ಮುಂಬೈ(ಜ.24): ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥರ ನೇಮಿಸಲು ಬಿಸಿಸಿಐ ಕಸರತ್ತು ನಡೆಸುತ್ತಿದೆ. ಎಂ.ಎಸ್.ಕೆ ಪ್ರಸಾದ್ ಅಧಿಕಾರವದಿ ಮುಕ್ತಾಯಗೊಂಡಿದೆ. ಪ್ರಸಾದ್ ಮುಂದುವರಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಲವು ತೋರಿಲ್ಲ. ಹೀಗಾಗಿ ಬಿಸಿಸಿಐ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಅಹ್ವಾನಿಸಿತ್ತು.

ಇದನ್ನೂ ಓದಿ:  ಕ್ರಿಕೆಟ್‌ ಸಲಹಾ ಸಮಿತಿಗೆ ಗಂಭೀರ್‌, ಮದನ್‌ ಲಾಲ್‌!.

ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಮುಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ಈ ರೇಸ್‌ನಲ್ಲಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಹೆಸರು ಮುಂಚೂಣಿಯಲ್ಲಿದೆ. ಬಹುತೇಕ ಅಜಿತ್ ಅಗರ್ಕರ್ ಮುಂದಿನ ಆಯ್ಕೆ ಸಮಿತಿ ಮುಖ್ಯಸ್ಥರಾಗುವು ಎಲ್ಲಾ ಸಾಧ್ಯತೆಗಳಿವೆ.

ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಬಂದಿರುವ ಅರ್ಜಿಗಳ ಪೈಕಿ ಅಜಿತ್ ಅಗರ್ಕರ್ ಹಾಗೂ ಶಿವರಾಮಕೃಷ್ಣನ್ ಹೊರತು ಪಡಿಸಿದರೆ,  ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾಾ, ಚೇಚನ್ ಶರ್ಮಾ, ಹಾಗೂ ರಾಜೇಶ್ ಚೌಹ್ಹಾನ್ ಅರ್ಜಿ ಹಾಕಿದ್ದಾರೆ.

ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

2013ರಲ್ಲಿ ಅಜಿತ್ ಅಗರ್ಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 1998ರಿಂದ 2007ರ ವರೆಗೆ ಟೀಂ ಇಂಡಿಯಾ ಪ್ರಮುಖ ವೇಗಿಯಾಗಿ ಗುರಿತಿಸಿಕೊಂಡ ಅಜಿತ್ ಅಗರ್ಕರ್ ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಅಬ್ಬರಿಸಿದ್ದಾರೆ. ಏಕದಿನದಲ್ಲಿ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತದ 3ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಅಗರ್ಕರ್ ಪಾತ್ರರಾಗಿದ್ದಾರೆ. ಅಗರ್ಕರ್ ಏಕದಿನದಲ್ಲಿ 288 ವಿಕೆಟ್ ಕಬಳಿಸಿದ್ದಾರೆ.

23 ಏಕದಿನದಲ್ಲಿ ಪಂದ್ಯದಲ್ಲಿ 50 ವಿಕೆಟ್ ಕಬಳಿಸಿ ಅತೀ ವೇಗವಾಗಿ 50 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ಅಗರ್ಕರ್, ಏಕದಿನದಲ್ಲಿ 21 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.