ಮೆಲ್ಬರ್ನ್(ಏ.19)‌: ಪ್ರತಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಬಹುತೇಕ ಕ್ರಿಕೆಟಿಗರು ಬ್ಯುಸಿಯಾಗಿರುತ್ತಾರೆ. ಸುಮಾರು 50 ದಿನಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಆಡುವುದರಲ್ಲಿ ಮಗ್ನರಾಗಿರುತ್ತಾರೆ. ಆದರೆ ಈ ವರ್ಷ ಕೊರೋನಾ ವೈರಸ್‌ನಿಂದಾಗಿ ಪರಿಸ್ಥತಿ ಬದಲಾಗಿದೆ. ಹೀಗಾಗಿ ಕ್ರಿಕೆಟಿಗರು ಅನಿವಾರ್ಯವಾಗಿ ಮನೆಯಲ್ಲೇ ಉಳಿಯುವ ಪರಿಸ್ಥಿತಿ ಬಂದೊದಗಿದೆ.

ಕೆಲವು ಕ್ರಿಕೆಟಿಗರಂತೆ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಭಾರತೀಯರ ಮನ ಗೆದ್ದಿರುವ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರೂ ಹೌದು.

ಈ ವರ್ಷ ಕೊರೋನಾ ಭೀತಿಯಿಂದಾಗಿ ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಅನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಹೀಗಾಗಿ ವಾರ್ನರ್ ತಮ್ಮ ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಶನಿವಾರ(ಏ.18) ರಂದು ವಾರ್ನರ್ ಟಿಕ್-ಟಾಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಬಾಲಿವುಡ್ ಸಿನೆಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕತ್ರಿನಾ ಕೈಫ್ ಅಭಿನಯದ ತೀಸ್ ಮಾರ್ ಖಾನ್ ಚಿತ್ರದ ಜನಪ್ರಿಯ ಬಾಲಿವುಡ್‌ ಗೀತೆ, ‘ಶೀಲಾ ಕಿ ಜವಾನಿ’ ಹಾಡಿಗೆ ಆಸ್ಪ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ತಮ್ಮ ಪುತ್ರಿಯೊಂದಿಗೆ ಡ್ಯಾನ್ಸ್‌ ಮಾಡಿದ್ದಾರೆ. 

 
 
 
 
 
 
 
 
 
 
 
 
 

😂😂 somebody help us please!!

A post shared by David Warner (@davidwarner31) on Apr 17, 2020 at 3:23pm PDT

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಾರ್ನರ್‌ ವಿಡಿಯೋ ಹಾಕಿದ್ದು, ವಾರ್ನರ್ ಮಗಳೊಂದಿಗೆ ಸ್ಟೆಪ್ ಹಾಕಿರುವ ವಿಡಿಯೋ ವೈರಲ್‌ ಆಗಿದೆ.

 
 
 
 
 
 
 
 
 
 
 
 
 

Indi has asked to also do one for you guys! 😂😂 please help me someone!!!!!! #statue

A post shared by David Warner (@davidwarner31) on Apr 17, 2020 at 11:37pm PDT