ಮುಂಬೈ​(ಜು.11): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಆಟ​ದಿಂದ ಮಾತ್ರವಲ್ಲ, ಫಿಟ್ನೆಸ್‌ ಹಾಗೂ ಆಹಾರ ಪದ್ಧ​ತಿಯಿಂದಲೂ ಕ್ರೀಡಾ​ಪ​ಟು​ಗ​ಳಿಗೆ ಮಾದ​ರಿ​ಯಾ​ಗಿ​ದ್ದಾರೆ. 

ಕೊಹ್ಲಿ ತಮ್ಮ ಡಯೆಟ್‌ಗೆ ಎಷ್ಟು ಪ್ರಾಮು​ಖ್ಯತೆ ನೀಡು​ತ್ತಾರೆ ಎನ್ನು​ವು​ದನ್ನು ಅವರ ಪತ್ನಿ, ಬಾಲಿ​ವುಡ್‌ ನಟಿ ಅನುಷ್ಕಾ ಶರ್ಮಾ ಸಾಮಾ​ಜಿಕ ತಾಣಗಳಲ್ಲಿ ಬಹಿ​ರಂಗಗೊಳಿ​ಸಿ​ದ್ದಾರೆ. ಇಂತಿಷ್ಟೇ ಪ್ರಮಾಣದಲ್ಲಿ ಆಹಾರ ಸ್ವೀಕ​ರಿ​ಸ​ಬೇಕು ಎನ್ನುವ ಉದ್ದೇ​ಶ​ದಿಂದ ಕೊಹ್ಲಿ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ತಕ್ಕ​ಡಿ​ಯೊಂದನ್ನು ಇಟ್ಟು​ಕೊಂಡಿ​ದ್ದಾರೆ. ಕೊಹ್ಲಿ 100 ಗ್ರಾಂ ಅವ​ಲಕ್ಕಿಯನ್ನು ತೂಕ ಮಾಡಿ ಸೇವಿ​ಸು​ತ್ತಿ​ರುವ ವಿಡಿ​ಯೋ​ವನ್ನು ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಹಾಕಿ​ಕೊಂಡಿ​ದ್ದು, ವಿಡಿಯೋ ವೈರಲ್‌ ಆಗಿ​ದೆ.

ಕ್ಯಾಪ್ಟನ್ ಕೊಹ್ಲಿಗೆ ನೀರ್‌ ದೋಸೆ ಕೊಟ್ಟ ಶ್ರೇಯಸ್‌ ಅಯ್ಯರ್‌!

ಕೊರೋನಾ ವೈರಸ್‌ನಿಂದಾಗಿ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಹೀಗಾಗಿ ವಿರುಷ್ಕಾ ಜೋಡಿ ಮನೆಯಲ್ಲೇ ಬಂಧಿಯಾಗಿದ್ದಾರೆ. ಈ ಬಿಡುವಿನ ಸಮಯವನ್ನು ಸಖತ್ತಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಹ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅಮ್ಮ ಮಾಡಿದ್ದ ನೀರ್ ದೋಸೆ ತಂದು ವಿರಾಟ್ ಕೊಹ್ಲಿಗೆ ನೀಡಿದ್ದರು. ಬಹಳ ದಿನಗಳ ಬಳಿಕ ಇಷ್ಟು ರುಚಿಯಾದ ದೋಸೆಯನ್ನು ಸವಿದಿದ್ದೇನೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು. ಮಾತ್ರವಲ್ಲ ಅಣಬೆ(ಮೊಶ್ರೂಮ್) ಬಿರಿಯಾನಿಯನ್ನು ಶ್ರೇಯಸ್‌ಗೆ ಕೊಟ್ಟು ಕಳಿಸಿದ್ದರು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ- ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2017ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ಬಳಿಕ ನಮ್ಮ ಜೀವನದಲ್ಲಿ ಅಷ್ಟೇನು ಬದಲಾವಣೆಯಾಗಿಲ್ಲ. ಸ್ನೇಹಿತರಂತೆ ಕಾಲ ಕಳೆಯುತ್ತಿದ್ದೇವೆ. ನಮ್ಮಿಬ್ಬರಿಗೂ ಸಮಯ ಸಿಗುವುದೇ ವಿರಳ, ಸಿಕ್ಕ ಸಮಯದಲ್ಲಿ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತೇವೆ ಎಂದು ಇತ್ತೀಚೆಗಷ್ಟೇ ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು.