Asianet Suvarna News Asianet Suvarna News

Virat Kohli ಶತಕವನ್ನು ನಾಲ್ಕು ಪದಗಳಲ್ಲಿ ವರ್ಣಿಸಿದ ಅನುಷ್ಕಾ ಶರ್ಮಾ..!

ವಿರಾಟ್ ಕೊಹ್ಲಿ ರನ್ ಕದಿಯುವ ವಿಚಾರದಲ್ಲಿ ಸದಾ ಮುಂದು ಎನ್ನುವುದನ್ನು ಪಾಕಿಸ್ತಾನ ಎದುರಿನ ಪಂದ್ಯದಲ್ಲೂ ಸಾಬೀತು ಮಾಡಿ ತೋರಿಸಿದ್ದಾರೆ. ಆಡಿದ 94 ಎಸೆತಗಳ ಪೈಕಿ ವಿರಾಟ್ ಕೊಹ್ಲಿ 38 ಬಾರಿ ಒಂಟಿ ರನ್ ಕಲೆಹಾಕಿದರೆ, 15 ಬಾರಿ ಎರಡು ರನ್ ಓಡಿ ತಾವೆಷ್ಟು ಫಿಟ್ ಆಗಿದ್ದೇನೆ ಎನ್ನುವುದನ್ನು ಅನಾವರಣ ಮಾಡಿದ್ದಾರೆ.

Asia Cup 2023 Anushka Sharma Four Word Reaction To Virat Kohli century Against Pakistan kvn
Author
First Published Sep 12, 2023, 11:01 AM IST

ಕೊಲಂಬೊ(ಸೆ.12): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಕೆಚ್ಚೆದೆಯ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ 47ನೇ ಅಂತಾರಾಷ್ಟ್ರೀಯ ಶತಕ ಎನಿಸಿಕೊಂಡಿದೆ. 2023ರ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 94 ಎಸೆತಗಳನ್ನು ಎದುರಿಸಿ ಅಜೇಯ 122 ರನ್ ಸಿಡಿಸಿ ಮಿಂಚಿದರು. ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಬಾರಿಸಿದ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಬಾರಿಸಿದ ಅಜೇಯ ಶತಕಗಳ ನೆರವಿನಿಂದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 356 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಪಾಕಿಸ್ತಾನ ಕೇವಲ 128 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 228 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇನ್ನು ವಿರಾಟ್ ಕೊಹ್ಲಿ ಶತಕ ಸಿಡಿಸಿದ ಬೆನ್ನಲ್ಲೇ ಪತ್ನಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯ ಶತಕವನ್ನು 4 ಪದಗಳ ಮೂಲಕ ಬಣ್ಣಿಸಿದ್ದಾರೆ.

ವಿರಾಟ್ ಕೊಹ್ಲಿ, ಪ್ರೇಮದಾಸ ಮೈದಾನದಲ್ಲಿ ಸತತ 4ನೇ ಶತಕ ಸಿಡಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ ಫೋಟೋ ಜತೆಗೆ "Super knock, super guy"(ಸೂಪರ್ ವ್ಯಕ್ತಿಯಿಂದ, ಸೂಪರ್ ಆಟ) ಎಂದು ಕಿಂಗ್ ಕೊಹ್ಲಿ ಬ್ಯಾಟಿಂಗ್ ಬಣ್ಣಿಸಿದ್ದಾರೆ.

Asia Cup 2023 Anushka Sharma Four Word Reaction To Virat Kohli century Against Pakistan kvn

ವಿರಾಟ್ ಕೊಹ್ಲಿ ರನ್ ಕದಿಯುವ ವಿಚಾರದಲ್ಲಿ ಸದಾ ಮುಂದು ಎನ್ನುವುದನ್ನು ಪಾಕಿಸ್ತಾನ ಎದುರಿನ ಪಂದ್ಯದಲ್ಲೂ ಸಾಬೀತು ಮಾಡಿ ತೋರಿಸಿದ್ದಾರೆ. ಆಡಿದ 94 ಎಸೆತಗಳ ಪೈಕಿ ವಿರಾಟ್ ಕೊಹ್ಲಿ 38 ಬಾರಿ ಒಂಟಿ ರನ್ ಕಲೆಹಾಕಿದರೆ, 15 ಬಾರಿ ಎರಡು ರನ್ ಓಡಿ ತಾವೆಷ್ಟು ಫಿಟ್ ಆಗಿದ್ದೇನೆ ಎನ್ನುವುದನ್ನು ಅನಾವರಣ ಮಾಡಿದ್ದಾರೆ.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, "ನಾನು ನನ್ನ ತಂಡಕ್ಕೆ ನೆರವಾಗುವ ನಿಟ್ಟಿನಲ್ಲಿ ಯಾವಾಗಲೂ ಸಿದ್ದತೆ ನಡೆಸುತ್ತಿರುತ್ತೇನೆ. ಕೆ ಎಲ್ ರಾಹುಲ್ ಉತ್ತಮ ಆರಂಭ ಪಡೆದರು, ನಾನು ಆಗ ಅವರಿಗೆ ಸ್ಟ್ರೈಕ್ ನೀಡುವತ್ತ ಹೆಚ್ಚು ಒತ್ತು ನೀಡಿದೆ" ಎಂದು ತಮ್ಮ ಇನಿಂಗ್ಸ್‌ ಬಗ್ಗೆ ಹೇಳಿದರು.  

ಇದಾದ ಬಳಿಕ ನಾನು ಎಲ್ಲಿ ತಮ್ಮ ಆಟದ ವೇಗವನ್ನು ಹೆಚ್ಚಿಸಿಕೊಳ್ಳಬೇಕಿತ್ತೋ ಅಲ್ಲಿಂದ ಶುರು ಮಾಡಿದೆ. ನನ್ನ ಫಿಟ್ನೆಸ್ ಬಗ್ಗೆ ನನಗೆ ಹೆಮ್ಮೆಯಿದೆ. ದೊಡ್ಡ ಹೊಡೆತಗಳನ್ನು ಬಾರಿಸುವುದಕ್ಕಿಂತ ಎರಡು ರನ್ ಓಡುವುದು ನನಗೆ ತುಂಬಾ ಸುಲಭ ಎನಿಸಿತು. ಈ ತಂತ್ರ ನನಗೆ ಫಲ ಕೊಟ್ಟಿತು. ಮುಂದೆಯೂ ಇದೇ ರೀತಿ ಆಡಲು ಪ್ರಯತ್ನಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊಲಂಬೊದಲ್ಲಿ ಸತತ 4ನೇ ಶತಕ!

ವಿರಾಟ್‌ ಕೊಹ್ಲಿ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಸತತ 4 ಇನ್ನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ್ದಾರೆ. 2012ರಲ್ಲಿ ಲಂಕಾ ವಿರುದ್ಧ ಔಟಾಗದೆ 128, 2017ರಲ್ಲಿ ಲಂಕಾ ವಿರುದ್ಧ 131 ಹಾಗೂ 110 ರನ್‌ ಸಿಡಿಸಿದ್ದರು. ಒಂದು ಕ್ರೀಡಾಂಗಣದಲ್ಲಿ ಸತತ 4 ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ 2ನೇ ಆಟಗಾರ ವಿರಾಟ್‌. ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಸೆಂಚೂರಿಯನ್‌ನ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿದ್ದರು.

Follow Us:
Download App:
  • android
  • ios