Asianet Suvarna News Asianet Suvarna News

Ashes Test Series: ಜೋ ರೂಟ್‌ ಉತ್ತಮ ಕ್ರಿಕೆಟಿಗ ಆದರೆ ಆತನಲ್ಲಿ ನಾಯಕತ್ವ ಗುಣಗಳಿಲ್ಲವೆಂದ ಮೆಕ್ಕಲಂ..!

* ಜೋ ರೂಟ್‌ ನಾಯಕತ್ವದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರೆಂಡನ್ ಮೆಕ್ಕಲಂ

* ರೂಟ್ ಉತ್ತಮ ಆಟಗಾರ, ಆದರೆ ಒಳ್ಳೆಯ ನಾಯಕನಲ್ಲವೆಂದ ಕಿವೀಸ್ ಮಾಜಿ ಕ್ರಿಕೆಟಿಗ

* ಆಸ್ಟ್ರೇಲಿಯಾ ಎದುರು ಗಾಬಾ ಟೆಸ್ಟ್ ಪಂದ್ಯದಲ್ಲಿ ಸೋಲುಂಡ ಜೋ ರೂಟ್ ಪಡೆ

Ashes Test Series Joe Root is an outstanding cricketer but does not have leadership qualities Says Brendon McCullum kvn
Author
Bengaluru, First Published Dec 14, 2021, 2:39 PM IST

ಬ್ರಿಸ್ಬೇನ್‌(ಡಿ.14): ಜೋ ರೂಟ್ ಓರ್ವ ಒಳ್ಳೆಯ ವ್ಯಕ್ತಿ ಹಾಗೂ ಅದ್ಭುತ ಕ್ರಿಕೆಟಿಗ, ಆದರೆ ಅವರಲ್ಲಿ ಹೇಳಿಕೊಳ್ಳುವಂತಹ ನಾಯಕತ್ವದ ಗುಣಗಳಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ (New Zealand Cricke) ದಿಗ್ಗಜ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ (Brendon McCullum) ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಪ್ರತಿಷ್ಠಿತ ಆ್ಯಷಸ್ ಟೆಸ್ಟ್‌ ಸರಣಿ (Ashes Test Series) ನಡೆಯುತ್ತಿರುವ ಸಂದರ್ಭದಲ್ಲೇ ಮೆಕ್ಕಲಂ ಇಂತಹದ್ದೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. 

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ (Australia vs England) ನಡುವಿನ ಗಾಬಾ ಟೆಸ್ಟ್‌ ಪಂದ್ಯದ ಬಗ್ಗೆ ಮಾತನಾಡಿರುವ ಮೆಕ್ಕಲಂ, ಆರಂಭಿಕ ಹಿನ್ನೆಡೆಯ ಹೊರತಾಗಿಯು ಗಾಬಾ ಟೆಸ್ಟ್‌ (Gabba Test) ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಕಮ್‌ಬ್ಯಾಕ್ ಮಾಡಲು ಅವಕಾಶವಿತ್ತು. ಆದರೆ ಅಂತಹ ಅವಕಾಶವನ್ನು ಬಳಸಿಕೊಳ್ಳುವಷ್ಟು ಜೋ ರೂಟ್ ಪಡೆ ಬಲಿಷ್ಠವಾಗಿಲ್ಲ ಎಂದು ಮೆಕ್ಕಲಂ ಅಭಿಪ್ರಾಯಪಟ್ಟಿದ್ದಾರೆ.

ನನಗಿಸುತ್ತಿದೆ ಈಗಲೂ ಜೋ ರೂಟ್ (Joe Root) ಅದ್ಭುತ ವ್ಯಕ್ತಿ ಹಾಗೂ ಪ್ರತಿಭಾನ್ವಿತ ಕ್ರಿಕೆಟಿಗ ಹಾಗೂ ಒಳ್ಳೆಯ ನಾಯಕನೆಂದು ಆತನನ್ನು ಕರೆಯುತ್ತಾರೆ. ಆದರೆ ನನಗೆ ಹಾಗನಿಸುತ್ತಿಲ್ಲ. ಇಂಗ್ಲೆಂಡ್‌ಗೆ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕಮ್‌ ಬ್ಯಾಕ್‌ ಮಾಡಲು ಅವಕಾಶವಿತ್ತು. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಯಾವಾಗ ಒತ್ತಡ ಇಂಗ್ಲೆಂಡ್ ಮೇಲೆ ಬಿತ್ತೋ ಆಗ ಆಸ್ಟ್ರೇಲಿಯಾ ಮತ್ತಷ್ಟು ಆಕ್ರಮಣಕಾರಿಯಾಟ ಪ್ರದರ್ಶಿಸಿತು ಎಂದು 40 ವರ್ಷದ ಮೆಕ್ಕಲಂ ಅಭಿಪ್ರಾಯಪಟ್ಟಿದ್ದಾರೆ.

ಇದು ಕ್ಯಾಲೆಂಡರ್‌ ವರ್ಷವೊಂದರಲ್ಲಿ ಇಂಗ್ಲೆಂಡ್ ಅನುಭವಿಸಿದ ಏಳನೇ ಟೆಸ್ಟ್ ಸೋಲು ಅಗಿದೆ. ಇಂಗ್ಲೆಂಡ್ ತಂಡವು ಕೆಲ ವರ್ಷಗಳ ಹಿಂದೆ ಕ್ಯಾಲೆಂಡರ್ ವರ್ಷವೊಂದರಲ್ಲಿ 8 ಬಾರಿ ಟೆಸ್ಟ್ ಸೋಲು ಅನುಭವಿಸಿದ್ದ ಈ ವರೆಗಿನ ಕಳಪೆ ಸಾಧನೆಯಾಗಿದೆ. ಇನ್ನು ಒಟ್ಟಾರೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸೋಲು ಕಂಡ ಕುಖ್ಯಾತಿ ಬಾಂಗ್ಲಾದೇಶ ಹೆಸರಿನಲ್ಲಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡವು ಕ್ಯಾಲೆಂಡರ್‌ ವರ್ಷವೊಂದರಲ್ಲಿ 9 ಸೋಲು ಕಂಡಿದೆ. ಈ ಬಾರಿ ಇಂಗ್ಲೆಂಡ್‌ ಪಾಲಿಗೆ ಅತ್ಯಂತ ಕಠಿಣ ಅಗ್ನಿಪರೀಕ್ಷೆ ವರ್ಷವಾಗಿದೆ ಎಂದು ಮೆಕ್ಕಲಂ ವಿಶ್ಲೇಷಿಸಿದ್ದಾರೆ.

ಜೋ ರೂಟ್ ಪಂದ್ಯವನ್ನು ಕೈಜಾರುವಂತೆ ಮಾಡಿದರು ಎಂದ ಮೆಕ್ಕಲಂ

ಜೋ ರೂಟ್ ಜಗತ್ತು ಕಂಡ ಅತ್ಯುತ್ತಮ ನಾಯಕರೆಂದು ನನಗನಿಸುತ್ತಿಲ್ಲ, ಮೊದಲ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಇದ್ದ ಅವಕಾಶವನ್ನು ಕೈಚೆಲ್ಲಿದರು ಎಂದು ಮೆಕ್ಕಲಂ ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡವು ತಿರುಗೇಟು ನೀಡಲು ಜೋ ರೂಟ್ ಅವಕಾಶ ಮಾಡಿಕೊಟ್ಟರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರಿಯಾದ ಸಮಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುವುದಷ್ಟೇ ಉತ್ತಮ ನಾಯಕನ ಲಕ್ಷಣವಲ್ಲ. ಜೋ ರೂಟ್‌ ಪಂದ್ಯ ಇಂಗ್ಲೆಂಡ್‌ ಕೈ ಜಾರುವಂತೆ ಮಾಡಿದರು. ಆಸ್ಟ್ರೇಲಿಯಾದಂತಹ ತಂಡಕ್ಕೆ ಕೊಂಚ ಅವಕಾಶ ನೀಡಿದರೂ ಬಲಿಷ್ಠವಾಗಿ ಕಮ್‌ ಬ್ಯಾಕ್‌ ಮಾಡುತ್ತದೆ. ಗಾಬಾ ಟೆಸ್ಟ್ ಪಂದ್ಯದಲ್ಲೂ ಆಗಿದ್ದು ಅದೆ ಎಂದು ಮೆಕ್ಕಲಂ ಹೇಳಿದ್ದಾರೆ.

Ashes Test Series: ಅಡಿಲೇಡ್‌ ಟೆಸ್ಟ್ ಪಂದ್ಯದಿಂದ ಹೊರಬಿದ್ದ ವೇಗಿ ಜೋಶ್ ಹೇಜಲ್‌ವುಡ್..!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ ಮೈದಾನ ಆತಿಥ್ಯ ವಹಿಸಲಿದೆ. ಆ್ಯಷಸ್ ಟೆಸ್ಟ್‌ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 16ರಿಂದ ಆರಂಭವಾಗಲಿದೆ.

Follow Us:
Download App:
  • android
  • ios