Asianet Suvarna News Asianet Suvarna News

Asia Cup 2022: ಪಾಂಟಿಂಗ್‌ ಶತಕದ ದಾಖಲೆ ಸರಿಗಟ್ಟಿದ ಕೊಹ್ಲಿ, ಅಫ್ಘಾನ್‌ಗೆ ಬೃಹತ್‌ ಸವಾಲು

ನಾಯಕನ ಜವಾಬ್ದಾರಿ ವಹಿಸಿಕೊಂಡ ಬಳಿಕ ಕ್ಲಾಸಿಕ್‌ ಆಟದ ನಿರ್ವಹಣೆ ತೋರಿದ ಕನ್ನಡಿಗ ಕೆಎಲ್‌ ರಾಹುಲ್‌ ಹಾಗೂ ಮೂರು ವರ್ಷಗಳ ಬಳಿಕ ವಿರಾಟ್‌ ಕೊಹ್ಲಿ ಬಾರಿಸಿದ ಮೊಟ್ಟಮೊದಲ ಅಂತಾರಾಷ್ಟ್ರೀಯ ಶತಕದ ನೆರವಿನಿಂದ ಟೀಮ್‌ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್‌ ಸೂಪರ್‌-4 ಹಂತದ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದೆ.
 

Asia Cup 2022 India vs Afghanistan Super Four Match Virat Kohli Hits international century almost 3 years san
Author
First Published Sep 8, 2022, 9:14 PM IST

ದುಬೈ (ಸೆ. 8): ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ ಎಚ್ಚರಿಕೆ ಎನ್ನುವಂತೆ ಬ್ಯಾಟಿಂಗ್‌ ನಡೆಸಿದ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಬಾರಿಸಿದ ಮೊಟ್ಟಮೊದಲ ಶತಕದ ನೆರವಿನಿಂದ ಭಾರತ ತಂಡ ಏಷ್ಯಾಕಪ್‌ ಸೂಪರ್‌-4 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬೃಹತ್‌ ಮೊತ್ತ ದಾಖಲಿಸಿದೆ.  ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಮೊದಲ ವಿಕೆಟ್‌ಗೆ ಕೆಎಲ್‌ ರಾಹುಲ್‌ ಹಾಗೂ ವಿರಾಟ್ ಕೊಹ್ಲಿ ಶತಕದ ಜೊತೆಯಾಟವಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ ಆಡಿದ ಕೇವಲ 76 ಎಸೆತಗಳಲ್ಲಿ 119 ರನ್‌ ಚಚ್ಚುವ ಮೂಲಕ ಭಾರತದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಕೆಎಲ್‌ ರಾಹುಲ್‌ ಮೈದಾನದಲ್ಲಿ ಇರುವವರೆಗೂ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ ವಿರಾಟ್‌ ಕೊಹ್ಲಿ, ಕೊನೇ ಹಂತದಲ್ಲಿ ಬ್ಯಾಟಿಂಗ್‌ ಮೂಲಕ ವಿರಾಟ್‌ ಕೊಹ್ಲಿ ಅಬ್ಬರಿಸಿದ್ದರಿಂದ ಟೀಮ್‌ ಇಂಡಿಯಾ 2 ವಿಕೆಟ್‌ಗೆ 212 ರನ್‌ಗಳ ಬೃಹತ್‌ ರನ್‌ ಪೇರಿಸಲು ನೆರವಾದರು. ಇದು ವಿರಾಟ್‌ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕವಾಗಿದೆ. ಆ ಮೂಲಕ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಸೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್‌ ರಿಕಿ ಪಾಂಟಿಂಗ್‌ರೊಂದಿಗೆ ಜಂಟಿ 2ನೇ ಸ್ಥಾನಕ್ಕೇರಿದರು. 100 ಶತಕ ಬಾರಿಸಿರುವ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ.

ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದ ಭಾರತ 200ಕ್ಕಿಂತ ಅಧಿಕ ಮೊತ್ತ ಬಾರಿಸಬಹುದು ಎನ್ನುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದರೆ, ಕೊನೇ ಓವರ್‌ಗಳಲ್ಲಿ ಅಫ್ಘಾನಿಸ್ತಾನದ ಬೌಲರ್‌ಗಳನ್ನು ದಯನೀಯವಾಗಿ ದಂಡಿಸಿದ ವಿರಾಅಟ್‌ ಕೊಹ್ಲಿ ಭಾರತದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ನೆರವಾದರು. ಇದು ಹಾಲಿ ಆವೃತ್ತಿಯ ಏಷ್ಯಾಕಪ್‌ನಲ್ಲಿ ಮೊದಲ 200 ಪ್ಲಸ್‌ ಮೊತ್ತವಾಗಿದೆ. ಇನ್ನು ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಬೌಲಿಂಗ್‌ ಮಾಡಿದ್ದ ಅಫ್ಘಾನಿಸ್ತಾನದ ಬೌಲರ್‌ಗಳು ಟೀಮ್‌ ಇಂಡಿಯಾದ ಮುಂದೆ ದಯನೀಯವಾಗಿ ಶರಣಾದರು. 

Virat Kohli 71st Century: ಮೂರು ವರ್ಷಗಳ ಬಳಿಕ ಕೊಹ್ಲಿ ಸೆಂಚುರಿ, ಟಿ20ಯಲ್ಲಿ ಮೊಟ್ಟಮೊದಲ ಶತಕ

ಮೊದಲ ವಿಕೆಟ್‌ಗೆ ಕೆಎಲ್‌ ರಾಹುಲ್‌ ಜೊತೆ 119 ರನ್‌ಗಳ ಜೊತೆಯಾಟವಾಡಿದ ಬಳಿಕ, ಫರೀದ್‌ ಅಹ್ಮದ್‌ ಎಸೆದ 13ನೇ ಓವರ್‌ನಲ್ಲಿ ಕೆಎಲ್‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ (6) ಇಬ್ಬರೂ ವಿಕೆಟ್‌ ಒಪ್ಪಿಸಿದರು. ಆದರೆ, ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಮೋಟಾರ್‌ಅನ್ನು ಚಾಲ್ತಿಯಲ್ಲಿರಿಸಿದ್ದ ಕಿಂಗ್‌ ಕೊಹ್ಲಿ, ಅಭಿಮಾನಿಗಳ ಪರಮ ಆಸೆಯನ್ನು ಈ ಮೂಲಕ ಈಡೇರಿಸಿದರು. ಕೊಹ್ಲಿ 53ನೇ ಎಸೆತದಲ್ಲಿ ಸಿಕ್ಸರ್‌ ಮೂಲದ ಶತಕದ ಗಡಿ ಮುಟ್ಟಿದ ಬೆನ್ಲಲಿಯೇ ಮೈದಾನದಲ್ಲಿದ್ದ ಅಭಿಮಾನಿಗಳು ಭಾರೀ ಕರತಾಡನ ಮಾಡಿದರು. ಇದಕ್ಕೆ ತಂಡದ ಸಹ ಆಟಗಾರರು ಕೂಡ ಜೊತೆಯಾದರು. ಇಡೀ ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸಿಕ್ಕ ಅತೀ ದೊಡ್ಡ ಪ್ಲಸ್‌ ಪಾಯಿಂಟ್‌ ಎಂದರೆ, ವಿರಾಟ್‌ ಕೊಹ್ಲಿ ಫಾರ್ಮ್‌ ಕಂಡುಕೊಂಡಿರುವುದು. ಇಬ್ರಾಹಿಂ ಜದ್ರಾನ್‌, ವಿರಾಟ್‌ ಕೊಹ್ಲಿ ಕ್ಯಾಚ್‌ ಕೈಚೆಲ್ಲುವ ಮೂಲಕ ಜೀವದಾನವನ್ನೂ ನೀಡಿದ್ದರು.

Shubman Gill: ಗಿಲ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಲೇ ಕಾಲೆಳೆದ ಯುವರಾಜ್ ಸಿಂಗ್..!

ಕೊನೇ 10 ಓವರ್‌ಗಳಲ್ಲಿ 125 ರನ್‌: ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಆರ್ಭಟ ಹೇಗಿತ್ತೆಂದರೆ, ಮೊದಲ 10 ಓವರ್‌ಗಳ ಆಟದಲ್ಲಿ ಕೇವಲ 87 ರನ್ ಬಾರಿಸಿದ್ದ ಭಾರತ ತಂಡ ಕೊನೇ 10 ಓವರ್‌ಗಳಲ್ಲಿ 125 ರನ್‌ ಸಿಡಿಸಿತು. ಅದರಲ್ಲೂ ಕೊನೇ 30 ಎಸೆತಗಳಲ್ಲಿ ಟೀಮ್‌ ಇಂಡಿಯಾ 78 ರನ್‌ ಸಿಡಿಸಿತು. ಇದರಲ್ಲಿ ವಿರಾಟ್‌ ಕೊಹ್ಲಿಯದ್ದೇ ಗರಿಷ್ಠ ಪಾಲು. ಕಿಂಗ್‌ ಕೊಹ್ಲಿ ಮೊದಲ 50 ರನ್‌ ಬಾರಿಸಲು 32 ಎಸೆತ ತೆಗೆದುಕೊಂಡರೆ, ನಂತರದ 29 ಎಸೆತಗಳಲ್ಲಿಯೇ ವಿರಾಟ್‌ ಕೊಹ್ಲಿ 72 ರನ್‌ ಬಾರಿಸಿ ಅಬ್ಬರಿಸಿದರು.

 

Follow Us:
Download App:
  • android
  • ios