Asianet Suvarna News Asianet Suvarna News

BCCI Central Contracts: ರಹಾನೆ, ಪೂಜಾರ, ಸಾಹಗೆ ಹಿಂಬಡ್ತಿ

ಬಿಸಿಸಿಐ ಕೇಂದ್ರ ಗುತ್ತಿಗೆ ಪ್ರಕಟ

‘ಎ’ ದರ್ಜೆಯಿಂದ ‘ಬಿ’ ದರ್ಜೆ ಇಳಿದ ರಹಾನೆ, ಪೂಜಾರ

ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ

Ajinkya Rahane, Cheteshwar Pujara Dropped From Grade A to B in BCCI Central Contracts san
Author
Bengaluru, First Published Mar 3, 2022, 2:15 AM IST

ಮೊಹಾಲಿ (ಮಾ.2): ಟೀಂ ಇಂಡಿಯಾದಿಂದ (Team India) ಬಹುತೇಕ ಹೊರಬಿದ್ದಿರುವ ಹಿರಿಯ ಬ್ಯಾಟರ್‌ಗಳಾದ ಚೇತೇಶ್ವರ್‌ ಪೂಜಾರ (Cheteshwar Pujara), ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ವೃದ್ಧಿಮಾನ್‌ ಸಾಹ (Wriddhiman Saha) ಬಿಸಿಸಿಐ ಕೇಂದ್ರೀಯ ವಾರ್ಷಿಕ ಗುತ್ತಿಗೆ (BCCI Central Contracts) ಪಟ್ಟಿಯಲ್ಲೂ ಹಿಂಬಡ್ತಿ ಪಡೆದಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಹಲವು ಸಮಯದಿಂದ ತಂಡದಿಂದ ಹೊರಗಿರುವ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಕೂಡಾ ಪಟ್ಟಿಯಲ್ಲಿ ಕೆಳಕ್ಕೆ ಜಾರಿದ್ದು, ತಾರಾ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಗುತ್ತಿಗೆ ಪಟ್ಟಿಗೆಗೆ ಸೇರ್ಪಡೆಯಾಗಿದ್ದಾರೆ. ಬುಧವಾರ ನಡೆದ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬಿಸಿಸಿಐ  ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 4 ದರ್ಜೆಗಳಿಗದ್ದು, ಎ+ದರ್ಜೆಯಲ್ಲಿರುವ ಆಟಗಾರರು ವಾರ್ಷಿಕ 7 ಕೋಟಿ ರು. ಪಡೆಯಲಿದ್ದಾರೆ. ಎ, ಬಿ, ಸಿ ದರ್ಜೆಯ ಆಟಗಾರರಿಗೆ ಕ್ರಮವಾಗಿ 5 ಕೋಟಿ ರು., 3 ಕೋಟಿ ರು. ಹಾಗು 1 ಕೋಟಿ ರು. ಸಿಗಲಿದೆ. ಬುಧವಾರ ಬಿಸಿಸಿಐ ಪ್ರಕಟಿಸಿದ ಗುತ್ತಿಗೆ ಪಟ್ಟಿಯಲ್ಲಿ ಪೂಜಾರ ಹಾಗೂ ರಹಾನೆ ‘ಎ’ ದರ್ಜೆಯಿಂದ ‘ಬಿ’ಗೆ, ಪಾಂಡ್ಯ ಹಾಗೂ ಸಾಹ ‘ಬಿ’ ದರ್ಜೆಯಿಂದ ‘ಸಿ’ ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ. ‘ಎ’+ ದರ್ಜೆಯಲ್ಲಿ ಕೊಹ್ಲಿ (Virat Kohli), ರೋಹಿತ್‌ (Rohit Sharma), ಬೂಮ್ರಾ (Jasprit Bumrah) ಮುಂದುವರಿಯಲಿದ್ದಾರೆ.

ದೆರ್ಜೆ ಆಟಗಾರರು
ಎ+(ವಾರ್ಷಿಕ 7 ಕೋಟಿ ರು.) ಕೊಹ್ಲಿ, ರೋಹಿತ್‌, ಬೂಮ್ರಾ

ಎ(ವಾರ್ಷಿಕ 5 ಕೋಟಿ ರು.) ಅಶ್ವಿನ್‌, ಜಡೇಜಾ, ರಾಹುಲ್‌, ಶಮಿ, ಪಂತ್‌

ಬಿ (ವಾರ್ಷಿಕ 3 ಕೋಟಿ ರು.) ಪೂಜಾರಾ, ರಹಾನೆ, ಅಕ್ಷರ್‌, ಶಾರ್ದೂಲ್‌, ಶ್ರೇಯಸ್‌, ಸಿರಾಜ್‌, ಇಶಾಂತ್‌

ಸಿ(ವಾರ್ಷಿಕ 1 ಕೋಟಿ ರು.) ಧವನ್‌, ಉಮೇಶ್‌, ಭುವನೇಶ್ವರ್‌, ಹಾರ್ದಿಕ್‌, ಸುಂದರ್‌, ಗಿಲ್‌, ವಿಹಾರಿ, ಚಹಲ್‌, ಸೂರ‍್ಯಕುಮಾರ್‌, ಮಯಾಂಕ್‌.

ಐಪಿಎಲ್‌: ಮಾ.14ರಿಂದ ಮುಂಬೈನಲ್ಲಿ ತಂಡಗಳ ಅಭ್ಯಾಸ
ಮುಂಬೈ:
ಮುಂಬರುವ 15ನೇ ಆವೃತ್ತಿಯ ಐಪಿಎಲ್‌ಗೆ (IPL) ಎಲ್ಲಾ ತಂಡಗಳು ಮಾ.14 ಅಥವಾ 15ರಿಂದ ಮುಂಬೈನಲ್ಲಿ (Mumbai) ಅಭ್ಯಾಸ ಆರಂಭಿಸಲಿವೆ. ತಂಡಗಳ ಅಭ್ಯಾಸಕ್ಕಾಗಿ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) 5 ಮೈದಾನಗಳಲ್ಲಿ ವ್ಯವಸ್ಥೆ ಮಾಡಲಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ (BKS), ಥಾಣೆಯಲ್ಲಿರುವ ಎಂಸಿಎ ಮೈದಾನ (MCA Stadium), ಡಿ.ವೈ.ಪಾಟೀಲ್‌ ವಿವಿ ಮೈದಾನ, ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ಹಾಗೂ ರಿಲಯನ್ಸ್‌ ಕಾರ್ಪೋರೇಟ್‌ ಮೈದಾನದಲ್ಲಿ ತಂಡಗಳು ಅಭ್ಯಾಸ ನಡೆಸಲಿವೆ.

IPL 2021: ಈ 5 ಬ್ಯಾಟರ್‌ಗಳು ಗುಜರಾತ್ ಟೈಟಾನ್ಸ್ ಪರ ಜೇಸನ್ ರಾಯ್ ಸ್ಥಾನ ತುಂಬಬಲ್ಲರು..!
ಟೂರ್ನಿ ಮಾ.26ರಿಂದ ಪ್ರಾರಂಭವಾಗಲಿದ್ದು, ಲೀಗ್‌ ಹಂತದ ಎಲ್ಲಾ ಪಂದ್ಯಗಳಿಗೆ ಮುಂಬೈ ಹಾಗೂ ಪುಣೆ ಆತಿಥ್ಯ ವಹಿಸಲಿವೆ. 10 ತಂಡಗಳ ಆಟಗಾರರು ಮಾ.8ರಿಂದ ಮುಂಬೈಗೆ ಆಗಮಿಸಲಿದ್ದು, ವಿದೇಶದಿಂದ ಬರುವ ಆಟಗಾರರು 5 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಭಾರತೀಯರು ಕೂಡಾ 3 ದಿನ ಕ್ವಾರಂಟೈನ್‌ಲ್ಲಿ ಇರಬೇಕಿದೆ. ಆಟಗಾರರು ಉಳಿದುಕೊಳ್ಳಲು ಮುಂಬೈನಲ್ಲಿ 10 ಹಾಗೂ ಪುಣೆಯಲ್ಲಿ 2 ಹೋಟೆಲ್‌ಗಳನ್ನು ಬಿಸಿಸಿಐ ಗುರುತಿಸಿದೆ.

Ind vs SL:ಟೆಸ್ಟ್‌ ಸರಣಿಗೂ ಮುನ್ನ ಕ್ರಿಕೆಟ್ ಫ್ಯಾನ್ಸ್‌ ತಿಳಿದಿರಬೇಕಾದ 5 ಇಂಟ್ರೆಸ್ಟಿಂಗ್ ಸಂಗತಿಗಳಿವು
ಆಟಗಾರರು ಮುಂಬೈಗೆ ಆಗಮಿಸುವ 48 ಗಂಟೆಗಳ ಮೊದಲು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಬಳಿಕ ಟೂರ್ನಿ ವೇಳೆ ಪ್ರತಿ 3ರಿಂದ 5 ದಿನಕ್ಕೊಮ್ಮೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ. ಲೀಗ್‌ ಹಂತದ ವೇಳೆ ಕ್ರೀಡಾಂಗಣಗಳಿಗೆ ಶೇ.25 ಅಥವಾ 50ರಷ್ಟುಪ್ರೇಕ್ಷಕರಿಗೆ ಪ್ರವೇಶ ಸಿಗುವ ಸಾಧ್ಯತೆ ಇದೆ. ತಂಡಗಳು ಅಭ್ಯಾಸಕ್ಕೆ, ಪಂದ್ಯಗಳಿಗೆ ತೆರಳಲು ಮಹಾರಾಷ್ಟ್ರ ಸರ್ಕಾರ ವಿಶೇಷ ಮಾರ್ಗ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ, ಮುಂಬೈ ಹಾಗೂ ಪುಣೆ ನಗರಗಳನ್ನು ಸುಂದರಗೊಳಿಸುವಂತೆ ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios