Asianet Suvarna News Asianet Suvarna News

ವಿರಾಟ್ ಕೊಹ್ಲಿ ಶತಕಕ್ಕೆ ಸಚಿನ್, ಪಾಂಟಿಂಗ್ ಸೇರಿ ದಿಗ್ಗಜರ ದಾಖಲೆ ಪುಡಿ ಪುಡಿ!

ಒಂದು ಪಂದ್ಯ, ಹಲವು ದಾಖಲೆ ನಿರ್ಮಾಣವಾಗಿದೆ. ವಿರಾಟ್ ಕೊಹ್ಲಿ ಸೆಂಚುರಿಗೆ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಸೇರಿದಂತೆ ಹಲವು ದಿಗ್ಗಜರ ದಾಖಲೆ ಪುಡಿ ಪುಡಿಯಾಗಿದೆ. ಇನ್ನು ರಾಹುಲ್ ಹಾಗೂ ಕೊಹ್ಲಿ ಜೊತೆಯಾಟದಲೂ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಪಂದ್ಯದಲ್ಲಿನ  ದಾಖಲೆ ವಿವರ ಇಲ್ಲಿದೆ.

Asia Cup 2023 India vs Pakistan Virat Kohli breaks sachin  Ponting records ckm
Author
First Published Sep 11, 2023, 7:10 PM IST

ಕೊಲೊಂಬೊ(ಸೆ.11) ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ ಹಲವು ದಾಖಲೆ ನಿರ್ಮಿಸಿದೆ. ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಶತಕದ ಅಬ್ಬರಕ್ಕೆ ದಿಗ್ಗಜರ ದಾಖಲೆ ಪುಡಿ ಪುಡಿಯಾಗಿದೆ. ಪಾಕಿಸ್ತಾನ ವಿರುದ್ಧ ಮೀಸಲು ದಿನದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ 94 ಎಸೆತದಲ್ಲಿ ಅಜೇಯ 122 ರನ್ ಸಿಡಿಸಿದ್ದಾರೆ. ಇತ್ತ ಕೆಎಲ್ ರಾಹುಲ್ 106 ಎಸೆತದಲ್ಲಿ ಅಜೇಯ 111 ರನ್ ದಾಖಲಿಸಿದ್ದಾರೆ.  ಕೊಹ್ಲಿ ಏಕದಿನದಲ್ಲಿ 47ನೇ ಸೆಂಚುರಿ ದಾಖಲಿಸಿದ್ದಾರೆ. ಇಷ್ಟೇ ಅಲ್ಲ ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 13,000 ಏಕದಿನ ರನ್ ಪೂರೈಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ದಾಖಲೆಯಲ್ಲಿ ಲಂಕಾದ ಕುಮಾರ ಸಂಗಕ್ಕಾರ ದಾಖಲೆ ಸರಿಗಟ್ಟಿದ್ದಾರೆ.

ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 13,000 ಏಕದಿನ ರನ್ ಪೂರೈಸಿದ ಸಾಧಕರು
267 ಇನ್ನಿಂಗ್ಸ್ - ವಿರಾಟ್ ಕೊಹ್ಲಿ
321 ಇನ್ನಿಂಗ್ಸ್ - ಸಚಿನ್ ತೆಂಡುಲ್ಕರ್
341 ಇನ್ನಿಂಗ್ಸ್ - ರಿಕಿ ಪಾಂಟಿಂಗ್
363 ಇನ್ನಿಂಗ್ಸ್ - ಕುಮಾರ್ ಸಂಗಕ್ಕಾರ
416 ಇನ್ನಿಂಗ್ಸ್ - ಸನತ್ ಜಯಸೂರ್ಯ

Asia cup ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ದಾಖಲೆ, ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ಶತಕ!

ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ದಾಖಲೆ
ಸನತ್ ಜಯಸೂರ್ಯ: 6 ಶತಕ
ವಿರಾಟ್ ಕೊಹ್ಲಿ: 4 ಶತಕ
ಕುಮಾರ ಸಂಗಕ್ಕಾರ: 4 ಶತಕ
ಶೊಯೆಬ್ ಮಲ್ಲಿಕ್: 3 ಶತಕ 

ಕೊಲೊಂಬೊದಲ್ಲಿ ಕಳೆದ ನಾಲ್ಕು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪರ್ಫಾಮೆನ್ಸ್
128* ರನ್(119)
131 ರನ್ (96)
110* ರನ್(116)
122* ರನ್(94)

ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಗರಿಷ್ಠ ಜೊತೆಯಾಟದ ದಾಖಲೆ
233 ರನ್ -  ವಿರಾಟ್ ಕೊಹ್ಲಿ ಹಾಗೂ  ಕೆಎಲ್ ರಾಹುಲ್ vs ಪಾಕಿಸ್ತಾನ(2023)
224 ರನ್ - ಮೊಹಮ್ಮದ್ ಹಫೀಸ್ ಹಾಗೂ ಎನ್ ಜೆಮ್ಶೆಡ್ vs ಭಾರತ(2012)
223 ರನ್ - ಶೋಯೆಬ್ ಮಲಿಕ್ ಹಾಗೂ ಯೂನಿಸ್ ಖಾನ್ vs ಹಾಂಕಾಂಗ್( 2004)
214 ರನ್ -ಬಾಬರ್ ಹಾಗೂ ಇಫ್ತಿಕಾರ್ ಅಹಮ್ಮದ್ vs ನೇಪಾಳ (2023)

ಏಷ್ಯಾಕಪ್ ಹೋರಾಟದಲ್ಲಿ ರಾಹುಲ್-ಕೊಹ್ಲಿ ಸೆಂಚುರಿ ದಾಖಲೆ, ಪಾಕಿಸ್ತಾನಕ್ಕೆ 357 ರನ್ ಗುರಿ!

ಏಕದಿನದಲ್ಲಿ ನಂ.3 ಹಾಗೂ ನಂ.4 ಸೆಂಚುರಿ ಸಿಡಿಸಿದ ಭಾರತೀಯರು
ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡುಲ್ಕರ್ vs ಕೀನ್ಯಾ(1999) 
ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ vs ಶ್ರೀಲಂಕಾಯ(2009)
ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ vs  ಪಾಕಿಸ್ತಾನ(2023) 

 

Follow Us:
Download App:
  • android
  • ios