ಸಿಡ್ನಿ(ನ.28): ಆಸ್ಪ್ರೇಲಿಯಾ ತಂಡದ ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ನವೆಂಬರ್ 29ರಂದು ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಭಾರತ ವಿರುದ್ದದ 2ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಶುಕ್ರವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್‌ ಮಾಡುವ ವೇಳೆ ಸ್ಟೋಯ್ನಿಸ್‌, ಸ್ನಾಯು ಸೆಳೆತಕ್ಕೆ ಒಳಗಾದರು. ತಮ್ಮ 7ನೇ ಓವರ್‌ನ 2 ಎಸೆತ ಬಳಿಕ ತೀವ್ರ ತೆರನಾದ ನೋವಿಗೆ ತುತ್ತಾದ ಸ್ಟೋಯ್ನಿಸ್‌ ಮಧ್ಯದಲ್ಲೇ ಕ್ರೀಡಾಂಗಣದಿಂದ ಹೊರ ನಡೆದರು. ಸ್ಟೋಯ್ನಿಸ್‌ ಅವರ ಓವರನ್ನು ಮ್ಯಾಕ್ಸ್‌ವೆಲ್‌ ಮುಕ್ತಾಯ ಮಾಡಿದರು.  

ಇಂಡೋ-ಆಸೀಸ್ ಮೊದಲ ಏಕದಿನ ಪಂದ್ಯದಲ್ಲಿ 2 ಅಪರೂಪದ ದಾಖಲೆ ನಿರ್ಮಾಣ..!

ಮಾರ್ಕಸ್‌ ಸ್ಟೋಯ್ನಿಸ್ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಇದೆಲ್ಲದರ ಹೊರತಾಗಿಯೂ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 374 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 308 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ಮಾರ್ಕಸ್ ಸ್ಟೋಯ್ನಿಸ್‌ ಗೈರು ಹಾಜರಿಯಲ್ಲಿ ನವೆಂಬರ್ 29ರಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್‌ ತಂಡಕ್ಕೆ ಕೆಮರೂನ್‌ ಗ್ರೀನ್‌ ಅಥವಾ ಮೋಸಿಸ್‌ ಹೆನ್ರಿಕ್ಸ್‌ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.