ಸಿಡ್ನಿ(ಜ.09): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ 3ನೇ ದಿನ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಕಾರಣ ಟೀಂ ಇಂಡಿಯಾವನ್ನು 244 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ಆರಂಭಿಸಿದ ದಿನದಾಟದ ಅಂತ್ಯದಲ್ಲಿ ಆಸೀಸ್ 2 ವಿಕೆಟ್ ಕಳೆದುಕೊಂಡ ಆಸೀಸ್ 103 ರನ್ ಸಿಡಿಸಿದೆ. ಈ ಮೂಲಕ 197 ರನ್ ಮುನ್ನಡೆ ಪಡೆದುಕೊಂಡಿದೆ.

ಮತ್ತೆ ಮತ್ತೆ ನೋಡಬೇಕೆನಿಸುವ ಸ್ಮಿತ್ ರನೌಟ್; ಜಡೇಜಾಗೂ ಅಚ್ಚು ಮೆಚ್ಚು!...

ಶುಭಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಹಾಫ್ ಸೆಂಚುರಿ ಸಿಡಿಸಿದರೆ, ರಿಷಬ್ ಪಂತ್ 36 ರನ್ ಕಾಣಿಕೆ ನೀಡಿದರು. ಉಳಿದವರಿಂದ ರನ್ ಹರಿದು ಬರಲಿಲ್ಲ. ಹೀಗಾಗಿ ಭಾರತ 244 ರನ್‌ಗಳಿಗೆ ಆಲೌಟ್ ಆಗೋ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡ ಅನುಭವಿಸಿತು. 

ಇದಕ್ಕುತ್ತರವಾಗಿ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಗದಿದ್ದರೂ, ದಿಟ್ಟ ಹೋರಾಟ ನೀಡಿದೆ. ಮಾರ್ನಸ್ ಲಬುಶಾನೆ ಅಜೇಯ 47 ರನ್ ಹಾಗೂ ಸ್ಟೀವ್ ಸ್ಮಿತ್ ಅಜೇಯ 29 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 4ನೇ ದಿನದಾಟ ಇದೀಗ ತೀವ್ರ ಕುತೂಹಲ ಕೆರಳಿಸಿದ, ಆಸೀಸ್ ತಂಡ ಈಗಾಗಲೇ 197 ರನ್ ಮುನ್ನಡೆಯಲ್ಲಿದೆ. ಹೀಗಾಗಿ ಭಾರತಕ್ಕೆ ಬೃಹತ್ ಗುರಿ ಸಿಗುವ ಸಾಧ್ಯತೆ ಹೆಚ್ಚಿದೆ.