Aus vs Eng: ರೋಚಕ ಘಟ್ಟಕ್ಕೆ ಆ್ಯಷಸ್ ಮೊದಲ ಟೆಸ್ಟ್!
ಕುತೂಹಲಘಟ್ಟ ತಲುಪಿದ ಆಸ್ಟ್ರೇಲಿಯಾ-ಇಂಗ್ಲೆಂಡ್ ಆ್ಯಷಸ್ ಟೆಸ್ಟ್
ಇಂಗ್ಲೆಂಡ್ 273/10, ಆಸೀಸ್ಗೆ 281 ರನ್ ಗುರಿ
ಕೊನೆಯ ದಿನ ಆಸ್ಟ್ರೇಲಿಯಾ 174 ರನ್ ಗಳಿಸಬೇಕಿದೆ
ಬರ್ಮಿಂಗ್‌ಹ್ಯಾಮ್(ಜೂ.20): ಇಂಗ್ಲೆಂಡ್ ಹಾಗೂ ಆಸ್ಪ್ರೇಲಿಯಾ ನಡುವಿನ ಮೊದಲ ಆ್ಯಷಸ್ ಟೆಸ್ಟ್ ಕುತೂಹಲ ಘಟ್ಟ ತಲುಪಿದ್ದು, ಆಸೀಸ್ ಗೆಲುವಿಗೆ ಇಂಗ್ಲೆಂಡ್ 281 ರನ್ಗಳ ಗುರಿ ನಿಗದಿಪಡಿಸಿದೆ. ಇನ್ನು ಗುರಿ ಬೆನ್ನತ್ತಿರುವ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಬಾರಿಸಿದ್ದ, ಕೊನೆಯ ದಿನ 174 ರನ್ ಗಳಿಸಬೇಕಿದೆ. ಇನ್ನು ಇಂಗ್ಲೆಂಡ್ ಗೆಲುವು ಸಾಧಿಸಬೇಕಿದ್ದರೇ, ಕೊನೆಯ ದಿನ ಆಸ್ಟ್ರೇಲಿಯಾ 7 ವಿಕೆಟ್ ಕಬಳಿಸಬೇಕಿದೆ.
3ನೇ ದಿನ 28 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಸೋಮವಾರ 273ಕ್ಕೆ ಆಲೌಟಾಯಿತು. ತಂಡದ ಯಾವ ಆಟಗಾರ ಕೂಡಾ ಅರ್ಧಶತಕ ಬಾರಿಸದಿದ್ದರೂ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಇಂಗ್ಲೆಂಡ್ ತಂಡದ ಪರ ಜಾಕ್ ಕ್ರಾವ್ಲಿ ಕೇವಲ ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ಬಿಟ್ಟರೆ, ಉಳಿದೆಲ್ಲಾ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸುವಲ್ಲಿ ಸಫಲರಾದರು. ಚುರುಕಿನ ಬ್ಯಾಟಿಂಗ್ ನಡೆಸಿದ ಮಾಜಿ ನಾಯಕ ಜೋ ರೂಟ್ 55 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಹ್ಯಾರಿ ಬ್ರೂಕ್ 52 ಎಸೆತಗಳಲ್ಲಿ 5 ಬೌಂಡರಿ ಸಹಿತ 46 ರನ್ ಬಾರಿಸಿ ನೇಥನ್ ಲಯನ್‌ಗೆ ಎರಡನೇ ಬಲಿಯಾದರು. ಇನ್ನು ಬೆನ್ ಸ್ಟೋಕ್ಸ್ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಆಸ್ಟ್ರೇಲಿಯಾ ತಂಡದ ಪರ ನಾಯಕ ಪ್ಯಾಟ್ ಕಮಿನ್ಸ್ 63 ರನ್ ನೀಡಿ 4 ವಿಕೆಟ್ ಪಡೆದರೆ, ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್ 80 ರನ್ ನೀಡಿ 4 ವಿಕೆಟ್ ಕಿತ್ತರು. ಇನ್ನು ಜೋಶ್ ಹೇಜಲ್‌ವುಡ್ ಹಾಗೂ ಸ್ಕಾಟ್ ಬೋಲೆಂಡ್ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.
1,000 ಕೋಟಿ ರುಪಾಯಿ ಗಡಿದಾಟಿದ ಕಿಂಗ್ ಕೊಹ್ಲಿ ಆಸ್ತಿ ಮೌಲ್ಯ..! ವಿರಾಟನ ಮತ್ತೊಂದು ಅವತಾರ ಅನಾವರಣ
ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಜೋ ರೂಟ್ ಬಾರಿಸಿದ ಆಕರ್ಷಕ ಶತಕ ಹಾಗೂ ಜಾಕ್ ಕ್ರಾವ್ಲಿ ಮತ್ತು ಜಾನಿ ಬೇರ್‌ಸ್ಟೋವ್ ಬಾರಿಸಿದ ಚುರುಕಿನ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್್ಸನಲ್ಲಿ ಇಂಗ್ಲೆಂಡ್ 393 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ದಿನವೇ ಇಂಗ್ಲೆಂಡ್ ತಂಡವು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು, ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಬಾರಿಸಿದ ಸಮಯೋಚಿತ ಶತಕದ ಹೊರತಾಗಿಯೂ 386ಕ್ಕೆ ಆಲೌಟಾಗಿ 7 ರನ್ ಹಿನ್ನಡೆ ಅನುಭವಿಸಿತ್ತು.
ವಿಶ್ವಕಪ್ ಅರ್ಹತಾ ಸುತ್ತು: ಲಂಕಾ, ಒಮಾನ್ಗೆ ಜಯ
ಹರಾರೆ: ಐಸಿಸಿ ಏಕದಿನ ವಿಶ್ವಕಪ್ನ ಅರ್ಹತಾ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಒಮಾನ್ ಗೆಲುವು ಸಾಧಿಸಿವೆ. ಸೋಮವಾರ ಯುಎಇ ವಿರುದ್ಧದ ಪಂದ್ಯದಲ್ಲಿ ಲಂಕಾ 175 ರನ್ ಬೃಹತ್ ಗೆಲುವು ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಲಂಕಾ 8 ವಿಕೆಟ್ಗೆ 355 ರನ್ ಕಲೆಹಾಕಿತು. ಕುಸಾಲ್ ಮೆಂಡಿಸ್ 78, ಸಮರವಿಕ್ರಮ 73 ರನ್ ಸಿಡಿಸಿದರು. ಬೃಹತ್ ಗುರಿ ಬೆನ್ನತ್ತಿದ ಯುಎಇ 39 ಓವರ್ಗಳಲ್ಲಿ 180ಕ್ಕೆ ಆಲೌಟಾಯಿತು. ಹಸರಂಗ 24ಕ್ಕೆ 6 ವಿಕೆಟ್ ಕಿತ್ತರು.
'ಪಾಕಿಸ್ತಾನ ಕ್ರಿಕೆಟ್ ಉತ್ಕೃಷ್ಟವಾಗಿದೆ, ಭಾರತ ಬೇಕಿದ್ದರೇ ನರಕಕ್ಕೆ ಹೋಗಲಿ': ಜಾವೇದ್ ಮಿಯಾಂದಾದ್..!
ಮತ್ತೊಂದು ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಒಮಾನ್ 5 ವಿಕೆಟ್ ಜಯಗಳಿಸಿತು. ಐರ್ಲೆಂಡ್, ಡೊಕ್ರೆಲ್(ಔಟಾಗದೆ 91) ನೆರವಿನಿಂದ 7 ವಿಕೆಟ್ಗೆ 281 ರನ್ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಒಮಾನ್ 48.1 ಓವರ್ಗಳಲ್ಲಿ ಗೆಲುವು ಸಾಧಿಸಿತು. ಕಶ್ಯಪ್ ಪ್ರಜಾಪತಿ 72 ರನ್ ಸಿಡಿಸಿದರು.
ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿಗೆ ಶ್ಯಾಮ ಶಾ
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹಿಳಾ ತಂಡದ ಆಯ್ಕೆ ಸಮಿತಿಗೆ ಮಾಜಿ ಕ್ರಿಕೆಟರ್ ಶ್ಯಾಮ ಶಾ ಅವರು ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆ ಹೊರಡಿಸಿದ್ದಾರೆ. 51 ವರ್ಷದ ಶ್ಯಾಮ ಭಾರತ ಪರ 1995-97ರ ನಡುವೆ 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಬಂಗಾಳ ಹಾಗೂ ರೈಲ್ವೇಸ್ ತಂಡಗಳನ್ನೂ ಪ್ರತಿನಿಧಿಸಿರುವ ಅವರು ಸಮಿತಿಯಲ್ಲಿ ಮಿಥು ಮುಖರ್ಜಿ ಸ್ಥಾನವನ್ನು ತುಂಬಲಿದ್ದಾರೆ. ಇದೇ ವೇಳೆ ಕಿರಿಯರ ಆಯ್ಕೆ ಸಮಿತಿಗೆ ರಾಜ್ಯದ ತಿಲಕ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾಗಿ ಬಿಸಿಸಿಐ ತಿಳಿಸಿದೆ. ಇತ್ತೀಚೆಷ್ಟೆಎಸ್.ಶರತ್ ಅವರಿಂದ ತೆರವುಗೊಂಡಿದ್ದ ಸಮಿತಿಯ ಸ್ಥಾನಕ್ಕೆ ತಿಲಕ್ರನ್ನು ನೇಮಿಸಲಾಗಿತ್ತು.