Asianet Suvarna News Asianet Suvarna News

ಇಂಡೋ-ಆಸೀಸ್ ಮೊದಲ ಏಕದಿನ ಪಂದ್ಯದಲ್ಲಿ 2 ಅಪರೂಪದ ದಾಖಲೆ ನಿರ್ಮಾಣ..!

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Aaron Finch and Hardik Pandya Creates 2 records in India vs Australia 1st ODI Played in SCG Stadium kvn
Author
Sydney NSW, First Published Nov 28, 2020, 9:25 AM IST

ಸಿಡ್ನಿ(ನ.28): ಬರೋಬ್ಬರಿ 9 ತಿಂಗಳುಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರು 66 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಈ ಸೋಲಿನ ಹೊರತಾಗಿಯೂ ಉಭಯ ತಂಡದ ಇಬ್ಬರು ಆಟಗಾರರು 2 ದಾಖಲೆ ನಿರ್ಮಿಸಿದ್ದಾರೆ.
ಹೌದು, ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ತಮ್ಮ ದೇಶಗಳ ಪರ ದಾಖಲೆಗಳನ್ನು ಬರೆದಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಭಾರತ ಪರ ವೇಗವಾಗಿ ಒಂದು ಸಾವಿರ ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ: 

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಹಾರ್ದಿಕ್‌ ಪಾಂಡ್ಯ ತಮ್ಮ ಹೆಸರಿಗೆ ದಾಖಲೆಯೊಂದನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಆಸ್ಪ್ರೇಲಿಯಾ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಾರ್ದಿಕ್‌, 76 ಎಸೆತಗಳಲ್ಲಿ 90 ರನ್‌ ಚಚ್ಚಿದರು. 

ಆಸೀಸ್ ಎದುರು ಮೊದಲ ಪಂದ್ಯದಲ್ಲೇ ಭಾರತಕ್ಕೆ ಆಘಾತಕಾರಿ ಸೋಲು..!

ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ವೇಗದ 1000 ರನ್‌ ಗಳಿಸಿದ ಸಾಧನೆ ಮಾಡಿದರು. ಹಾರ್ದಿಕ್‌ ತಾವು ಎದುರಿಸಿದ 857 ಎಸೆತಗಳಲ್ಲಿ 1000 ರನ್‌ ಗಳಿಸಿದ್ದಾರೆ. ಈ ಮೂಲಕ ಅತಿ ಕಡಿಮೆ ಎಸೆತದಲ್ಲಿ 1 ಸಾವಿರ ರನ್‌ಗಳಿಸಿದ ಭಾರತದ ಆಟಗಾರರ ಪೈಕಿ ಹಾರ್ದಿಕ್‌ ಅಗ್ರಸ್ಥಾನದಲ್ಲಿದ್ದಾರೆ.

ಆ್ಯರೋನ್ ಫಿಂಚ್ ದಾಖಲೆ:

ಸಿಡ್ನಿ: ಟೀಂ ಇಂಡಿಯಾ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಆಸ್ಪ್ರೇಲಿಯಾ ನಾಯಕ ಆ್ಯರೋನ್ ಫಿಂಚ್‌, ಆಸ್ಪ್ರೇಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ವೇಗದ 5000 ರನ್‌ ದಾಖಲಿಸಿದ 2ನೇ ಆಟಗಾರ ಎನಿಸಿದರು. 

126ನೇ ಇನ್ನಿಂಗ್ಸ್‌ನಲ್ಲಿ ಫಿಂಚ್‌ ಈ ಸಾಧನೆ ಮಾಡಿದರು. ಆಸೀಸ್‌ನ ಮಾಜಿ ಆಟಗಾರ ಡೀನ್‌ ಜೋನ್ಸ್‌ 128 ಇನ್ನಿಂಗ್ಸ್‌ಗಳಲ್ಲಿ 5000 ರನ್‌ ಗಳಿಸಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ 115 ಇನ್ನಿಂಗ್ಸ್‌ಗಳಲ್ಲಿ 5000 ರನ್‌ ಗಳಿಸಿದ್ದಾರೆ. ವೇಗದ 5 ಸಾವಿರ ರನ್‌ ಗಳಿಸಿದ ಆಟಗಾರರ ಪೈಕಿ ವಾರ್ನರ್‌ ಮೊದಲಿಗರಾಗಿದ್ದರೆ, ಫಿಂಚ್‌ 2ನೇ ಯವರಾಗಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ದ.ಆಫ್ರಿಕಾದ ಹಾಶೀಂ ಆಮ್ಲಾ 101 ಇನ್ನಿಂಗ್ಸ್‌ಗಳಲ್ಲಿ ವೇಗದ 5000 ರನ್‌ಗಳಿಸಿದ ಮೊದಲಿಗ ಎನಿಸಿದ್ದಾರೆ.

Follow Us:
Download App:
  • android
  • ios