Asianet Suvarna News Asianet Suvarna News

ಇಂದಿ​ನಿಂದ ಇಂಗ್ಲೆಂಡ್‌-ಆಸ್ಪ್ರೇ​ಲಿಯಾ ಆ್ಯಷಸ್‌ ಟೆಸ್ಟ್‌..!

ಇಂದಿನಿಂದ 5 ಪಂದ್ಯ​ಗಳ ಆ್ಯಷಸ್‌ ಟೆಸ್ಟ್‌ ಸರಣಿ ಆರಂಭ
2023-25ರ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ನ ಮೊದಲ ಸರ​ಣಿ
ಬಜ್‌ ಬಾಲ್‌ ಆಟ ಮುಂದುವರೆಸುತ್ತೇವೆ ಎಂದ ಬೆನ್‌ ಸ್ಟೋಕ್ಸ್‌

Ashes 2023 Test champions Australia take on England in Edgbaston kvn
Author
First Published Jun 16, 2023, 11:22 AM IST

ಬರ್ಮಿಂಗ್‌​ಹ್ಯಾ​ಮ್‌(ಜೂ.16): ಇಂಗ್ಲೆಂಡ್‌ ಹಾಗೂ ಆಸ್ಪ್ರೇ​ಲಿಯಾ ನಡು​ವಿನ ಮಹತ್ವದ 5 ಪಂದ್ಯ​ಗಳ ಆ್ಯಷಸ್‌ ಟೆಸ್ಟ್‌ ಸರಣಿ ಶುಕ್ರ​ವಾ​ರ​ದಿಂದ ಆರಂಭ​ಗೊ​ಳ್ಳ​ಲಿದ್ದು, ಮೊದಲ ಪಂದ್ಯ​ಕ್ಕೆ ಬರ್ಮಿಂಗ್‌​ಹ್ಯಾ​ಮ್‌ ಆತಿಥ್ಯ ವಹಿ​ಸ​ಲಿದೆ. ಇದು 2023-25ರ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ನ ಮೊದಲ ಸರ​ಣಿ​ಯಾ​ಗಿದ್ದು, ಬದ್ಧ​ವೈ​ರಿ​ಗಳ ನಡು​ವಿನ ಕಾದಾಟ ಕುತೂ​ಹಲ ಮೂಡಿ​ಸಿದೆ. 

ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ದಿದ್ದ 2021-22ರ ಸರ​ಣಿಯಲ್ಲಿ ಇಂಗ್ಲೆಂಡ್ ಎದುರು ಆಸೀಸ್‌ 4-0 ಕ್ಲೀನ್‌​ ಸ್ವೀಪ್‌ ಸಾಧಿ​ಸಿತ್ತು. ಇಂಗ್ಲೆಂಡ್‌ 2015ರಲ್ಲಿ ಕೊನೆ ಬಾರಿ ಸರಣಿ ಗೆದ್ದಿದ್ದು, ಈ ಬಾರಿ ತವ​ರಿ​ನ​ಲ್ಲಿ ಮತ್ತೊಮ್ಮೆ ಸರಣಿ ಕೈವ​ಶ​ಪ​ಡಿ​ಸಿ​ಕೊ​ಳ್ಳುವ ನಿರೀ​ಕ್ಷೆ​ಯ​ಲ್ಲಿದೆ. ಇತ್ತೀ​ಚೆ​ಗಷ್ಟೇ ಇಂಗ್ಲೆಂಡ್‌​ನಲ್ಲೇ ಭಾರ​ತ​ವನ್ನು ಮಣಿಸಿ ಟೆಸ್ಟ್‌ ವಿಶ್ವ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದಿದ್ದ ಆಸೀಸ್‌ ತುಂಬು ಆತ್ಮ​ವಿ​ಶ್ವಾ​ಸದೊಂದಿಗೆ ಸರ​ಣಿ​ಗೆ ಕಾಲಿ​ಡ​ಲಿ​ದೆ.

ಬಜ್‌ ಬಾಲ್‌ ಆಟ ಮುಂದುವರೆಸುತ್ತೇವೆ ಎಂದ ಬೆನ್‌ ಸ್ಟೋಕ್ಸ್‌: ಜೋ ರೂಟ್‌ ನಾಯಕತ್ವದ ಕ್ರಿಸ್‌ ಸಿಲ್ವರ್‌ವುಡ್‌ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಬೆನ್ ಸ್ಟೋಕ್ಸ್‌ ಟೆಸ್ಟ್ ನಾಯಕರಾಗಿ ಬ್ರೆಂಡನ್‌ ಮೆಕ್ಕಲಂ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಬಜ್‌ ಬಾಲ್‌ ಶೈಲಿಯ ಮೂಲಕ ಇಂಗ್ಲೆಂಡ್ ತಂಡವು ಕಳೆದ 13 ಟೆಸ್ಟ್ ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ಗೆಲುವಿನ ಗೆಲುವಿನ ನಗೆ ಬೀರಿದೆ.

Asia Cup 2023: ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಪಾಕ್‌, ಶ್ರೀಲಂಕಾ ಹೈಬ್ರಿಡ್‌ ಆತಿಥ್ಯ!

"ಇದೇ ರಣತಂತ್ರವನ್ನು ಮುಂದುವರೆಸಬೇಕಾ ಎನ್ನುವುದಕ್ಕೆ, ಕೆಲವೊಂದು ಪ್ರಶ್ನೆಗಳಿಗೆ ನನ್ನಷ್ಟಕ್ಕೆ ನಾನೇ ಉತ್ತರಗಳನ್ನು ಕಂಡುಕೊಂಡಿದ್ದೇನೆ. ವೈಯುಕ್ತಿಕವಾಗಿ ಪ್ರತಿಯೊಬ್ಬರಿಗೂ ಹಾಗೂ ತಂಡಕ್ಕೂ ಈ ರಣತಂತ್ರ ತುಂಬಾ ಸ್ಪಷ್ಟವಾಗಿ ಅರ್ಥವಾಗಿದೆ ಹಾಗೂ ಅನುಕೂಲವೂ ಆಗಿದೆ. ನಾವಿದರಲ್ಲಿ ಯಶಸ್ಸನ್ನು ಗಳಿಸಿದ್ದೇವೆ. ಈ ರಣತಂತ್ರವು ಯಾವಾಗಲೂ ಗೆಲುವು ತಂದುಕೊಡುತ್ತದೆ ಅಥವಾ ಯಾವಾಗಲೂ ಸೋಲು ಕಾಣುತ್ತೇವೆ ಎಂದರ್ಥವಲ್ಲ, ಆದರೆ ಇದು ಡ್ರೆಸ್ಸಿಂಗ್‌ ರೂಂನಲ್ಲಿರುವ ಪ್ರತಿಯೊಬ್ಬರಿಗೂ ಹೊಸ ಹುರುಪು ತಂದುಕೊಡುತ್ತಿದೆ. ಹೀಗಾಗಿ ಎದುರಾಳಿ ಯಾರೇ ಇದ್ದರೂ ನಮ್ಮ ಆಕ್ರಮಣಕಾರಿ ಮನೋಭಾವ ಬದಲಾಗುವುದಿಲ್ಲ" ಎಂದು ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ

ಸಂಭಾವ್ಯ ತಂಡಗಳು ಹೀಗಿವೆ:

ಆಸ್ಟ್ರೇಲಿಯಾ:
ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರಿ(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೋಲೆಂಡ್, ನೇಥನ್ ಲಯನ್

ಇಂಗ್ಲೆಂಡ್:
ಬೆನ್ ಡುಕೆಟ್, ಜಾಕ್ ಕ್ರಾವ್ಲಿ, ಓಲಿ ಪೋಪ್, ಜೋ ರೂಟ್‌, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್‌(ನಾಯಕ), ಜಾನಿ ಬೇರ್‌ಸ್ಟೋವ್(ವಿಕೆಟ್ ಕೀಪರ್), ಮೋಯಿನ್ ಅಲಿ, ಓಲಿ ರಾಬಿನ್‌ಸನ್, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್ ಆಂಡರ್‌ಸನ್.

ಪಂದ್ಯ ಆರಂಭ: ಮಧ್ಯಾಹ್ನ 3.30

Follow Us:
Download App:
  • android
  • ios