Asia cup 2023 ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಗೆಲುವು, ಸೂಪರ್ 4ಗೆ ಲಗ್ಗೆ

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಪಾಕ್ ಪಂದ್ಯದ ಬಳಿಕ ನೇಪಾಳ ಪಂದ್ಯವೂ ರದ್ದಾಗುವ ಭೀತಿಯಲ್ಲಿತ್ತು. ಆದರೆ ಡಕ್‌ವರ್ತ್ ನಿಯಮದ ಪ್ರಕಾರ ಭಾರತ 145 ರನ್ ಚೇಸ್ ಮಾಡಿತು. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ದಾಖಲೆಯ ಆಟಕ್ಕೆ 10 ವಿಕೆಟ್ ಗೆಲುವು ದಾಖಲಿಸಿದೆ. 

Asia cup 2023 India thrash Nepal by 10 wickets in DLS Method due to rain ckm

ಪಲ್ಲಕೆಲೆ(ಸೆ.04) ಏಷ್ಯಾಕಪ್ ಟೂರ್ನಿ 2023ರಲ್ಲಿ ಭಾರತ ಮೊದಲ ಗೆಲುವಿನ ಸಿಹಿ ಕಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ನೇಪಾಳ ವಿರುದ್ಧದ ಪಂದ್ಯವೂ ಮಳೆಗೆ ಸ್ಥಗಿತಗೊಂಡಿತ್ತು. ಆದರೆ ಡಕ್‌ವರ್ತ್ ನಿಯಮ ಅನ್ವಯಿಸಿ ಭಾರತಕ್ಕೆ 23 ಓವರ್‌ಗಳಲ್ಲಿ 145 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಗುರಿಯನ್ನು ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆರಂಭಿಕರ ಜೋಡಿ ನಿರಾಯಾಸವಾಗಿ ಚೇಸ್ ಮಾಡಿತು. 20.1 ಓವರ್‌ಗಳಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಸೂಪರ್ 4 ಹಂತಕ್ಕೇರಿತು. ಇತ್ತ ರೋಹಿತ್ ಹಾಗೂ ಶಭಮನ್ ಗಿಲ್ ಜೋಡಿ ದಾಖಲೆ ಬರೆಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ನೇಪಾಳ 48.2 ಓವರ್‌ಗಳಲ್ಲಿ 230 ರನ್‌ಗೆ ಆಲೌಟ್ ಆಗಿತ್ತು. ಆದರೆ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ಮಳೆ ಅಡ್ಡಿಯಾಯಿತು. 2.1 ಓವರ್‌ಗಳಲ್ಲಿ 17 ರನ್ ಸಿಡಿಸುವಷ್ಟರಲ್ಲೇ ಮಳೆ ವಕ್ಕರಿಸಿತ್ತು.  ಗುರಿ ಚೇಸ್ ಮಾಡಲು ಮಳೆ ಅನುವು ಮಾಡಿಕೊಡಲಿಲ್ಲ. ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯ ಪುನರ್ ಆರಂಭವೇ ಅಸಾಧ್ಯವಾಗಿತ್ತು. ಅಂತಿಮ ಹಂತದಲ್ಲಿ ಮಳೆ ನಿಂತಿತ್ತು. ಪಲ್ಲಕೆಲೆ ಕ್ರೀಡಾಂಗಣ ಸಿಬ್ಬಂಧಿ ಮೈದಾನ ಸಜ್ಜುಗೊಳಿಸಿದರು. ಡಕ್‌ವರ್ತ್ ನಿಯಮದ ಪ್ರಕಾರ ಭಾರತಕ್ಕೆ 23 ಓವರ್‌ಗಳಲ್ಲಿ 145 ರನ್ ಟಾರ್ಗೆಟ್ ನೀಡಲಾಗಿತ್ತು.

ಏಷ್ಯಾಕಪ್ 2023, ಸೂಪರ್ 4 ಹಂತದ ಎಲ್ಲಾ ಪಂದ್ಯದ ಸ್ಥಳಾಂತರ! 

ಮೈದಾನಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರೋಹಿತ್ ಶರ್ಮಾ 39 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರೆ, ಶುಭಮನ್ ಗಿಲ್ 47 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಭಾರತ 20.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ರೋಹಿತ್ ಶರ್ಮಾ ಅಜೇಯ 74 ಹಾಗೂ ಶುಭ್‌ಮನ್ ಗಿಲ್ ಅಜೇಯ 67 ರನ್ ಸಿಡಿಸಿದರು. 10 ವಿಕೆಟ್ ಗೆಲುವು ದಾಖಲಿಸಿದ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಿತು. ನೇಪಾಳ ಟೂರ್ನಿಯಂದ ಹೊರಬಿದ್ದತು. 

ಕೊಹ್ಲಿ ಪರ ಘೋಷಣೆಗೆ ಉರಿದು ಬಿದ್ದ ಗಂಭೀರ್, ಮಧ್ಯದ ಬೆರಳು ತೋರಿಸಿ ಸಂಸದನ ಅಸಭ್ಯ ನಡೆ!

ಆರಂಭಿಕರಾದ ರೋಹಿತ್ ಹಾಗೂ ಗಿಲ್ ಅಜೇಯ 147 ರನ್ ಜೊತೆಯಾಟ ನೀಡುವ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ಒಪನಿಂಗ್ ಪಾರ್ಟ್ನರ್‌ಶಿಪ್ ನೀಡಿದ ಹೆಗ್ಗಳಿಕೆಗೆ ಪಾತ್ರರಾದರು.

ಏಷ್ಯಾಕಪ್‌ನಲ್ಲಿ ಭಾರತದ ಪರ ಗರಿಷ್ಠ ಓಪನಿಂಗ್ ಪಾರ್ಟ್ನರ್‌ಶಿಪ್ 

210 ರನ್;  ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ vs ಪಾಕಿಸ್ತಾನ,  2018
161 ರನ್;  ಸಚಿನ್ ತೆಂಡೂಲ್ಕರ್ ಹಾಗೂ ಮನೋಜ್ ಪ್ರಭಾಕರ್ , 1995
147* ರನ್;  ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ , 2023
127 ರನ್ ;  ವಿರೇಂದ್ರ ಸೆಹ್ವಾಗ್ ಗೌತಮ್ ಗಂಭೀರ್ , 2008

 

Latest Videos
Follow Us:
Download App:
  • android
  • ios