Asianet Suvarna News Asianet Suvarna News

Asia Cup IND vs SL ಟಾಸ್ ಗೆದ್ದ ಶ್ರೀಲಂಕಾ, ಭಾರತ ತಂಡದಲ್ಲಿ 1 ಬದಲಾವಣೆ!

ಭಾರತ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿನ ಬದಲಾವಣೆ ಏನು?

Asia Cup IND vs SL t20 Sri lanka wins toss and opt bowl first against  Team India ckm
Author
First Published Sep 6, 2022, 7:06 PM IST

ದುಬೈ(ಸೆ.06):ಏಷ್ಯಾಕಪ್ ಟೂರ್ನಿಯಲ್ಲಿ ಸೋಲಿಲ್ಲದೆ ಸೂಪರ್ 4 ಹಂತ ಪ್ರವೇಶಿಸಿದ್ದ ಭಾರತ ಮಹತ್ವದ ಘಟ್ಟದಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು. ಇದರಿಂದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಹಾದಿ ಕಠಿಣವಾಗಿದೆ. ಭಾರತ ವಿರುದ್ಧ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಶ್ರೀಲಂಕಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  ಟೀಂ ಇಂಡಿಯಾದಲ್ಲಿ 1 ಬದಲಾವಣೆ ಮಾಡಲಾಗಿದೆ. ರವಿ ಬಿಶ್ನೋಯ್ ಬದಲು ರವಿಚಂದ್ರನ್ ಅಶ್ವಿನ್ ತಂಡ ಸೇರಿಕೊಂಡಿದ್ದಾನೆ. ಶ್ರೀಲಂಕಾ ತಂಡಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಇರುವ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಮೈದಾನದಲ್ಲಿನ ಕಳೆದ 3 ಪಂದ್ಯಗಳು ಚೇಸಿಂಗ್ ತಂಡ ಗೆಲುವು ದಾಖಲಿಸಿದೆ. ನಮ್ಮ ತಂಡ ಅತ್ಯುತ್ತಮ ಪ್ರದರ್ಶನದ ಮೂಲಕ ಈ ಹಂತಕ್ಕೆ ತಲುಪಿದ್ದೇವೆ. ಯುವ ಕ್ರಿಕೆಟಿಗರು ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ಮುಂದುವರಿಸಿ ಗೆಲುವು ಸಾಧಿಸುತ್ತೇವೆ ಎಂದು ಶ್ರೀಲಂಕಾ ದಸೂನ್ ಶನಕ ಹೇಳಿದ್ದಾರೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

Asia Cup 2022 ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದ ಸುನಿಲ್ ಗವಾಸ್ಕರ್..!

ಶ್ರೀಲಂಕಾ ಪ್ಲೇಯಿಂಗ್ 11
ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ

ಟೀಂ ಇಂಡಿಯಾಗೆ(India vs Sri lanka) ಗೆಲ್ಲಲೇಬೇಕಾದ ಪಂದ್ಯ ಇದು. ಕಾರಣ ಸೂಪರ್ 4 ಹಂತದಲ್ಲಿ(Super 4 Cricket) ಬದ್ಧವೈರಿ ಪಾಕಿಸ್ತಾನ(Pakistan) ವಿರುದ್ಧ ಭಾರತ ಮುಗ್ಗರಿಸಿದೆ. ಇದರಿಂದ ಇನ್ನುಳಿದ 2 ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಆಫ್ಘಾನಿಸ್ತಾನ(Afghanistan) ವಿರುದ್ದ ಹೋರಾಟ ನಡೆಸಲಿದೆ. ಈ ಎರಡೂ ಪಂದ್ಯದಲ್ಲಿ ಭಾರತ ಗೆಲ್ಲಬೇಕಿದೆ.

ಪಾಕಿಸ್ತಾನ ಎದುರು ರಿಷಭ್ ಪಂತ್ ಫೇಲ್, ಊರ್ವಶಿ ರೌಟೇಲಾ ಫುಲ್‌ ಟ್ರೋಲ್‌..!

ಏಷ್ಯಾಕಪ್ ಟೂರ್ನಿಯನ್ನು(Asia Cup 2022) ಭಾರತ ಭರ್ಜರಿ ಶುಭಾರಂಭ ಮಾಡಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 5 ವಿಕೆಟ್ ಗೆಲುವು ಸಾಧಿಸಿತ್ತು. ಇನ್ನು ಹಾಂಕಾಂಗ್ ವಿರುದ್ದದ ಪಂದ್ಯದಲ್ಲಿ 40 ರನ್ ಗೆಲುವು ದಾಖಲಿಸಿತ್ತು. ಈ ಮೂಲಕ ಎ ಗುಂಪಿನಿಂದ ಅಗ್ರಸ್ಥಾನಿಯಾಗಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿತ್ತು. ಆದರೆ ಪಾಕ್ ವಿರುದ್ದದ ಸೋಲು, ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ತೀವ್ರ ಹಿನ್ನಡೆ ತಂದಿದೆ.

ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವಿಗೆ ಸಜ್ಜಾಗಿದೆ.  ಒಂದು ಸಮಾಧಾನಕಾರ ಸಂಗತಿ ಎಂದರೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಲು ಶುರು ಮಾಡಿದ್ದಾರೆ. ಲಂಕಾ ವಿರುದ್ಧವೂ ಮೊದಲ ಎಸೆತದಿಂದಲೇ ರನ್‌ ಗಳಿಕೆಗೆ ವೇಗ ತುಂಬುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕವು ಸಮತೋಲನ ಕಂಡುಕೊಂಡರೆ ತಂಡ ಮತ್ತಷ್ಟುಅಪಾಯಕಾರಿಯಾಗಲಿದೆ. ಬಾಂಗ್ಲಾದೇಶ, ಅಷ್ಘಾನಿಸ್ತಾನ ವಿರುದ್ಧ ಗುರಿ ಬೆನ್ನತ್ತಿ ರೋಚಕ ಗೆಲುವು ಸಾಧಿಸಿರುವ ಶ್ರೀಲಂಕಾ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾಗೆ ಕಠಿಣ ಸವಾಲು ಎದುರಾಗಲಿದೆ 

Follow Us:
Download App:
  • android
  • ios