ಮೊದಲ ಬ್ಯಾಟ್ ಮಾಡಿದ 9 ವಿಕೆಟ್‌ಗೆ 257 ರನ್ ಗಳಿಸಿತು. ಸಮರ ವಿಕ್ರಮ 93, ಕುಸಾಲ್ ಮೆಂಡಿಸ್‌ 50 ರನ್ ಗಳಿಸಿದರು. ಗುರಿ ಬೆನ್ನತ್ತಿದ ಬಾಂಗ್ಲಾದೇಶ 48.1 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್‌ ಆಯಿತು. ತೌಹಿದ್ ಹೈದೊಯ್ 82 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ, ಉಳಿದ ಆಟಗಾರರಿಂದ ಸೂಕ್ತ ಕೊಡುಗೆ ಸಿಗಲಿಲ್ಲ. ಶಾನಕ, ತೀಕ್ಷಣ, ಪತಿರನ ತಲಾ 3 ವಿಕೆಟ್ ಪಡೆದರು.

ಕೊಲಂಬೊ(ಸೆ.10): ಏಷ್ಯಾಕಪ್‌ ಸೂಪರ್-4ನಲ್ಲಿ ಬಾಂಗ್ಲಾದೇಶ ವಿರುದ್ದ ಶ್ರೀಲಂಕಾ 21 ರನ್‌ ಗೆಲುವು ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಪಾಕ್‌ಗೆ ಶರಣಾಗಿದ್ದ ಬಾಂಗ್ಲಾದೇಶ ಸತತ 2 ಸೋಲುಂಡು, ಫೈನಲ್‌ ರೇಸ್‌ನಿಂದ ಬಹುತೇಕ ಹೊರಗುಳಿಯಿತು.

ಮೊದಲ ಬ್ಯಾಟ್ ಮಾಡಿದ 9 ವಿಕೆಟ್‌ಗೆ 257 ರನ್ ಗಳಿಸಿತು. ಸಮರ ವಿಕ್ರಮ 93, ಕುಸಾಲ್ ಮೆಂಡಿಸ್‌ 50 ರನ್ ಗಳಿಸಿದರು. ಗುರಿ ಬೆನ್ನತ್ತಿದ ಬಾಂಗ್ಲಾದೇಶ 48.1 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್‌ ಆಯಿತು. ತೌಹಿದ್ ಹೈದೊಯ್ 82 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ, ಉಳಿದ ಆಟಗಾರರಿಂದ ಸೂಕ್ತ ಕೊಡುಗೆ ಸಿಗಲಿಲ್ಲ. ಶಾನಕ, ತೀಕ್ಷಣ, ಪತಿರನ ತಲಾ 3 ವಿಕೆಟ್ ಪಡೆದರು.

ಲಂಕಾ ಹೊಸ ದಾಖಲೆ:

ಸತತ 13 ಪಂದ್ಯಗಳಲ್ಲಿ ಎದುರಾಳಿ ತಂಡವನ್ನು ಲಂಕಾ ಆಲೌಟ್‌ ಮಾಡಿತು. ಇದು ಏಕದಿನದಲ್ಲಿ ಹೊಸ ದಾಖಲೆ. ಇದೇ ವೇಳೆ ಲಂಕಾ, ಬಾಂಗ್ಲಾದೇಶ ವಿರುದ್ದ ಏಷ್ಯಾಕಪ್‌ನಲ್ಲಿ 13ನೇ ಜಯ ದಾಖಲಿಸಿತು. ಪಾಕ್ ಕೂಡಾ ಬಾಂಗ್ಲಾದೇಶ ವಿರುದ್ದ 13 ಗೆಲುವು ಕಂಡಿದೆ.

Asia Cup 2023 ಪಾಕ್‌ ಎದುರಿನ ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತಷ್ಟು ಬಲ..!

ನಾರ್ಥಾಂಪ್ಟನ್‌ಶೈರ್‌ ಕ್ಲಬ್‌ ಸೇರಿದ ಕರುಣ್‌ ನಾಯರ್‌

ಲಂಡನ್‌: ಇತ್ತೀಚೆಗಷ್ಟೇ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡ ತೊರೆದು ವಿದರ್ಭ ತಂಡಕ್ಕೆ ಸೇರಿದ್ದ ಕನ್ನಡಿಗ ಕರುಣ್‌ ನಾಯರ್‌ ಇಂಗ್ಲೆಂಡ್‌ ಕೌಂಟಿ ಚಾಂಪಿಯನ್‌ಶಿಪ್‌ನ ನಾರ್ಥಾಂಪ್ಟನ್‌ಶೈರ್‌ ತಂಡ ಸೇರ್ಪಡೆಗೊಂಡಿದ್ದಾರೆ. ಅವರು ಆಸ್ಟ್ರೇಲಿಯಾದ ಸ್ಯಾಮ್‌ ವೈಟ್‌ಮ್ಯಾನ್‌ ಬದಲಿಗೆ ತಂಡ ಕೂಡಿಕೊಂಡಿದ್ದಾರೆ. ಈ ಋತುವಿನಲ್ಲಿ ಕರುಣ್‌ ಮೂರು ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳನ್ನು ಆಡಲಿದ್ದಾರೆ.

ಭಾರತ-ವಿಂಡೀಸ್‌ ಟೆಸ್ಟ್‌ನ ಪಿಚ್‌ಗೆ ‘ಸಾಧಾರಣ’ ರೇಟಿಂಗ್‌

ದುಬೈ: ಜುಲೈನಲ್ಲಿ ಭಾರತ-ವೆಸ್ಟ್‌ಇಂಡೀಸ್‌ ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳಿಗೆ ಬಳಸಲಾಗಿದ್ದ ಪಿಚ್‌ಗೆ ಐಸಿಸಿ ‘ಸಾಧಾರಣ’ ರೇಟಿಂಗ್‌ ನೀಡಿದೆ. ಡೊಮಿನಿಕಾದ ವಿಂಡ್ಸರ್‌ ಪಾರ್ಕ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 141 ರನ್‌ ಜಯಗಳಿಸಿದ್ದರೆ, ಪೋರ್ಟ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ನಲ್ಲಿ ನಡೆದಿದ್ದ ಮಳೆ ಪೀಡಿತ 2ನೇ ಟೆಸ್ಟ್‌ ಡ್ರಾಗೊಂಡಿತ್ತು.

Asia Cup 2023: ವಿರಾಟ್ ಕೊಹ್ಲಿ ಹಿಂದಿಕ್ಕಿ ನಾಯಕನಾಗಿ ವಿಶ್ವದಾಖಲೆ ಬರೆದ ಬಾಬರ್ ಅಜಂ..!

8 ವರ್ಷ ಬಳಿಕ ಐಪಿಎಲ್‌ ಆಡಲು ಸ್ಟಾರ್ಕ್‌ ನಿರ್ಧಾರ

ಸಿಡ್ನಿ: ಆಸ್ಟ್ರೇಲಿಯಾದ ತಾರಾ ವೇಗಿ ಮಿಚೆಲ್‌ ಸ್ಟಾರ್ಕ್‌ 8 ವರ್ಷಗಳ ಬಳಿಕ ಮುಂದಿನ ವರ್ಷ ಮತ್ತೆ ಐಪಿಎಲ್‌ ಆಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, 2024ರಲ್ಲಿ ಐಪಿಎಲ್‌ ಆಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಸ್ಟಾರ್ಕ್‌ 2015ರಲ್ಲಿ ಐಪಿಎಲ್‌ನಲ್ಲಿ ಕೊನೆ ಬಾರಿ ಕಾಣಿಸಿದ್ದು, ಬಳಿಕ ಅಂತಾರಾಷ್ಟ್ರೀಯ ಪಂದ್ಯ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್‌ನಲ್ಲಿ ಆಡಿರಲಿಲ್ಲ. ಆದರೆ 2024ರಲ್ಲಿ ಅಮೆರಿಕದಲ್ಲಿ ಟಿ20 ವಿಶ್ವಕಪ್‌ ನಡೆಯಲಿರುವ ಕಾರಣ ಅದರ ಸಿದ್ಧತೆಗಾಗಿ ಐಪಿಎಲ್‌ ಆಡಲು ಸ್ಟಾರ್ಕ್‌ ನಿರ್ಧರಿಸಿದ್ದಾರೆ.