Asianet Suvarna News Asianet Suvarna News

Ind vs SA: ಇಲ್ಲಿದೆ ನೋಡಿ ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಕಂಪ್ಲೀಟ್‌ ಡೀಟೈಲ್ಸ್‌..!

* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಕ್ಷಣಗಣನೆ

* ಜನವರಿ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭ

* ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ

All Cricket Fans need to Know About India vs South Africa ODI Series Squads Fixtures Venue Broadcasters kvn
Author
Bengaluru, First Published Jan 17, 2022, 7:00 PM IST

ಬೆಂಗಳೂರು(ಜ.17): ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆನ್ನುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯು 2-1 ಅಂತರದಲ್ಲಿ ದಕ್ಷಿಣ ಆಫ್ರಿಕಾ ಪಾಲಾಗಿದೆ. ಸೆಂಚೂರಿಯನ್ ಟೆಸ್ಟ್ ಪಂದ್ಯ ಗೆದ್ದು ಬೀಗಿದ್ದ ಭಾರತ ತಂಡವು, ಇದಾದ ಬಳಿಕ ಜೋಹಾನ್ಸ್‌ಬರ್ಗ್‌ ಹಾಗೂ ಕೇಪ್‌ಟೌನ್ ಟೆಸ್ಟ್ (Cape Town Test) ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ. ಇದೀಗ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಉಭಯ ತಂಡಗಳ ನಡುವಿನ ಏಕದಿನ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹೌದು, ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 19ರಿಂದ ಆರಂಭವಾಗಲಿದೆ. ಇದೀಗ ಉಭಯ ತಂಡಗಳು ಸೀಮಿತ ಓವರ್‌ಗಳ ಸರಣಿಯತ್ತ ಚಿತ್ತ ನೆಟ್ಟಿವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿಯು ಎಲ್ಲಿ ಯಾವಾಗ ನಡೆಯುತ್ತಿದೆ. ಎಲ್ಲಿ ನಾವು ಈ ಪಂದ್ಯಗಳನ್ನು ವೀಕ್ಷಿಸಬಹುದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಉಭಯ ತಂಡಗಳ ನಡುವಿನ ಏಕದಿನ ಸರಣಿಯು ಈಗಾಗಲೇ ನಿಗದಿಯಾದಂತೆ ಇದೇ ಜನವರಿ 19ರಂದು ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್‌ನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಯಿಂದ ಮೊದಲ ಪಂದ್ಯ ಆರಂಭವಾಗಲಿದೆ. ಇನ್ನು ಎರಡನೇ ಏಕದಿನ ಪಂದ್ಯವು ಜನವರಿ 21ರಂದು ಇದೇ ಮೈದಾನದಲ್ಲಿ, ಇದೇ ಸಮಯದಲ್ಲಿ ಆರಂಭವಾಗಲಿದೆ. ಇನ್ನು ಜನವರಿ 23ರಂದು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

Virat Kohli Test captaincy in numbers: ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆಗಳ ಒಂದು ಝಲಕ್‌..!

ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್‌ (KL Rahul) ಏಕದಿನ ಸರಣಿಯಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ತೆಂಬ ಬವುಮಾ (Temba Bavuma) ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ. 

ಏಕದಿನ ಸರಣಿಗೆ ಉಭಯ ತಂಡಗಳು ಹೀಗಿವೆ ನೋಡಿ

ಭಾರತ ಕ್ರಿಕೆಟ್ ತಂಡ

ಕೆ.ಎಲ್. ರಾಹುಲ್(ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್‌, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್, ಇಶಾನ್ ಕಿಶನ್‌, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

ದಕ್ಷಿಣ ಆಫ್ರಿಕಾ ತಂಡ

ತೆಂಬ ಬವುಮಾ(ನಾಯಕ), ಜುಬೇರ್ ಹಮ್ಜಾ, ಜೆ. ಮಲಾನ್, ಏಯ್ಡನ್‌ ಮಾರ್ಕ್‌ರಮ್‌, ಡೇವಿಡ್ ಮಿಲ್ಲರ್, ರಾಸ್ಸಿ ವ್ಯಾನ್ ಡರ್ ಡುಸೇನ್, ಮಾರ್ಕೊ ಯಾನ್ಸೆನ್, ವ್ಯಾನ್ ಪಾರ್ನೆಲ್‌, ಆಂಡಿಲ್ಲೆ ಫೆಲುಕ್ವಿಯೊ, ಡ್ವೇನ್ ಪ್ರಿಟೋರಿಯಸ್‌, ಕ್ವಿಂಟನ್ ಡಿ ಕಾಕ್, ಕೈಲ್ ವೇರಿಯನ್ನೆ, ಕೇಶವ್ ಮಹರಾಜ್, ಸಿಸಾಂದ ಮಗಲಾ, ಲುಂಗಿ ಎಂಗಿಡಿ, ಕಗಿಸೋ ರಬಾಡ ಹಾಗೂ ತಬ್ರೀಜ್ ಶಂಸಿ.

ನೇರ ಪ್ರಸಾರ:
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನೇರ ಪ್ರಸಾರವು ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯು ಪಡೆದುಕೊಂಡಿದೆ. ಇದಷ್ಟೇ ಅಲ್ಲದೇ ಡಿಸ್ನಿ+ಹಾಟ್‌ಸ್ಟಾರ್ ಮೂಲಕವೂ ಕ್ರಿಕೆಟ್ ಅಭಿಮಾನಿಗಳು ಏಕದಿನ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. 
 

Follow Us:
Download App:
  • android
  • ios