* ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಮೊಹಮ್ಮದ್ ಶಮಿ* ಶಮಿ ಬೌಲಿಂಗ್ ಪ್ರದರ್ಶನಕ್ಕೆ ಪೋರ್ನ್​ ಸ್ಟಾರ್​​ ಫಿದಾ* ಗುಜರಾತ್ ಪರ ಈ ಸಲ ಐಪಿಎಲ್ ಆಡ್ತಿರೋ ಶಮಿ

ಬೆಂಗಳೂರು(ಏ.01): ಮೊಹಮ್ಮದ್ ಶಮಿ(Mohammed Shami). ಹುಟ್ಟಿದ್ದು ಉತ್ತರ ಪ್ರದೇಶದಲ್ಲಾದ್ರೂ ಡೊಮೆಸ್ಟಿಕ್ ಕ್ರಿಕೆಟ್ ಆಡಿದೆಲ್ಲಾ ಬೆಂಗಾಲ್​​ನಲ್ಲಿ. ಈಗ ಟೀಂ ಇಂಡಿಯಾ ಕಾಯಂ ಸದಸ್ಯ. ಪರ್ಸನಲ್ ಲೈಫ್​ನಲ್ಲಿ ಒಂದು ವಿವಾದವಾಗಿದ್ದು ಬಿಟ್ಟರೆ, ಈ ಬೆಂಗಾಳಿ ಫಾಸ್ಟ್ ಬೌಲರ್ ವೃತ್ತಿ ಜೀವನದಲ್ಲಿ ಒಂದೇ ಒಂದು ವಿವಾದವನ್ನೂ ಮಾಡಿಕೊಂಡಿಲ್ಲ. ತಾನಾಯಿತು ತನ್ನ ಬೌಲಿಂಗ್ ಆಯ್ತು ಅನ್ನೋ ಹಾಗೆ ಇದ್ದಾರೆ. ಈಗಲೂ ಮೂರು ಫಾಮ್ಯಾಟ್​​ನಲ್ಲಿ ಶಮಿಗೆ ಪರ್ಮನೆಂಟ್ ಪ್ಲೇಸ್ ಇದೆ. ಶಮಿ, ಸ್ವಿಂಗ್ ಮಾಸ್ಟರ್ ಎಂದೇ ಫೇಮಸ್. ಹೊಸ ಬಾಲ್ ಇರಲಿ, ಹಳೆ ಬಾಲ್ ಇರಲಿ. ಸ್ವಿಂಗ್ ಮಾಡೋದ್ರಲ್ಲಿ ಎಕ್ಸ್​ ಫರ್ಟ್​. 

ಶಮಿ ಬೌಲಿಂಗ್​​ಗೆ ಅಮೆರಿಕಾದ ಪೋರ್ನ್​ ಸ್ಟಾರ್​​ ಫಿದಾ:

ಮೊನ್ನೆ ಸೋಮವಾರ ಐಪಿಎಲ್​ನಲ್ಲಿ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ಮುಖಾಮುಖಿಯಾಗಿದ್ದವು. ಗುಜರಾತ್ ಪರ ಈ ಸಲ ಐಪಿಎಲ್ ಆಡ್ತಿರೋ ಶಮಿ, ಲಕ್ನೋ ಕ್ಯಾಪ್ಟನ್ ರಾಹುಲ್ ಸೇರಿದಂತೆ ಮೂವರನ್ನ ಔಟ್ ಮಾಡಿದ್ರು. ಅಂದು ಶಮಿ ಸ್ವಿಂಗ್ ಬೌಲಿಂಗ್​​ಗೆ ಲಖನೌ ಮಾತ್ರ ಕ್ಲೀನ್ ಬೌಲ್ಡ್ ಆಗಲಿಲ್ಲ. ಲಕ್ನೋ ಮಾತ್ರ ಪಂದ್ಯ ಸೋಲಲಿಲ್ಲ. ಅಂದಿನ ಶಮಿ ಬೌಲಿಂಗ್​​​ಗೆ ಅಮೆರಿಕಾದ ಪೋರ್ನ್​ ಸ್ಟಾರ್​ ಕೂಡ ಕ್ಲೀನ್ ಬೌಲ್ಡ್ ಆಗಿದ್ದಾಳೆ. ಬೆಂಗಾಳಿ ಬೌಲರ್ ಇನ್​​ಸ್ವಿಂಗ್​​ಗೆ ಮನ ಸೋತು ಟ್ವೀಟರ್​ನಲ್ಲಿ ಟ್ವೀಟ್ ಸಹ ಮಾಡಿದ್ದಾಳೆ.

ಅಂದು 4 ಓವರ್ ಬೌಲಿಂಗ್ ಮಾಡಿದ ಶಮಿ, 25 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದಿದ್ದರು. ಎರಡು ಕ್ಲೀನ್ ಬೌಲ್ಡ್ ಸಹ ಮಾಡಿದ್ದರು. ಅತ್ಯಂತ ಶ್ರೇಷ್ಠ ನಿರ್ವಹಣೆ ಮೊಹಮ್ಮದ್ ಶಮಿ ಅಂತ ಅಮೆರಿಕಾದ ಕೆಂಡ್ರ ಲಸ್ಟ್​ ಟ್ವೀಟ್ ಮಾಡಿದ್ದಾಳೆ. 43 ವರ್ಷದ ಪೋರ್ನ್​ ಸ್ಟಾರ್​(Porn Star), ಕೆಕೆಆರ್ ತಂಡದ ಅಭಿಮಾನಿಯೂ ಆಗಿದ್ದು, ಕೆಕೆಆರ್​ ಲಾಂಛನದ ಟೀ ಶರ್ಟ್​ ಧರಿಸಿದ ಚಿತ್ರವನ್ನೂ ಪ್ರಕಟಿಸಿ ಗಮನ ಸೆಳೆದಿದ್ದಾಳೆ.

Scroll to load tweet…

ಪೋರ್ನ್​ ಸ್ಟಾರ್ ಟ್ವೀಟ್​ ಶಮಿ ಫುಲ್ ಟ್ರೋಲ್:

ಅಮೆರಿಕದ ನೀಲಿ ಚಿತ್ರಗಳ ನಟಿ ಕೆಂಡ್ರ ಲಸ್ಟ್(Kendra Lust). ಈಕೆಯ ಗಂಡ ಪೊಲೀಸ್ ಆಫೀಸರ್​. ಶಮಿ ಬೌಲಿಂಗ್​​ಗೆ ಫಿದಾ ಆಗಿ ಕೆಂಡ್ರ ಲಸ್ಟ್ ಟ್ವೀಟ್ ಮಾಡುತ್ತಿದಂತೆ ಶಮಿ ಫುಲ್ ಟ್ರೋಲ್ ಆಗ್ತಿದ್ದಾರೆ. ನೆಟ್ಟಿಗರು ವಿವಿಧ ಮೀಮ್ಸ್​ ಮೂಲಕ ಶಮಿ ಕಾಲೆಳೆದಿದ್ದಾರೆ. ಹಾಗೆ ಕೆಂಡ್ರ ಲಿಸ್ಟ್​​ಗೆ ಕ್ರಿಕೆಟ್ ಮತ್ತು ಐಪಿಎಲ್ (IPL) ಬಗ್ಗೆ ಇರೋ ಆಸಕ್ತಿ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಕೆಂಡ್ರ ಲಿಸ್ಟ್​ ಈಗ ಮೊಹಮ್ಮದ್ ಶಮಿ ಪ್ರೀತಿಯಲ್ಲಿ ಬಿದ್ದಿದಾಳೆ ಎಂದು ಅನೇಕರು ಕಾಮೆಂಟ್ ಹಾಕಿದ್ದಾರೆ. ಆಕೆಯ ಒಂದೇ ಒಂದು ಟ್ವೀಟ್​ನಿಂದ ಶಮಿ ಫುಲ್ ಟ್ರೋಲ್ ಆಗ್ತಿದ್ದಾರೆ.

ಶಮಿಗೂ ಕೆಂಡ್ರ ಲಿಸ್ಟ್​​ಗೂ ಹೇಗೆ ಪರಿಚಯ ಗೊತ್ತಾ..?:

ಮೊಹಮ್ಮದ್ ಶಮಿ ಟೀಂ ಇಂಡಿಯಾದ (Team India) ಲವರ್ ಬಾಯ್, ಅವರ ಬೌಲಿಂಗ್​ಗೆ ಫಿದಾ ಆಗದವರೇ ಇಲ್ಲ. ಭಾರತದ ಪರ ಶಮಿ ಆಡುವಾಗಲೂ, ಕೆಕೆಆರ್ ಪರ ಆಡುವಾಗಲೂ ಕೆಂಡ್ರ ಲಸ್ಟ್ ಟ್ವೀಟ್ ಮಾಡಿದ್ದಾಳೆ. ಹಾಗೆ ಈಗ ಟೈಟನ್ಸ್ ಪರ ಆಡುವಾಗಲೂ ಟ್ವೀಟ್ ಮಾಡಿದ್ದಾಳೆ ಅಷ್ಟೆ. ಈ ಇಬ್ಬರಿಗೆ ಒಬ್ಬರಿಗೊಬ್ಬರ ಪರಿಚಯ ಇದ್ಯಾ ಅನ್ನೋದು ಮಾತ್ರ ಗೊತ್ತಿಲ್ಲ. ಆದ್ರೂ ಕೆಂಡ್ರ ಲಸ್ಟ್​ನ ಒಂದೇ ಒಂದು ಟ್ವೀಟ್​ಗೆ ಶಮಿ ಮಾತ್ರ ಟ್ರೋಲ್ ಮೇಲೆ ಟ್ರೋಲ್ ಆಗ್ತಿರೋದಂತೂ ಸುಳ್ಳಲ್ಲ.