Asianet Suvarna News Asianet Suvarna News

ಒಬ್ಬ ಮುಸ್ಲಿಂ ವ್ಯಕ್ತಿ ಜೀವವು ಒಂದು ಹಿಂದು ಜೀವಕ್ಕೆ ಸಮ: ಐಸಿಸಿ ವಿರುದ್ದ ತಿರುಗಿಬಿದ್ದ ಆಸೀಸ್ ಕ್ರಿಕೆಟಿಗ

ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್ ಆತಿಥ್ಯವನ್ನು ವಹಿಸಿದೆ. ಈ ಟೆಸ್ಟ್ ಪಂದ್ಯಕ್ಕೂ ಮೊದಲು ಪ್ರಾಕ್ಟೀಸ್ ಸೆಷನ್‌ ವೇಳೆ ಉಸ್ಮಾನ್ ಖವಾಜ "ಎಲ್ಲಾ ಜೀವಗಳು ಸಮಾನ" ಹಾಗೂ "ಸ್ವಾತಂತ್ರ್ಯ ಮಾನವನ ಹಕ್ಕು" ಎಂದು ಬರೆದಿರುವ ಶೂ ಧರಿಸಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.

Australian Cricketer Usman Khawaja Defends Political Messaging On Shoes Ahead Of AUS Vs PAK 1st Test kvn
Author
First Published Dec 14, 2023, 3:18 PM IST

ಪರ್ತ್‌(ಡಿ.14): ಒಂದು ಕಡೆ ಇಸ್ರೆಲ್-ಪ್ಯಾಲೆಸ್ತೀನ್ ನಡುವೆ ಯುದ್ದ ನಡೆಯುತ್ತಲೇ ಇದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ, ಪ್ಯಾಲೆಸ್ತೇನ್ ಹೋರಾಟವನ್ನು ಬೆಂಬಲಿಸುವ ಬರಹವನ್ನು ಹೊಂದಿರುವ ಶೂ ಧರಿಸಿ ಮೈದಾನಕ್ಕಿಳಿದು ಗಮನ ಸೆಳೆಯುವ ಯತ್ನ ನಡೆಸಿದ್ದರು. ಇದರ ಬೆನ್ನಲ್ಲೆ ಐಸಿಸಿ ಖವಾಜ ಅವರ ಮೇಲೆ ನಿರ್ಭಂದ ಹೇರಿತ್ತು. ಇದೀಗ ಈ ವಿಚಾರದ ಕುರಿತಂತೆ ಖವಾಜ ಐಸಿಸಿ ನಡೆಯ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್ ಆತಿಥ್ಯವನ್ನು ವಹಿಸಿದೆ. ಈ ಟೆಸ್ಟ್ ಪಂದ್ಯಕ್ಕೂ ಮೊದಲು ಪ್ರಾಕ್ಟೀಸ್ ಸೆಷನ್‌ ವೇಳೆ ಉಸ್ಮಾನ್ ಖವಾಜ "ಎಲ್ಲಾ ಜೀವಗಳು ಸಮಾನ" ಹಾಗೂ "ಸ್ವಾತಂತ್ರ್ಯ ಮಾನವನ ಹಕ್ಕು" ಎಂದು ಬರೆದಿರುವ ಶೂ ಧರಿಸಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. 'ಕ್ರಿಕೆಟ್ ಆಸ್ಟ್ರೇಲಿಯಾ' ಈ ಶೂ ಧರಿಸಲು ಅವಕಾಶ ನೀಡಿದರೂ ಸಹ, ಐಸಿಸಿ ರಾಜಕೀಯ ಸಂದೇಶಗಳನ್ನು ನಿರ್ಬಂಧಿಸುವ ಸಲುವಾಗಿ ಖವಾಜಗೆ ಈ ಶೂ ಧರಿಸಲು ಅವಕಾಶ ನೀಡಿರಲಿಲ್ಲ.  

ನಾನೊಬ್ಬ ಹೆಮ್ಮೆಯ ಮುಸ್ಲಿಂ, ನಾನು ಎಲ್ಲಿ ಬೇಕಿದ್ರೂ ಸಜ್ದಾ ಮಾಡ್ತೇನೆ, ಯಾರೂ ತಡೆಯೋರು?: ಶಮಿ ಖಡಕ್ ಮಾತು

ಐಸಿಸಿ ತೆಗೆದುಕೊಂಡ ತೀರ್ಮಾನಕ್ಕೆ ಖವಾಜ ತಿರುಗೇಟು ನೀಡಿದ್ದಾರೆ. ತಾವು ಭವಿಷ್ಯದ ಪಂದ್ಯಗಳಲ್ಲಿ ಈ ಶೂಗಳನ್ನು ಧರಿಸಿ ಪಂದ್ಯಗಳನ್ನಾಡಲು ಅನುಮೋದನೆಗಾಗಿ ಹೋರಾಡುತ್ತೇನೆ. ನಾನು ಮಾನವೀಯ ನೆಲೆಗಟ್ಟಿನಲ್ಲಿ ಹೇಳುತ್ತಿದ್ದೇನೆ ನಾನು ಶೂ ಧರಿಸಿದ್ದು ಯಾವುದೇ ರಾಜಕೀಯ ಉದ್ದೇಶದಿಂದಲ್ಲ. ಮಾನವೀಯತೆ ಸಾರುವ ಉದ್ದೇಶದಿಂದ ಹೀಗೆ ಮಾಡಿದ್ದೇನೆ. ಸ್ವಾತಂತ್ರ್ಯ ಹಾಗೂ ಸಮಾನತೆ ಹಕ್ಕು ಸಾರ್ವತ್ರಿಕವಾಗಿಲ್ಲ. ಎಲ್ಲಾ ಜನಾಂಗ, ಧರ್ಮ, ಸಂಸ್ಕೃತಿಗಳಲ್ಲೂ ಸ್ವಾತಂತ್ರ್ಯ ಹಾಗೂ ಸಮಾನತೆ ಸಾರ್ವತ್ರಿಕ ಕಾಳಜಿಗಳಲ್ಲವೇ?. ದನಿ ಇಲ್ಲದವರಿಗೆ ಅದರಲ್ಲೂ ಸಂಘರ್ಷದಿಂದ ನೊಂದ ಅಮಾಯಕ ಮಕ್ಕಳಿಗೆ ಧ್ವನಿ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಖವಾಜ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಆರಂಭ:

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ಭರ್ಜರಿ ಆರಂಭವನ್ನು ಪಡೆದಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಆಸೀಸ್‌ಗೆ ಡೇವಿಡ್ ವಾರ್ನರ್-ಉಸ್ಮಾನ್ ಖವಾಜ ಶತಕದ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಖವಾಜ 41 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಆಕರ್ಷಕ 164 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಮೊದಲ 80 ಓವರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 335 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

Follow Us:
Download App:
  • android
  • ios