Asianet Suvarna News Asianet Suvarna News

Asia Cup 2023 ಸೂಪರ್‌-4ನಲ್ಲಿ ಇಂದು ಬಾಂಗ್ಲಾ vs ಲಂಕಾ ಕದನ

ಗುಂಪು ಹಂತದ ಮುಖಾಮುಖಿಯಲ್ಲಿ ಬಾಂಗ್ಲಾ ವಿರುದ್ಧ ಲಂಕಾ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಬಾಂಗ್ಲಾಗೆ ಹೋಲಿಸಿದರೆ ಲಂಕಾ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಬಲಿಷ್ಠವಾಗಿದ್ದು ತವರಿನ ಲಾಭವೂ ಸಿಗಲಿದೆ. ಶುಕ್ರವಾರ ಮಳೆ ಬೀಳದ ಕಾರಣ ಎರಡೂ ತಂಡಗಳು ಕ್ರೀಡಾಂಗಣಕ್ಕಿಳಿದು ನೆಟ್ಸ್‌ ಅಭ್ಯಾಸ ನಡೆಸಿದವು. ಆದರೆ ಶನಿವಾರ ಮಳೆ ಸುರಿಯುವ ಸಾಧ್ಯತೆ ಶೇ.80ರಷ್ಟಿದ್ದು, ಪಂದ್ಯಕ್ಕೆ ಅಡ್ಡಿಯಾಗಬಹುದು.

Asia Cup 2023 Bangladesh take on Sri Lanka in Super 4 clash kvn
Author
First Published Sep 9, 2023, 11:22 AM IST

ಕೊಲಂಬೊ(ಸೆ.09): ಈ ಬಾರಿ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ, ಶನಿವಾರ ಶ್ರೀಲಂಕಾ ವಿರುದ್ಧದ ಸೂಪರ್‌-4 ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಕಂಡಿದ್ದ ಬಾಂಗ್ಲಾ, ಈ ಪಂದ್ಯದಲ್ಲಿ ಲಂಕಾವನ್ನು ಹಣಿಯುವ ಉತ್ಸಾಹದಲ್ಲಿದೆ. ಅತ್ತ ಲಂಕಾ ಸೂಪರ್‌-4ನಲ್ಲಿ ಮೊದಲ ಪಂದ್ಯವಾಡುತ್ತಿದ್ದು, ಗೆಲುವಿಗೆ ತವಕಿಸುತ್ತಿದೆ. ಮುಂದಿನ ಪಂದ್ಯಗಳಲ್ಲಿ ಲಂಕಾಕ್ಕೆ ಬಲಿಷ್ಠ ತಂಡಗಳಾದ ಭಾರತ, ಪಾಕಿಸ್ತಾನ ಎದುರಾಗಲಿರುವ ಕಾರಣ ಈ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಗುಂಪು ಹಂತದ ಮುಖಾಮುಖಿಯಲ್ಲಿ ಬಾಂಗ್ಲಾ ವಿರುದ್ಧ ಲಂಕಾ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಬಾಂಗ್ಲಾಗೆ ಹೋಲಿಸಿದರೆ ಲಂಕಾ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಬಲಿಷ್ಠವಾಗಿದ್ದು ತವರಿನ ಲಾಭವೂ ಸಿಗಲಿದೆ. ಶುಕ್ರವಾರ ಮಳೆ ಬೀಳದ ಕಾರಣ ಎರಡೂ ತಂಡಗಳು ಕ್ರೀಡಾಂಗಣಕ್ಕಿಳಿದು ನೆಟ್ಸ್‌ ಅಭ್ಯಾಸ ನಡೆಸಿದವು. ಆದರೆ ಶನಿವಾರ ಮಳೆ ಸುರಿಯುವ ಸಾಧ್ಯತೆ ಶೇ.80ರಷ್ಟಿದ್ದು, ಪಂದ್ಯಕ್ಕೆ ಅಡ್ಡಿಯಾಗಬಹುದು.

Asia Cup 2023: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌, ಇಂಡೋ-ಪಾಕ್‌ ಪಂದ್ಯಕ್ಕೆ ಮಳೆ ಬಂದ್ರೂ ಚಿಂತೆ ಬೇಡ..!

ಪಂದ್ಯ: ಮಧ್ಯಾಹ್ನ 3ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌

ಆಸೀಸ್‌ಗೆ ಜಯ ತಂದಿತ್ತ ಮಾರ್ನಸ್‌-ಏಗಾರ್ ಸಾಹಸ

ಬ್ಲೂಮ್‌ಫಾಂಟೈನ್‌(ದ.ಆಫ್ರಿಕಾ): ಕ್ಯಾಮರೂನ್‌ ಗ್ರೀನ್‌ ತಲೆಗೆ ಪೆಟ್ಟು ಬಿದ್ದ ಕಾರಣ ಸುಪ್ತಾವಸ್ಥೆ ಬದಲಿ ಆಟಗಾರನಾಗಿ ಕ್ರೀಸ್‌ಗಿಳಿದ ಮಾರ್ನಸ್‌ ಲಬುಶೇನ್‌, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 3 ವಿಕೆಟ್‌ ರೋಚಕ ಗೆಲುವು ತಂದುಕೊಟ್ಟರು.

Asia Cup 2023: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮೀಸಲು ದಿನ ಏಕೆ? ಬಾಂಗ್ಲಾ, ಲಂಕಾ ವಿರೋಧ?

ಗುರುವಾರ ನಡೆದ ಪಂದ್ಯದಲ್ಲಿ ದ.ಆಫ್ರಿಕಾ ತೆಂಬ ಬವುಮಾ ಅವರ 114 ರನ್‌ ಹೋರಾಟದ ಹೊರತಾಗಿಯೂ 49 ಓವರಲ್ಲಿ 222ಕ್ಕೆ ಆಲೌಟ್‌ ಆಯಿತು. ಸುಲಭ ಗುರಿ ಬೆನ್ನತ್ತಿದ ಆಸೀಸ್‌ 5 ವಿಕೆಟ್‌ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದ ಲಬುಶೇನ್‌ ಮತ್ತೆರಡು ವಿಕೆಟ್‌ ಪತನಕ್ಕೆ ಸಾಕ್ಷಿಯಾದರು. 17ನೇ ಓವರಲ್ಲಿ 113ಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ಗೆ ಲಬುಶೇನ್‌(80) ಹಾಗೂ ಆ್ಯಸ್ಟನ್‌ ಏಗಾರ್‌(48) ನಡುವೆ ಮುರಿಯದ 8ನೇ ವಿಕೆಟ್‌ಗೆ ಮೂಡಿಬಂದ 112 ರನ್‌ ಜೊತೆಯಾಟ ನೆರವಾಯಿತು. ಆಸೀಸ್‌ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಏಕದಿನ ವಿಶ್ವಕಪ್‌ ಬಳಿಕ ಸ್ಟೋಕ್ಸ್‌ಗೆ ಶಸ್ತ್ರಚಿಕಿತ್ಸೆ

ಕಾರ್ಡಿಫ್‌: ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಏಕದಿನ ವಿಶ್ವಕಪ್‌ ಬಳಿಕ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, 2024ರ ಜನವರಿಯಲ್ಲಿ ಭಾರತ ವಿರುದ್ಧದ 5 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸ್ಟೋಕ್ಸ್‌ ತುಂಬಾ ಸಮಯದಿಂದಲೂ ಮಂಡಿ ನೋವಿನಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಕಳೆದ ಆ್ಯಶಸ್‌ ಸರಣಿಯ ಕೊನೆ 3 ಪಂದ್ಯದಲ್ಲಿ ಬೌಲ್‌ ಮಾಡಿರಲಿಲ್ಲ. ವಿಶ್ವಕಪ್‌ನಲ್ಲೂ ಅವರು ತಜ್ಞ ಬ್ಯಾಟರ್‌ ಆಗಿ ಕಣಕ್ಕಿಳಿಯಲಿದ್ದು, ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದರೆ 8-12 ವಾರಗಳ ವಿಶ್ರಾಂತಿ ಅಗತ್ಯವಿರಲಿದ್ದು, ಟೆಸ್ಟ್‌ ಸರಣಿಗೂ ಮುನ್ನ ಫಿಟ್‌ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

 

Follow Us:
Download App:
  • android
  • ios