬೇಕು ಅಂತ ಫಿಕ್ಸ್ ಆಗಿವೆ. ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭರ್ಜರಿ ಶತಕ ಸಿಡಿಸಿ, ಕೋಟ್ಯಂತರ ಭಾರತೀಯರ ಕನಸನ್ನ ನುಚ್ಚುನೂರು ಮಾಡಿದ ಹೆಡ್, ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾದ ಈ ಆಟಗಾರರಿಗೆ ಎಷ್ಟು ವಯಸ್ಸಾಗಿರಲಿದೆ?
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಮಾತ್ರ ಅಲ್ಲ, ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ರು. ಇನ್ನು ಇತ್ತೀಚೆಗೆ ನಡೆದ ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲೂ ಹೆಡ್ ಅಬ್ಬರಿಸಿದ್ರು. ಹೆಡ್ ಅಂತಾರಾಷ್ಟ್ರೀಯ T20 ಕರಿಯರ್ ಬಗ್ಗೆ ಹೇಳೋದಾದ್ರೆ, ಈವರೆಗು 23 ಪಂದ್ಯಗಳನ್ನಾಡಿ, 29.16ರ ಸರಾಸರಿ ಮತ್ತು 146.17ರ ಸ್ಟ್ರೈಕ್ರೇಟ್ನಲ್ಲಿ 554 ರನ್ ಕಲೆಹಾಕಿದ್ದಾರೆ. ಹೆಡ್ IPLಗೆ ಎಂಟ್ರಿ ನೀಡ್ತಿರೋದು ಇದೇ ಮೊದಲೇನಲ್ಲ. 2016 ಮತ್ತು 2017ರಲ್ಲಿ ಹೆಡ್ RCB ಪರ ಆಡಿದ್ರು. 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿ 138.51ರ ಸ್ಟ್ರೈಕ್ರೇಟ್ನಲ್ಲಿ 205 ರನ್ಗಳಿಸಿದ್ರು.
20 ಕೋಟಿಗೆ ಸೇಲ್ ಆಗಿ ದಾಖಲೆ ನಿರ್ಮಿಸ್ತಾರಾ ಹೆಡ್..?
ಯೆಸ್, ಹೆಡ್ಗೆ ಕ್ರಿಯೇಟ್ ಆಗಿರೋ ಡಿಮ್ಯಾಂಡ್ ನೋಡಿದ್ರೆ, ಫ್ರಾಂಚೈ ಸಿಗಳು 20 ಕೋಟಿ ನೀಡಲು ರೆಡಿಯಾಗಿವೆ. ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ಪಂಜಾಬ್ ಕಿಂಗ್ಸ್ ಹೆಡ್ ಮೇಲೆ ಇನ್ವೆಸ್ಟ್ ಮಾಡೋಕೆ ಸಿದ್ಧವಾಗಿವೆ. ಒಂದು ವೇಳೆ ಹೆಡ್ 20 ಕೋಟಿಗೆ ಸೇಲ್ ಆದಲ್ಲಿ, ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ದಾಖಲೆ ಬ್ರೇಕ್ ಆಗೋದು ಪಕ್ಕಾ. 2022ರಲ್ಲಿ ನಡೆದ ಮೆಗಾ ಆಕ್ಷನ್ನಲ್ಲಿ ಪಂಜಾಬ್ ಕಿಂಗ್ಸ್, 18.50 ಕೋಟಿ ನೀಡಿ ಕರನ್ರನ್ನ ತಂಡಕ್ಕೆ ಸೇರಿಸಿಕೊಂಡಿತ್ತು.
IPL ಇತಿಹಾಸದಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಟಾಪ್ 5 ಬ್ಯಾಟರ್‌ಗಳಿವರು..!
RCB ಕಣ್ಣು ಮಾತ್ರ ಮಿಚೆಲ್ ಸ್ಟಾರ್ಕ್ ಮೇಲೆ..!
ಹೌದು, ಎಲ್ಲಾ ತಂಡಗಳು ಹೆಡ್ ಮೇಲೆ ಕಣ್ಣಿಟ್ಟಿದ್ರೆ, RCB ಫ್ರಾಂಚೈಸಿ ಮಾತ್ರ ಆಸೀಸ್‌ನ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಮೇಲೆ ಕಣ್ಣಿಟ್ಟಿದೆ. ಯಾಕಂದ್ರೆ, RCB ಬ್ಯಾಟಿಂಗ್ ಲೈನ್ಅಪ್ ಸಖತ್ ಸ್ಟ್ರಾಂಗ್ ಆಗಿದೆ. ಆದ್ರೆ, ತಂಡದಲ್ಲಿ ಸ್ಟಾರ್ ಬೌಲರ್ಗಳ ಕೊರತೆ ಎದುರಾಗಿದೆ. ಜೋಶ್ ಹೆಜಲ್‌ವುಡ್, ವನಿಂದು ಹಸರಂಗ, ಹರ್ಷಲ್ ಪಟೇಲ್ರಂತಹ ಸ್ಟಾರ್ ಬೌಲರ್ಗಳನ್ನು ತಂಡದಿಂದ ರಿಲೀಸ್ ಮಾಡಲಾಗಿದೆ. ಇದ್ರಿಂದ ಸ್ಟಾರ್ಕ್ ಖರೀದಿಸೋ ಪ್ಲಾನ್ RCBಯದ್ದಾಗಿದೆ.
ಒಟ್ಟಿನಲ್ಲಿ ಮಿನಿ ಆಕ್ಷನ್ಗಿನ್ನು ಎರಡು ವಾರ ಬಾಕಿಯಿದ್ದು, ಈ ಇಬ್ಬರು ಆಸೀಸ್ ಸ್ಟಾರ್ಸ್ ಯಾವ ತಂಡ ಸೇರ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್