* ಮೂವರಿಗೂ ಗೊತ್ತಿಲ್ಲದೆ ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್‌ನಲ್ಲಿ ಮತ್ತೋರ್ವ ಕ್ರಿಕೆಟರ್* ಬ್ಯಾಟಿಂಗ್​.. ಬೌಲಿಂಗ್​.. ಫೀಲ್ಡಿಂಗ್​.. ಕ್ಯಾಪ್ಟನ್ಸಿ.. ಎಲ್ಲವೂ ಸೂಪರ್​..: * ತ್ರಿಮೂರ್ತಿಗಳಿಗೆ ಟಕ್ಕರ್ ಕೊಡ್ತಾರಾ?

ಬೆಂಗಳೂರು, (ಏ.16) : ಕೆಜಿಎಫ್ ಡೈಲಾಗ್​ ಈಗ ಟೀಂ ಇಂಡಿಯಾಗೆ ಸಖತ್ ಸೂಟ್ ಆಗ್ತಿದೆ. ಕೆಜಿಎಫ್​ ಪಡೆಯೋಕೆ ರಣಹದ್ದುಗಳು ಹೇಗೆ ಕಾಯ್ತಿದ್ದವೋ ಹಾಗೆ ಟೀಂ ಇಂಡಿಯಾ ನಾಯಕನಾಗಲು ಕೆಲ ಆಟಗಾರರು ಕಾಯ್ತಾ ಕುಳಿತಿದ್ದಾರೆ. ಗರುಡ ಸತ್ತ ನಂತರ ಹೇಗೆ ಕೆಜಿಎಫ್ ಪಡೆಯಲು ಅವರವರ ನಡ್ವೆ ಫೈಟ್ ಬೀಳುತ್ತೋ, ಹಾಗೆ ರೋಹಿತ್ ಶರ್ಮಾ ನಂತರ ಕ್ಯಾಪ್ಟನ್ ಆಗಲು ಕೆಲ ಆಟಗಾರರ ನಡುವೆ ಫೈಟ್ ಶುರುವಾಗಿದೆ. ರೋಹಿತ್ ಬಳಿಕ ಟೀಂ ಇಂಡಿಯಾ ನಾಯಕತ್ವಕ್ಕೆ ಮೂವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ ಅಂತ ನಿಮಗೂ ಗೊತ್ತು. ಆದ್ರೆ ಯಾರಿಗೂ ಗೊತ್ತಿಲ್ಲದ ಹಾಗೆ ಇನ್ನೊಬ್ಬ ಈ ರೇಸ್​​ನಲ್ಲಿದ್ದಾನೆ. ಅಷ್ಟೇ ಅಲ್ಲ, ರೇಸ್​​​ನಲ್ಲಿ ಈ ಮೂವರಿಗಿಂತ ಮುಂದಿದ್ದಾನೆ ಕೂಡ. ಆತನೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ.

ಬ್ಯಾಟಿಂಗ್​.. ಬೌಲಿಂಗ್​.. ಫೀಲ್ಡಿಂಗ್​.. ಕ್ಯಾಪ್ಟನ್ಸಿ.. ಎಲ್ಲವೂ ಸೂಪರ್​..: 
ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್​ ಬಳಿಕ ಟೀಂ ಇಂಡಿಯಾದಿಂದ ಡ್ರಾಪ್ ಆದ್ರು. ಫಿಟ್ನೆಸ್ ಮತ್ತು ಕಳಪೆ ಫಾರ್ಮ್​ ಎರಡೂ ಕೈಕೊಟ್ಟಿದ್ದರಿಂದ ಟಿ20 ವರ್ಲ್ಡ್​ಕಪ್ ಬಳಿಕ ಅವರು ಯಾವ್ದೇ ಮ್ಯಾಚ್ ಆಡಲಿಲ್ಲ. ಎನ್​ಸಿಎಗೆ ಬಂದು ಫಿಟ್ನೆಸ್ ಟೆಸ್ಟ್​​ ಪಾಸ್ ಮಾಡಿ ಈಗ ಐಪಿಎಲ್ ಆಡ್ತಿದ್ದಾರೆ. ಕೇವಲ ಆಟಗಾರನಾಗಿ ಮಾತ್ರವಲ್ಲ, ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಸಹ ಪಾಂಡ್ಯನೇ.

ಟೀಂ ಇಂಡಿಯಾಗೆ ವಾಪಸ್‌ ಆಗುವತ್ತ ಹಾರ್ದಿಕ್‌ ದಿಟ್ಟಹೆಜ್ಜೆ

ಟೈಟನ್ಸ್ ಆಡಿರೋ ಐದು ಪಂದ್ಯದಲ್ಲೂ ತಮ್ಮ ಆಲ್​ರೌಂಡ್ ಆಟದಿಂದ ಹಾರ್ದಿಕ್ ಪಾಂಡ್ಯ ಮಿಂಚಿದ್ದಾರೆ. 5 ಮ್ಯಾಚ್​ನಿಂದ 4 ವಿಕೆಟ್ ಪಡೆದು, 228 ರನ್ ಬಾರಿಸಿದ್ದಾರೆ. ಇದರಲ್ಲಿ ಎರಡು ಹಾಫ್ ಸೆಂಚುರಿಗಳೂ ಇವೆ. ಅಷ್ಟೇ ಅಲ್ಲ, ಗರಿಷ್ಠ ರನ್ ಸರದಾರರ ಲಿಸ್ಟ್​​ನಲ್ಲಿ ನಿನ್ನೆ ಸೆಕೆಂಡ್ ಪ್ಲೇಸ್​​ನಲ್ಲಿದ್ದರು. ಇನ್ನು ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್, ಐದರಲ್ಲಿ ನಾಲ್ಕು ಪಂದ್ಯ ಗೆದ್ದು, ಅಂಕಪಟ್ಟಿಯಲ್ಲಿ ಟಾಪ್​​ನಲ್ಲಿದೆ.

ತ್ರಿಮೂರ್ತಿಗಳಿಗೆ ಟಕ್ಕರ್ ಕೊಡ್ತಿದ್ದಾರೆ ಹಾರ್ದಿಕ್:
ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಅವಧಿ ಮುಂದಿನ ವರ್ಷಕ್ಕೆ ಕ್ಲೋಸ್ ಆಗಲಿದೆ. ಭವಿಷ್ಯದ ಟೀಂ ಇಂಡಿಯಾ ನಾಯಕನಾಗಲು ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್​​ ಫೈಟ್ ನಡೆಸ್ತಿದ್ದಾರೆ. ನಮ್ಮಲ್ಲೇ ಒಬ್ಬರು ರೋಹಿತ್​ ಬಳಿಕ ಕ್ಯಾಪ್ಟನ್ ಆಗ್ತಿವಿ ಅಂತ ಅಂದುಕೊಂಡಿದ್ದಾರೆ. ಕ್ರಿಕೆಟ್ ಫ್ಯಾನ್ಸ್​, ಕ್ರಿಕೆಟ್​ ಪಂಡಿತರೂ ಸಹ ಇದನ್ನೇ ಹೇಳ್ತಿರೋದು. ಆದ್ರೆ ಈ ಯಾರಿಗೂ ಗೊತ್ತಿಲ್ಲದ ಹಾಗೆ ಕ್ಯಾಪ್ಟನ್ಸಿ ರೇಸ್​​ಗೆ ಮರಳಿದ್ದಾರೆ ಹಾರ್ದಿಕ್. ಕೇವಲ ರೇಸ್​ನಲ್ಲಿ ಮಾತ್ರವಿಲ್ಲ, ರೇಸ್​​ನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಕೂಡ.

ಐಪಿಎಲ್​​​ನಲ್ಲಿ ರಾಹುಲ್, ಶ್ರೇಯಸ್​ ಮತ್ತು ಪಂತ್ ನಾಯಕತ್ವ ಪರವಾಗಿಲ್ಲ ಅನ್ನೋ ಆಗಿದೆ. ಆದರೆ ಈ ಮೂವರು ನಾಯಕರಾದ್ಮೇಲೆ ತಮ್ಮ ವೈಯಕ್ತಿಕ ಆಟವನ್ನ ಮರೆತಿದ್ದಾರೆ. ಆದ್ರೆ ಹಾರ್ದಿಕ್ ಪಾಂಡ್ಯ ಮಾತ್ರ ವೈಯಕ್ತಿಕ ಆಟದ ಜೊತೆ ಗುಜರಾತ್ ತಂಡವನ್ನ ಅದ್ಭುತವಾಗಿ ಲೀಡ್ ಮಾಡ್ತಿದ್ದಾರೆ. ಆ ಮೂವರನ್ನ ಹಿಂದಿಕ್ಕಿ ರೋಹಿತ್ ಬಳಿಕ ಹಾರ್ದಿಕ್ ಟೀಂ ಇಂಡಿಯಾ ನಾಯಕನಾದ್ರೂ ಆಶ್ಚರ್ಯವಿಲ್ಲ.

ತಂಡಕ್ಕೆ ವಾಪಸ್‌ ಆಗುವತ್ತ ಹಾರ್ದಿಕ್‌ ದಿಟ್ಟಹೆಜ್ಜೆ
 ಟಿ20 ವಿಶ್ವಕಪ್‌ (ICC T20 World Cup), ಕಳೆದ ಆವೃತ್ತಿ ಐಪಿಎಲ್‌ನಲ್ಲಿ ಕಳಪೆ ಲಯದಿಂದಾಗಿ ಟೀಕೆಗೆ ಗುರಿಯಾಗಿದ್ದ ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) 15ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2022) ಅಭೂತಪೂರ್ವ ಲಯದಲ್ಲಿದ್ದು, ಮತ್ತೊಂದು ಅವಕಾಶಕ್ಕಾಗಿ ಟೀಂ ಇಂಡಿಯಾದ (Team India) ಕದ ತಟ್ಟುತ್ತಿದ್ದಾರೆ