Asianet Suvarna News Asianet Suvarna News

Asia Cup 2022 ಡಿಜಿಟಲ್‌ ವೀಕ್ಷಣೆ: ದಾಖಲೆ ಪ್ರಮಾಣದಲ್ಲಿ ಭಾರತ-ಪಾಕ್‌ ಪಂದ್ಯ ವೀಕ್ಷಣೆ..!

* ದಾಖಲೆಯ ಪ್ರಮಾಣದಲ್ಲಿ ಭಾರತ ಪಾಕಿಸ್ತಾನ ಪಂದ್ಯ ವೀಕ್ಷಣೆ 
* ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಗೆದ್ದು ಬೀಗಿದ ಭಾರತ
*  ಡಿಜಿಟಲ್‌ ವೀಕ್ಷಕರ ಸಂಖ್ಯೆ ಒಂದು ಹಂತದಲ್ಲಿ 13 ಮಿಲಿಯನ್‌ ದಾಟಲು

Asia Cup 2022 India vs Pakistan Match Gets Record Viewership kvn
Author
First Published Aug 30, 2022, 9:37 AM IST

ದುಬೈ(ಆ30): ಭಾರತ-ಪಾಕಿಸ್ತಾನ ಪಂದ್ಯ ನಡೆಯುವಾಗಲೆಲ್ಲಾ ಅಭಿಮಾನಿಗಳಲ್ಲಿ ಕುತೂಹಲ, ಕಾತರ ಜಾಸ್ತಿಯಾಗುವುದು ಸರ್ವೇ ಸಾಮಾನ್ಯ. ಕೆಲ ನಿಮಿಷಗಳಲ್ಲೇ ಟಿಕೆಟ್‌ ಸೋಲ್ಡ್‌ಔಟ್‌ ಆಗುವುದರ ಜೊತೆಗೆ ಕೋಟ್ಯಂತರ ಮಂದಿ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಭಾನುವಾರ ನಡೆದ ಏಷ್ಯಾ ಕಪ್‌ ಟಿ20 ಟೂರ್ನಿಯ ಉಭಯ ತಂಡಗಳ ನಡುವಿನ ಪಂದ್ಯ ಡಿಜಿಟಲ್‌ನಲ್ಲೂ ಹೊಸ ದಾಖಲೆ ಬರೆದಿದೆ.

ಭಾರತದಲ್ಲಿ ಪ್ರಸಾರ ಹಕ್ಕನ್ನು ಪಡೆದಿದ್ದ ಡಿಸ್ನಿ-ಹಾಟ್‌ಸ್ಟಾರ್‌ನಲ್ಲಿ ಪಂದ್ಯ ಪ್ರಸಾರವಾಗಿದ್ದು, ಈವರೆಗೆ ಏಕಕಾಲದಲ್ಲಿ ಅತ್ಯಂತ ಹೆಚ್ಚು ಮಂದಿ ವೀಕ್ಷಿಸಿದ ಭಾರತ-ಪಾಕ್‌ ಪಂದ್ಯ ಎಂಬ ದಾಖಲೆ ಬರೆದಿದೆ. ಪಂದ್ಯದ ಆರಂಭದಲ್ಲೇ 50 ಲಕ್ಷವಿದ್ದ ವೀಕ್ಷಕರ ಸಂಖ್ಯೆ ಒಂದು ಹಂತದಲ್ಲಿ 13 ಮಿಲಿಯನ್‌ ಅಂದರೆ 1.3 ಕೋಟಿ ದಾಟಿತ್ತು. ಇದು ಈವರೆಗಿನ ಹೊಸ ದಾಖಲೆ. ಇದಕ್ಕೂ ಮೊದಲು 2021ರ ಐಸಿಸಿ ಟಿ20 ವಿಶ್ವಕಪ್‌ನ ಉಭಯ ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನು 1.28 ಕೋಟಿ ಮಂದಿ ಏಕಕಾಲದಲ್ಲಿ ವೀಕ್ಷಿಸದ್ದು ಈವರೆಗಿನ ದಾಖಲೆಯಾಗಿತ್ತು. ಇದೇ ವೇಳೆ ಪಾಕಿಸ್ತಾನದಲ್ಲಿ ಪ್ರಸಾರ ಮಾಡುತ್ತಿದ್ದ ದರಾಜ್‌ ಆ್ಯಪ್‌ ಮೂಲಕ ಕೂಡಾ 1.3 ಕೋಟಿ ಮಂದಿ ಏಕಕಾಲದಲ್ಲಿ ಪಂದ್ಯ ವೀಕ್ಷಿಸಿದರು. ಇದು ಕೂಡಾ ದಾಖಲೆಯಾಗಿದೆ.

ಇನ್ನು 2019ರ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯವನ್ನು 2.53 ಕೋಟಿ ಮಂದಿ ಡಿಜಿಟಲ್‌ನಲ್ಲಿ ಏಕಕಾಲಕ್ಕೇ ಪಂದ್ಯ ವೀಕ್ಷಿಸಿದ್ದರು. ಇದು ಈವರೆಗೆ ಏಕಕಾಲಕ್ಕೆ ಅತೀ ಹೆಚ್ಚು ಮಂದಿ ವೀಕ್ಷಿಸಿದ ಕ್ರಿಕೆಟ್‌ ಪಂದ್ಯ ಎಂಬ ದಾಖಲೆ ಬರೆದಿದೆ.

ಪ್ರಧಾನಿ ಮೋದಿ, ಗಣ್ಯರ ಶ್ಲಾಘನೆ

ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ ತಂಡದ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಾಲಿ-ಮಾಜಿ ಕ್ರೀಡಾಪಟುಗಳು ಸೇರಿದಂತೆ ಹಲವರು ಕೊಂಡಾಡಿದ್ದಾರೆ. ಈ ಬಗ್ಗೆ ಪಂದ್ಯದ ಬಳಿಕ ಟ್ವೀಟ್‌ ಮಾಡಿದ ಮೋದಿ, ‘ಟೀಂ ಇಂಡಿಯಾ ಏಷ್ಯಾ ಕಪ್‌ನಲ್ಲಿ ಆಲ್ರೌಂಡ್‌ ಪ್ರದರ್ಶನ ನೀಡಿ ಜಯಗಳಿಸಿದೆ. ಆಟಗಾರರ ಕೌಶಲ್ಯ, ಧೈರ್ಯದಿಂದ ತಂಡಕ್ಕೆ ಗೆಲುವು ಲಭಿಸಿದೆ. ಎಲ್ಲರಿಗೂ ಅಭಿನಂದನೆಗಳು’ ಎಂದು ಶ್ಲಾಘಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ವಿರೇಂದ್ರ ಸೆಹ್ವಾಲ್‌, ಯುವರಾಜ್‌ ಸಿಂಗ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ ಸೇರಿದಂತೆ ಹಲವರು ಗೆಲುವಿಗೆ ಮೆಚ್ಚುಗೆ ಸೂಚಿಸಿದ್ದಾರೆ.

Asia Cup 2022: ಇಂಡೋ-ಪಾಕ್ ಪಂದ್ಯದ ವೇಳೆ ವೈರಲ್ ಆದ ಬೆಸ್ಟ್‌ ಮೀಮ್ಸ್‌ಗಳಿವು..!

ಹಾರ್ದಿಕ್‌ ಅದ್ಭುತ ಕಮ್‌ಬ್ಯಾಕ್‌

ಭಾನುವಾರದ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ 2018ರ ಘಟನೆಯನ್ನು ನೆನಪಿಸಿ ಫೋಟೋವೊಂದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. 2018ರ ಏಷ್ಯಾ ಕಪ್‌ ಟೂರ್ನಿಯಲ್ಲಿ ದುಬೈನಲ್ಲೇ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್‌ ಗಾಯಗೊಂಡು ಸ್ಟೆ್ರಚರ್‌ ಮೂಲಕ ಮೈದಾನ ತೊರೆದಿದ್ದರು. ಈ ಬಾರಿ ಅವರು ಆಲ್ರೌಂಡ್‌ ಪ್ರದರ್ಶನದ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಎರಡೂ ಸನ್ನಿವೇಶಗಳ ಫೋಟೋ ಹಂಚಿಕೊಂಡಿರುವ ಅವರು, ‘ಹಿನ್ನಡೆಗಿಂತ ಕಮ್‌ಬ್ಯಾಕ್‌ ಶ್ರೇಷ್ಠ’ ಎಂದು ಬರೆದಿದ್ದಾರೆ. ಇದೇ ವೇಳೆ ಹಾರ್ದಿಕ್‌ ಆಟಕ್ಕೆ ತಂಡದ ನಾಯಕ ರೋಹಿತ್‌ ಶರ್ಮಾ, ಮಾಜಿ ನಾಯಕ ವಿರಾಟ್‌ ಕೊಹ್ಲಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಸೇರಿದಂತೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios