ಮುಂಬೈ(ಜ.14): ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಹಲವು ಐತಿಹಾಸಿಕ ಗೆಲುವು ಕಂಡಿದೆ. ದಾಖಲೆಗಳನ್ನು ಬರೆದಿದೆ. ಆದರೆ ಇದೇ ಮೊದಲ ಬಾರಿಗೆ ಏಕದಿನದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಬರೋಬ್ಬರಿ 15 ವರ್ಷಗಳ ಬಳಿಕ ಟೀಂ ಇಂಡಿಯಾ 10 ವಿಕೆಟ್ ಸೋಲು ಕಂಡಿರುವ ಅಪಖ್ಯಾತಿಗೆ ತುತ್ತಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಕಹಿಯಾದ ಸಂಕ್ರಾತಿ ಹಬ್ಬ; ಕೊಹ್ಲಿ ಸೈನ್ಯಕ್ಕೆ ಹೀನಾಯ ಸೋಲು!

256 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ಇನ್ನೂ 12,2 ಓವರ್ ಬಾಕಿ ಇರುವಂತೆ ಗೆಲುವು ಸಾಧಿಸಿತು.  ಈ ಮೂಲಕ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಸೋಲು ಕಂಡಿತು. 2005ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ 10 ವಿಕೆಟ್ ಸೋಲು ಅನುಭವಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ ಈ ರೀತಿಯ ಹೀನಾಯ ಸೋಲಿಗೆ ಗುರಿಯಾಗಿರಲಿಲ್ಲ. ಇದೀಗ ಕೊಹ್ಲಿ ಸೈನ್ಯ ಈ ಅಪಖ್ಯಾತಿ ಹೊತ್ತುಕೊಂಡಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ: ಕೊಹ್ಲಿ ಟೀಕಿಸಿದ ಫ್ಯಾನ್ಸ್!

ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಹಲವು ಬಾರಿ ಅಬ್ಬರಿ ದಾಖಲೆ ಬರೆದಿದೆ. ಈ ಹಿಂದೆ ಭಾರತ ವಿರುದ್ಧ 242 ರನ್ ಜೊತೆಯಾಟ ನೀಡಿ ದಾಖಲೆ ಬರೆದಿದ್ದ ಆಸ್ಟ್ರೇಲಿಯಾ ಇದೀಗ 258 ರನ್ ಸಿಡಿಸಿ ಹಳೇ ದಾಖಲೆ ಮುರಿಯಿತು. ಫಿಂಚ್ ಹಾಗೂ ವಾರ್ನರ್ 258 ರನ್ ಜೊತೆಯಾಟ ನೀಡಿ ದಾಖಲೆ ಬರೆದರು.

ಭಾರತ ವಿರುದ್ಧ ಗರಿಷ್ಠ ಜೊತೆಯಾಟದ ದಾಖಲೆ(ODI)
258*ಫಿಂತ್ - ವಾರ್ನರ್, ಮುಂಬೈ( 2020)
242 ಸ್ಮಿತ್ - ಬೈಲಿ, ಪರ್ತ್( 2016)
235 ಕರ್ಸ್ಟನ್ - ಗಿಬ್ಸ್ , ಕೊಚ್ಚಿ( 2000)
234*ಪಾಂಟಿಂಗ್ - ವಾರ್ಟಿನ್, ಜೋಹಾನ್ಸ್‌ಬರ್ಗ್( 2003)
231 ಫಿಂಚ್ - ವಾರ್ನರ್, ಬೆಂಗಳೂರು(2017)