ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲಲು ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 328 ರನ್‌ಗಳ ಗುರಿ ನೀಡಿದ ಆತಿಥೇಯ ಆಸ್ಟ್ರೇಲಿಯಾ ತಂಡ. ಈ ಪಂದ್ಯ ಗೆದ್ದು ಟೆಸ್ಟ್‌ ಸರಣಿ ಕೈವಶ ಮಾಡಿಕೊಳ್ಳುತ್ತಾ ಭಾರತ ಎನ್ನುವುದನ್ನು ಕಾದು ನೋಡಬೇಕಿದೆ. 

ಬ್ರಿಸ್ಬೇನ್‌(ಜ.18): ಮೊಹಮ್ಮದ್ ಸಿರಾಜ್‌(73/5) ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ 294 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತಕ್ಕೆ ಬ್ರಿಸ್ಬೇನ್ ಟೆಸ್ಟ್‌ ಗೆಲ್ಲಲು 328 ರನ್‌ಗಳ ಸವಾಲಿನ ಗುರಿ ನೀಡಿದೆ.

ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೋನ್ ಗ್ರೀನ್‌ ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಗೆ ನೆಲಕಚ್ಚಿ ಆಡಲು ಟೀಂ ಇಂಡಿಯಾ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ. ಸ್ಟೀವ್ ಸ್ಮಿತ್ 55 ರನ್‌ ಬಾರಿಸಿದರೆ, ಆಲ್ರೌಂಡರ್‌ ಕ್ಯಾಮರೋನ್‌ ಗ್ರೀನ್‌ 37 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಕೊನೆಯಲ್ಲಿ ಪ್ಯಾಟ್ ಕಮಿನ್ಸ್ 28 ರನ್ ಬಾರಿಸುವ ಮೂಲಕ ತಂಡದ ಮುನ್ನಡೆಯನ್ನು ಮುನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 

Scroll to load tweet…

ಬ್ರಿಸ್ಬೇನ್ ಟೆಸ್ಟ್: ಚಹಾ ವಿರಾಮದ ವೇಳೆಗೆ ಆಸೀಸ್‌ಗೆ 276 ರನ್‌ಗಳ ಮುನ್ನಡೆ

ಭಾರತ ಪರ ಚೊಚ್ಚಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್‌ 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಶಾರ್ದೂಲ್ ಠಾಕೂರ್ 4 ವಿಕೆಟ್‌ ಪಡೆದರು. ಇನ್ನು ವಾಷಿಂಗ್ಟನ್ ಸುಂದರ್‌ ಒಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 369& 294
ಭಾರತ: 336
ಗೆಲ್ಲಲು: 328 ರನ್ ಟಾರ್ಗೆಟ್‌