T20 World Cup: ಇಂಗ್ಲೆಂಡ್‌ ಚಾಂಪಿಯನ್ ಆಗಲು ಕಾರಣಗಳೇನು?

ಪಾಕಿಸ್ತಾನ ಮಣಿಸಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಂಗ್ಲೆಂಡ್ 
ಪಾಕಿಸ್ತಾನ ವಿರುದ್ದ 5 ವಿಕೆಟ್‌ಗಳ ಜಯ ಸಾಧಿಸಿದ ಜೋಸ್ ಬಟ್ಲರ್ ಪಡೆ
ಸದ್ಯ ಇಂಗ್ಲೆಂಡ್ ಏಕದಿನ ಹಾಗೂ ಟಿ20 ವಿಶ್ವಕಪ್ ಜಯಿಸಿದ ತಂಡ

4 main reasons for England won T20 World Cup this year kvn

ಬೆಂಗಳೂರು(ನ.14): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್ ತಂಡವು ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪರಿಸ್ಥಿತಿ ಹಾಗೂ ಎದುರಾಳಿಗೆ ತಕ್ಕಂತೆ ರಣತಂತ್ರ ರೂಪಿಸುವುದರ ಜೊತೆಗೆ ಮೈದಾನದಲ್ಲಿ ಅವುಗಳನ್ನು ಅಚ್ಚುಕಟ್ಟಾಗಿ ಕಾರ‍್ಯರೂಪಕ್ಕೆ ತಂದಿದ್ದು ಇಂಗ್ಲೆಂಡ್‌ ಜಯದ ಹಿಂದಿರುವ ರಹಸ್ಯ. ಎದುರಾಳಿಯ ದೌರ್ಬಲ್ಯಗಳ ಲಾಭ ಪಡೆಯುವುದರ ಜೊತೆಗೆ ತನ್ನ ಆಟಗಾರರ ಸಾಮರ್ಥ್ಯದ ಮೇಲೆ ವಿಶ್ವಾಸವಿರಿಸಿದ ಇಂಗ್ಲೆಂಡ್‌ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳ ವಿಶ್ಲೇಷಣೆ ಇಲ್ಲಿದೆ.

1. ಟಾಸ್‌ ಲಾಭವೆತ್ತುವಲ್ಲಿ ಸಕ್ಸಸ್‌: ನಿಧಾನಗತಿಯ ಪಿಚ್‌ನಲ್ಲಿ ನಿರ್ಣಾಯಕ ಟಾಸ್‌ ಗೆದ್ದ ಬಳಿಕ ಅದರ ಲಾಭವೆತ್ತುವಲ್ಲಿ ಇಂಗ್ಲೆಂಡ್‌ ಬೌಲರ್‌ಗಳು ಯಶಸ್ವಿಯಾದರು. ಆರಂಭದಿಂದಲೇ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ ಇಂಗ್ಲೆಂಡ್‌, ಮೊದಲ 3 ಓವರಲ್ಲಿ ಬೌಂಡರಿ ಗಳಿಸಲು ಬಿಡಲಿಲ್ಲ. ಸಹಜವಾಗಿಯೇ ಪವರ್‌-ಪ್ಲೇನಲ್ಲಿ ಹಿಂದೆ ಬಿದ್ದ ಪಾಕಿಸ್ತಾನ, ರನ್‌ರೇಟ್‌ ಹೆಚ್ಚಿಸಿಕೊಳ್ಳುವ ಒತ್ತಡದಲ್ಲಿ ಅತ್ಯಗತ್ಯವೆನಿಸಿದ್ದ ಜೊತೆಯಾಟಗಳನ್ನು ಪಡೆಯುವಲ್ಲಿ ವಿಫಲವಾಯಿತು.

2. ಮೈದಾನದ ಅಳತೆಯ ಬಗ್ಗೆ ಅರಿವು: ಮೆಲ್ಬರ್ನ್‌ ವಿಶ್ವದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದು. ಇದರ ಅಳತೆಯ ಬಗ್ಗೆ ಸಂಪೂರ್ಣ ಅರಿವಿಟ್ಟುಕೊಂಡು ಇಂಗ್ಲೆಂಡ್‌ ರಣತಂತ್ರ ರೂಪಿಸಿತ್ತು. ಸರಿಯಾದ ಸ್ಥಳಗಳಲ್ಲಿ ಫೀಲ್ಡರ್‌ಗಳನ್ನು ನಿಲ್ಲಿಸುವಲ್ಲಿ ನಾಯಕ ಬಟ್ಲರ್‌ ಸಫಲರಾದರು. ಒತ್ತಡದಲ್ಲಿ ಪಾಕ್‌ ಬ್ಯಾಟರ್‌ಗಳು ನೇರವಾಗಿ ಇಂಗ್ಲೆಂಡ್‌ ಫೀಲ್ಡರ್‌ಗಳ ಕೈಗೆ ಕ್ಯಾಚಿತ್ತು ಹೊರನಡೆದರು. ಪಾಕಿಸ್ತಾನದ ಫಿನಿಶರ್‌ ನವಾಜ್‌ 71 ಮೀ. ದೂರಕ್ಕೆ ಚೆಂಡನ್ನು ಹೊಡೆದರೂ ಅದು ಕ್ಷೇತ್ರರಕ್ಷಕನ ಕೈ ಸೇರಿತು. ಇಷ್ಟೇ ದೂರಕ್ಕೆ ಅಡಿಲೇಡ್‌ನಲ್ಲಿ ಹೊಡೆದಿದ್ದರೆ ಅದು ಸಿಕ್ಸರ್‌ ಆಗುತ್ತಿತ್ತು. ಆದರೆ ಎಂಸಿಜಿಯಲ್ಲಿ ಫೀಲ್ಡ್‌ಗೆ ತಕ್ಕಂತೆ ಆಡುವುದನ್ನು ಮರೆತ ಪಾಕಿಸ್ತಾನ ಕೈಸುಟ್ಟುಕೊಂಡಿತು.

3. ಬೌಲರ್‌ಗಳ ಅತ್ಯುತ್ತಮ ನಿರ್ವಹಣೆ: ಬೌಲರ್‌ಗಳ ನಿರ್ವಹಣೆಯಲ್ಲೂ ನಾಯಕ ಬಟ್ಲರ್‌ ಚಾಕಚಕ್ಯತೆ ತೋರಿದರು. ಇಂಗ್ಲೆಂಡ್‌ ಸ್ಯಾಮ್‌ ಕರ್ರನ್‌ರನ್ನು ಸೂಪರ್‌-12 ಹಂತದಲ್ಲಿ ಮುಖ್ಯವಾಗಿ ಡೆತ್‌ ಓವರ್‌ಗಳಲ್ಲಿ ಬಳಸಿತು. ಆದರೆ ನಾಕೌಟ್‌ ಹಂತದಲ್ಲಿ ಕರ್ರನ್‌ರ ಪಾತ್ರ ಸ್ವಲ್ಪ ಬದಲಾಯಿತು. ಗಾಯಾಳು ಮಾರ್ಕ್ ವುಡ್‌ ಬದಲಿಗೆ ಜೋರ್ಡನ್‌ ಕಣಕ್ಕಿಳಿದ ಕಾರಣ, ಕರ್ರನ್‌ ಪವರ್‌-ಪ್ಲೇನಲ್ಲೂ ಬೌಲ್‌ ಮಾಡಿದರು. ಮೊದಲು ರಿಜ್ವಾನ್‌ ವಿಕೆಟ್‌ ಕಬಳಿಸಿದ ಕರ್ರನ್‌, ಪವರ್‌-ಪ್ಲೇನಲ್ಲಿ 17ನೇ ಓವರಲ್ಲಿ ಮಸೂದ್‌, 19ನೇ ಓವರಲ್ಲಿ ನವಾಜ್‌ ವಿಕೆಟ್‌ ಕಿತ್ತರು.

ಇಂಗ್ಲೆಂಡ್‌ಗೆ ಮತ್ತೊಂದು ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟೋಕ್ಸ್‌, ಪಾಕಿಸ್ತಾನಕ್ಕೆ 'ಸ್ಟ್ರೋಕ್‌'..!

ಇನ್ನು ವಿಶ್ವಕಪ್‌ಗೂ ಮುನ್ನ ದ್ವಿಪಕ್ಷೀಯ ಸರಣಿಯಲ್ಲಿ ಮೋಯಿನ್‌ ಅಲಿಯನ್ನು ಪಾಕ್‌ ಬ್ಯಾಟರ್‌ಗಳು ಗುರಿಯಾಗಿಸಿದ್ದರು. ಅಲಿಯನ್ನು ಫೈನಲ್‌ನಲ್ಲಿ ದಾಳಿಗಿಳಿಸಲಿಲ್ಲ. ರಶೀದ್‌ರನ್ನು ಮಧ್ಯ ಓವರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲೂ ಬಟ್ಲರ್‌ ಯಶಸ್ವಿಯಾದರು.

4. ಡೆತ್‌ ಓವರಲ್ಲಿ ಸೂಪರ್‌ ಶೋ: ಪಾಕಿಸ್ತಾನ ಡೆತ್‌ ಓವರಲ್ಲಿ ರನ್‌ ಗಳಿಸಲು ತಿಣುಕಾಡಿತು. ಕೊನೆ 5 ಓವರಲ್ಲಿ ಕೇವಲ 2 ಬೌಂಡರಿಗಳನ್ನಷ್ಟೇ ಬಾರಿಸಿತು. ಕರ್ರನ್‌, ಜೋರ್ಡನ್‌ ಅಸಾಧಾರಣ ಪ್ರದರ್ಶನ ತೋರಿದರು. 17ರಿಂದ 19 ಓವರ್‌ ನಡುವೆ ಪಾಕಿಸ್ತಾನ ತನ್ನ ಮೂವರು ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿತು.

Latest Videos
Follow Us:
Download App:
  • android
  • ios