Asianet Suvarna News Asianet Suvarna News

T20 World Cup: ಬಾಂಗ್ಲಾ ವಿರುದ್ಧ ಆಸೀಸ್‌ಗೆ ದೊಡ್ಡ ಜಯದ ನಿರೀಕ್ಷೆ!

*ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸುವ ಕಾತರದಲ್ಲಿರುವ ಆಸ್ಪ್ರೇಲಿಯಾ
*ಈಗಾಗಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿರುವ ಬಾಂಗ್ಲಾದೇಶ
*ಬಾಂಗ್ಲಾ, ಆಸೀಸ್‌  ಟಿ20 ಸರಣಿಯಲ್ಲಿ  4-1ರಿಂದ ಗೆದ್ದಿದ್ದ ಬಾಂಗ್ಲಾ

Australia and Bangladesh are set to lock horns in T20 World Cup 2021 on Thursday
Author
Bengaluru, First Published Nov 4, 2021, 6:45 AM IST

ದುಬೈ(ನ.4) : ಟಿ20 ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸುವ ಕಾತರದಲ್ಲಿರುವ ಆಸ್ಪ್ರೇಲಿಯಾ (Australia), ಈಗಾಗಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿರುವ ಬಾಂಗ್ಲಾದೇಶ (Bangladesh) ವಿರುದ್ಧ ಗುರುವಾರ ಸೆಣಸಾಡಲಿದೆ. ಆಡಿರುವ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಆಸೀಸ್‌ ಸೆಮೀಸ್‌ ಆಸೆಯನ್ನು ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲ್ಲಬೇಕಾಗಿದ್ದು, ಜೊತೆಗೆ ನೆಟ್‌ ರನ್‌ ರೇಟ್‌ (Net Runrate) ಕೂಡಾ ಉತ್ತಮಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ತಾನಾಡಿದ ಎಲ್ಲಾ 4 ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಬಾಂಗ್ಲಾ ಈ ಪಂದ್ಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮೊದಲ ಗೆಲುವಿಗಾಗಿ ಎದುರು ನೋಡುತ್ತಿದೆ.

Rahul Dravid: ಟೀಮ್ ಇಂಡಿಯಾ ನೂತನ ಕೋಚ್ ಆಗಿ ದ್ರಾವಿಡ್ ನೇಮಕ

ವಿಶ್ವಕಪ್‌ಗೂ ಮುನ್ನ ಬಾಂಗ್ಲಾದಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ತವರಿನ ಪಿಚ್‌ನ ಲಾಭ ಪಡೆದುಕೊಂಡಿದ್ದ ಬಾಂಗ್ಲಾ, ಆಸೀಸ್‌ ವಿರುದ್ಧ 4-1ರಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಆಸೀಸ್‌ ಸೇಡು ತೀರಿಸಲು ಕಾಯುತ್ತಿದೆ. ಫಿಂಚ್‌ ನಾಯಕತ್ವದ ಆಸೀಸ್‌ ಟೂರ್ನಿಯ ಮೊದಲೆರಡು ಪಂದ್ಯಗಳನ್ನು ದ.ಆಫ್ರಿಕಾ, ಶ್ರೀಲಂಕಾ ವಿರುದ್ಧ ಗೆದ್ದಿತ್ತು. ಆದರೆ ಇಂಗ್ಲೆಂಡ್‌ಗೆ ಶರಣಾಗಿತ್ತು.

ಸಂಭವನೀಯ ಆಟಗಾರರ ಪಟ್ಟಿ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್ (David Warner), ಆರನ್ ಫಿಂಚ್ (Aaron Finch), ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell), ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಆಶ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ

Ind vs NZ T20I ಕ್ರಿಕೆಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್‌ಗೆ ನಾಯಕ ಪಟ್ಟ..?

ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಲಿಟನ್ ದಾಸ್(Liton Das),ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ (Mahmudullah), ಅಫೀಫ್ ಹೊಸೈನ್, ಶಮೀಮ್ ಹೊಸೈನ್, ಮಹೇದಿ ಹಸನ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ/ರುಬೆಲ್ ಹೊಸೈನ್, ತಸ್ಕಿನ್ ಅಹ್ಮದ್

ಪಿಚ್‌ ರಿಪೋರ್ಟ್‌

ದುಬೈನ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿಲ್ಲ, ಇಲ್ಲಿ ಬೌಲರ್‌ಗಳು ಹೆಚ್ಚಿನ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೈದಾನದಲ್ಲಿ ರನ್ ಗಳಿಸಲು ಬ್ಯಾಟರ್‌ಗಳು ಕೊಂಚ ಪ್ರಯಾಸಪಡಬೇಕು. ಇದಲ್ಲದೆ ಇದು ಚೇಸಿಂಗ್ ತಂಡಗಳಿಗೆ ಹೆಚ್ಚು ಸಹಾಯಕವಾಗಲಿದೆ. ಆದ್ದರಿಂದ, ಎರಡನೇ ಬ್ಯಾಟಿಂಗ್ ಆಯ್ಕೆ ಮಡುವುದು ಉತ್ತಮ.

ಭಾರತಕ್ಕೆ ಭರ್ಜರಿ ಜಯ.. ಸೇಮಿಸ್ ಆಸೆ ಜೀವಂತ!

ಟಿ20  ವಿಶ್ವಕಪ್ ನಲ್ಲಿ(T20 World Cup 2021) ಭಾರತ ( India)  ಅಫ್ಘಾನಿಸ್ತಾನದ (Afghanistan)ವಿರುದ್ದ ಭರ್ಜರಿ ಜಯ ದಾಖಲಿಸಿ ಖಾತೆ ಓಪನ್ ಮಾಡಿದೆ.  ಮೊದಲು ಬ್ಯಾಟಿಂಗ್ ಮಾಡಿದ ಭಾರತ  ರನ್ ಹೊಳೆ ಹರಿಸಿತು. ನಿಗದಿತ 20 ಓವರ್‌ಗಳಲ್ಲಿ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 210 ರನ್‌ಗಳಿಸಿ ದೊಡ್ಡ ಸವಾಲನ್ನು ಮುಂದಿಟ್ಟಿತು. ಆದರೆ ಭಾರತ ನೀಡಿದ ದೊಡ್ಡ ಮೊತ್ತವನ್ನು ಚೇಸ್‌ (Chase) ಮಾಡಲು ಸಾಧ್ಯವಾಗದೆ ಅಫ್ಘಾನಿಸ್ತಾನ ಪಂದ್ಯ ಕೈಚೆಲ್ಲಿತು.

ಕಿವೀಸ್‌ ವಿರುದ್ಧ ವೀರೋಚಿತ ಸೋಲು ಕಂಡ ಸ್ಕಾಟ್ಲೆಂಡ್‌!

ನಿರೀಕ್ಷೆಗೂ ಮೀರಿದ ಹೋರಾಟ ಪ್ರದರ್ಶಿಸಿದ ಹೊರತಾಗಿಯೂ ಸ್ಕಾಟ್ಲೆಂಡ್‌ ಟಿ20 ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 16 ರನ್‌ಗಳ ಸೋಲುಂಡಿದೆ. ಮಹತ್ವದ ಪಂದ್ಯದಲ್ಲಿ ಗೆದ್ದ ಕಿವೀಸ್‌ 4 ಅಂಕದೊಂದಿಗೆ ಗುಂಪು 2ರಲ್ಲಿ 3ನೇ ಸ್ಥಾನ ಪಡೆದಿದ್ದು, ಸೆಮೀಸ್‌ ಆಸೆ ಜೀವಂತವಾಗಿರಿಸಿಕೊಂಡಿದೆ. ಸ್ಕಾಟ್ಲೆಂಡ್‌ ಹ್ಯಾಟ್ರಿಕ್‌ ಸೋಲುಂಡು ಕೊನೆಯ ಸ್ಥಾನದಲ್ಲಿದೆ.

T20 World Cup: 9 ತಿಂಗಳ ವಿರಾಟ್‌ ಮಗಳು ವಮಿಕಾಗೆ ಅತ್ಯಾಚಾರದ ಬೆದರಿಕೆ..! ಇದೇನಾ ಸಂಸ್ಕೃತಿ..?

Follow Us:
Download App:
  • android
  • ios