Asianet Suvarna News Asianet Suvarna News

ದಕ್ಷಿಣ ಆಫ್ರಿಕಾದಲ್ಲೂ ಐಪಿಎಲ್ ಹವಾ; ಎಲ್ಲಾ 6 ತಂಡ ಐಪಿಎಲ್ ಫ್ರಾಂಚೈಸಿ ಪಾಲು..!

ಹರಿಣಗಳ ನಾಡಿನಲ್ಲಿ ಕಳೆ ಹೆಚ್ಚಿಸಲಿರುವ ಐಪಿಎಲ್ ಕಲರವ
ದಕ್ಷಿಣ ಆಫ್ರಿಕಾದ ಹೊಸ ಟಿ20 ಲೀಗ್‌ ಟೂರ್ನಿ ಆಯೋಜನೆಗೆ ವೇದಿಕೆ ಸಜ್ಜು
ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಎಲ್ಲಾ 6 ತಂಡ ಐಪಿಎಲ್ ಫ್ರಾಂಚೈಸಿಗಳ ಪಾಲು

All 6 Cricket teams in South Africa T20 league to be owned by IPL franchises kvn
Author
Bengaluru, First Published Jul 20, 2022, 1:42 PM IST

ಜೋಹಾನ್ಸ್‌ಬರ್ಗ್‌(ಜು.20)‍: ವಿಶ್ವದ ಅತಿ ಶ್ರೀಮಂತ ಕ್ರಿಕೆಟ್‌ ಲೀಗ್‌ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹವಾ ಇದೀಗ ದಕ್ಷಿಣ ಆಫ್ರಿಕಾದಲ್ಲೂ ಕಂಡುಬಂದಿದ್ದು, ಅಲ್ಲಿನ ಚೊಚ್ಚಲ ಟಿ20 ಲೀಗ್‌ನ ಎಲ್ಲಾ 6 ತಂಡಗಳ ಮಾಲಿಕತ್ವವನ್ನು ಐಪಿಎಲ್‌ ಫ್ರಾಂಚೈಸಿಗಳು ತಮ್ಮ ತೆಕ್ಕೆಗೆ ಪಡೆದುಕೊಂಡಿವೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಆಯೋಜಿಸುವ ಲೀಗ್‌ ಜನವರಿಯಲ್ಲಿ ಆರಂಭವಾಗಲಿದೆ. ಐಪಿಎಲ್‌ನ 5 ಬಾರಿ ಚಾಂಪಿಯನ್‌ ಮುಂಬೈ ತಂಡದ ಮಾಲಿಕರು ಕೇಪ್‌ಟೌನ್‌ ತಂಡವನ್ನು ಕೊಂಡುಕೊಂಡಿದ್ದು, ಜೋಹಾನ್ಸ್‌ಬರ್ಗ್‌ ತಂಡದ ಒಡೆತನವನ್ನು 4 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಪಡೆದುಕೊಂಡಿದೆ. ಪೋರ್ಚ್‌ ಎಲಿಜಬೆತ್‌ಗೆ ಸನ್‌ರೈಸ​ರ್ಸ್‌ ಹೈದರಾಬಾದ್‌, ಡರ್ಬನ್‌ಗೆ ಲಖನೌ ಸೂಪರ್‌ ಜೈಂಟ್ಸ್‌, ಪ್ರಿಟೋರಿಯಾಗೆ ಡೆಲ್ಲಿ ಕ್ಯಾಪಿಟಲ್ಸ್‌, ಪಾರ್ಲ್‌ಗೆ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಮಾಲಿಕತ್ವ ವಹಿಸಲಿದೆ.

ಐಪಿಎಲ್‌ನ ಕೋಲ್ಕತಾ ಸೇರಿದಂತೆ 4 ವಿವಿಧ ಟಿ20 ಲೀಗ್‌ನ ತಂಡದ ಒಡೆತನ ಹೊಂದಿರುವ ನೈಟ್‌ ರೈಡ​ರ್ಸ್‌ ಸಂಸ್ಥೆ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಈ ಲೀಗ್‌ನಲ್ಲಿ ಯಾವುದೇ ತಂಡದ ಮಾಲಿಕತ್ವ ಪಡೆದುಕೊಂಡಿಲ್ಲ. ಇನ್ನು, ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಲೀಗ್‌ನ ಆಯುಕ್ತರಾಗಿ ನೇಮಕಗೊಂಡಿದ್ದು, ಲೀಗ್‌ನ ವೇಳಾಪಟ್ಟಿ, ಮಾದರಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಈ ಮೊದಲು 2 ಬಾರಿ ಟಿ20 ಲೀಗ್‌ ಆರಂಭಿಸಿ ಕೈಸುಟ್ಟುಕೊಂಡಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ 3ನೇ ಬಾರಿ ಟಿ20 ಲೀಗ್‌ ಆಯೋಜನೆಯ ಸಾಹಸಕ್ಕಿಳಿದಿದೆ. ಈ ಮೊದಲು 2017ರಲ್ಲಿ ಗ್ಲೋಬಲ್‌ ಟಿ20 ಲೀಗ್‌ ಆರಂಭಿಸಿತ್ತು. ಬಳಿಕ ಮಾನ್ಸಿ ಸೂಪರ್‌ ಲೀಗ್‌ ಶುರು ಮಾಡಿದ್ದರೂ ಪ್ರಸಾರ ಹಕ್ಕು ಪಡೆಯಲು ಯಾವುದೇ ಸಂಸ್ಥೆಗಳು ಮುಂದೆ ಬರದ ಕಾರಣ ಆ ಲೀಗ್‌ ಕೂಡಾ ನಡೆದಿರಲಿಲ್ಲ.

ಮೊದಲ ಟಿ20: ಐರ್ಲೆಂಡ್‌ ವಿರುದ್ಧ ಕಿವೀಸ್‌ಗೆ ಗೆಲುವು

ಬೆಲ್‌ಫಾಸ್ಟ್‌(ಐರ್ಲೆಂಡ್‌): ಐರ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್‌ 31 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಏಕದಿನ ಸರಣಿಯನ್ನು 3-0 ಕ್ಲೀನ್‌ಸ್ವೀಪ್‌ ಮಾಡಿಕೊಂಡಿದ್ದ ಕಿವೀಸ್‌, ಆತಿಥೇಯರ ವಿರುದ್ಧ ಸತತ 4ನೇ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ಗ್ಲೆನ್‌ ಫಿಲಿಫ್ಸ್‌(69) ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 173 ರನ್‌ ಕಲೆ ಹಾಕಿತು. ಕಠಿಣ ಗುರಿ ಬೆನ್ನತ್ತಿದ ಐರ್ಲೆಂಡ್‌ 18.2 ಓವರಲ್ಲಿ 142ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಲಾಕಿ ಫಗ್ರ್ಯೂಸನ್‌ 14ಕ್ಕೆ 4 ವಿಕೆಟ್‌ ಪಡೆದರು.

County Cricket ಸಸೆಕ್ಸ್‌ ತಂಡದ ನಾಯಕರಾದ ಮೊದಲ ಪಂದ್ಯದಲ್ಲೇ ಶತಕ ಚಚ್ಚಿದ ಚೇತೇಶ್ವರ್ ಪೂಜಾರ

ವಿಂಡೀಸ್‌ನ ಲೆಂಡ್ಲ್‌ ಸಿಮನ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ

ಟ್ರನಿಡಾಡ್‌: ವೆಸ್ಟ್‌ಇಂಡೀಸ್‌ ಆರಂಭಿಕ ಆಟಗಾರ ಲೆಂಡ್ಲ್‌ ಸಿಮನ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ನಾಯಕ ದಿನೇಶ್‌ ರಾಮ್‌ದಿನ್‌ ನಿವೃತ್ತಿ ಬೆನ್ನಲ್ಲೇ ಸಿಮನ್ಸ್‌ ಕೂಡಾ ವಿದಾಯ ಹೇಳಿದ್ದಾರೆ. 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸಿಮನ್ಸ್‌ ವಿಂಡೀಸ್‌ ಪರ ಎಲ್ಲಾ ಮಾದರಿಯಲ್ಲಿ ಒಟ್ಟು 144 ಪಂದ್ಯಗಳನ್ನಾಡಿದ್ದು, 3763 ರನ್‌ ಗಳಿಸಿದ್ದಾರೆ. ಅವರು 2012, 2016ರ ಟಿ20 ವಿಶ್ವಕಪ್‌ ವಿಜೇತ ವಿಂಡೀಸ್‌ ಹಾಗೂ 2015, 2017ರ ಐಪಿಎಲ್‌ ಚಾಂಪಿಯನ್‌ ಮುಂಬೈ ತಂಡದಲ್ಲಿದ್ದರು.

Follow Us:
Download App:
  • android
  • ios