ಸ್ನೇಹಿತನ ಬರ್ತ್‌ಡೇ ಪಾರ್ಟಿಗೆ ಹೋಗಿ ಕಾಲು ಮುರಿದುಕೊಂಡ ಮ್ಯಾಕ್‌ವೆಲ್ಕಾಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮ್ಯಾಕ್ಸ್‌ವೆಲ್ ಕೆಲಕಾಲ ಕ್ರಿಕೆಟ್‌ನಿಂದ ದೂರಬಿಗ್‌ಬ್ಯಾಶ್ ಹಾಗೂ ಭಾರತ ಪ್ರವಾಸಕ್ಕೂ ಮ್ಯಾಕ್ಸ್‌ವೆಲ್ ಡೌಟ್

ಮೆಲ್ಬರ್ನ್‌(ನ.14): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ಗೇರಲು ವಿಫಲವಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂಬರುವ ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಹೊರಬಿದ್ದಿದ್ದಾರೆ ಎಂದು ಆಸ್ಟ್ರೇಲಿಯಾ ಅಯ್ಕೆ ಸಮಿತಿಯು ಖಚಿತಪಡಿಸಿದೆ. ತಾರಾ ಆಲ್ರೌಂಡರ್ ಮ್ಯಾಕ್ಸ್‌ವೆಲ್ ಕನಿಷ್ಠ 3 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ತಮ್ಮ ಸ್ನೇಹಿತನ 50ನೇ ವರ್ಷದ ಹುಟ್ಟುಹಬ್ಬ ಪಾರ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಪಾಲ್ಗೊಂಡಿದ್ದರು. ಈ ವೇಳೆ ಕಾಲು ಜಾರಿ ಬಿದ್ದು, ಎಡಗಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಶನಿವಾರ ರಾತ್ರಿ ನಡೆದ ಬರ್ತ್‌ ಡೇ ಪಾರ್ಟಿ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಅವರ ಸ್ನೇಹಿತ ಮನೆಯ ಹಿತ್ತಲಿನ ಕಡೆ ಓಡುವಾಗ ಮ್ಯಾಕ್ಸ್‌ವೆಲ್‌ ಜಾರಿ ಬಿದ್ದಿದ್ದಾರೆ. ಅವರ ಕಾಲಿನ ಮೇಲೆ ಅವರ ಸ್ನೇಹಿತ ಕೂಡಾ ಜಾರಿ ಬಿದ್ದಿದ್ದರಿಂದ ಬಲವಾದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್ ಶಸ್ತ್ರಚಿಕಿತ್ಸೆ ಕೂಡಾ ಯಶಸ್ವಿಯಾಗಿದೆ.

ಇದೀಗ ತವರಿನಲ್ಲಿ ಇಂಗ್ಲೆಂಡ್ ವಿರುದ್ದ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಮ್ಯಾಕ್ಸ್‌ವೆಲ್ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ನವೆಂಬರ್ 17ರಿಂದ ಆರಂಭವಾಗಲಿದ್ದು, ಮ್ಯಾಕ್ಸ್‌ವೆಲ್ ಬದಲಿಗೆ ಶಾನ್ ಅಬ್ಬೋಟ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಕೂಡಿಕೊಂಡಿದ್ದಾರೆ.

Scroll to load tweet…

ಗ್ಲೆನ್ ಮ್ಯಾಕ್ಸ್‌ವೆಲ್‌ ಗಾಯದ ಕುರಿತಂತೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಜಾರ್ಜ್ ಬೈಲಿ, ಇದೊಂದು ದುರಾದೃಷ್ಟಕರ ಘಟನೆಯಾಗಿದ್ದು, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಕಳೆದ ಕೆಲ ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಲಯದಲ್ಲಿದ್ದರು ಎಂದು ಬೈಲಿ ಹೇಳಿದ್ದಾರೆ.

T20 World Cup: ಇಂಗ್ಲೆಂಡ್‌ ಚಾಂಪಿಯನ್ ಆಗಲು ಕಾರಣಗಳೇನು?

ಗ್ಲೆನ್‌ ಮ್ಯಾಕ್ಸ್‌ವೆಲ್, ನಮ್ಮ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಮಹತ್ವದ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದು, ಈ ಸಂಕಷ್ಟದ ಸಮಯದಲ್ಲಿ ನಾವು ಅವರ ಜತೆ ನಿಲ್ಲಲಿದ್ದೇವೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದ್ದೇವೆ ಎಂದು ಬೈಲಿ ಹೇಳಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್‌ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಇಂಗ್ಲೆಂಡ್ ಎದುರಿನ ಸರಣಿ ಮಾತ್ರವಲ್ಲದೇ ಡಿಸೆಂಬರ್ 13ರಿಂದ ಫೆಬ್ರವರಿ 04ರವರೆಗೆ ನಡೆಯಲಿರುವ ಬಿಗ್‌ಬ್ಯಾಶ್ ಲೀಗ್‌ಗೂ ಅಲಭ್ಯರಾಗಲಿದ್ದಾರೆ. ಇನ್ನು ಭಾರತ ಪ್ರವಾಸಕ್ಕೂ ಮ್ಯಾಕ್ಸ್‌ವೆಲ್ ಅಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.