ಅಹಮದಾಬಾದ್ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ದಿಟ್ಟ ಬ್ಯಾಟಿಂಗ್ಚೊಚ್ಚಲ ಶತಕದತ್ತ ಕ್ಯಾಮರೋನ್ ಗ್ರೀನ್ ದಾಪುಗಾಲು

ಅಹಮದಾಬಾದ್‌(ಮಾ.10): ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಹಾಗೂ ಆಲ್ರೌಂಡರ್ ಕ್ಯಾಮರೋನ್ ಗ್ರೀನ್‌ ಮುರಿಯದ ಶತಕದ ಜತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಬೃಹತ್ ಮೊತ್ತದತ್ತ ದಾಪುಗಾಲಿಡಲಾರಂಭಿಸಿದೆ. ಅಹಮದಾಬಾದ್‌ ಟೆಸ್ಟ್‌ನ ಎರಡನೇ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 347 ರನ್ ಬಾರಿಸಿದೆ. ಖವಾಜ ಅಜೇಯ 150 ರನ್ ಬಾರಿಸಿದರೆ, ಕ್ಯಾಮರೋನ್ ಗ್ರೀನ್ ಅಜೇಯ 95 ರನ್ ಬಾರಿಸಿದ್ದು ಶತಕದತ್ತ ದಾಪುಗಾಲಿಡುತ್ತಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 255 ರನ್‌ ಕಲೆಹಾಕಿದ್ದ ಆಸ್ಟ್ರೇಲಿಯಾ ತಂಡವು, ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು. ಅಜೇಯ 49 ರನ್‌ ಗಳಿಸಿದ್ದ ಕ್ಯಾಮರೋನ್ ಗ್ರೀನ್‌, ಎರಡನೇ ದಿನದಾಟದ ಮೊದಲ ಓವರ್‌ನಲ್ಲೇ ಅರ್ಧಶತಕ ಪೂರೈಸಿ ಸಂಭ್ರಮಿಸಿದರು.

Scroll to load tweet…

ಶತಕದ ಜತೆಯಾಟ; ಭಾರತಕ್ಕೆ ಸಂಕಟ: ಮೊದಲ ಮೂರು ಟೆಸ್ಟ್‌ ಪಂದ್ಯದಲ್ಲಿ ಪ್ರತಿ ಸೆಷನ್‌ನಲ್ಲೂ ಕನಿಷ್ಠ ಒಂದಾದರೂ ವಿಕೆಟ್ ಉರುಳುತ್ತಿದ್ದವು, ಆದರೆ, ಕೊನೆಯ ಟೆಸ್ಟ್‌ ಪಂದ್ಯದ ಮೊದಲ ದಿನ ದಾಟದ ಎರಡನೇ ಸೆಷನ್‌ನಲ್ಲಿ ವಿಕೆಟ್ ಉರುಳಿಸಲು ಟೀಂ ಇಂಡಿಯಾ ಬೌಲರ್‌ಗಳು ವಿಫಲರಾದರು. ಇನ್ನು ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲೂ ವಿಕೆಟ್ ಕಬಳಿಸಲು ಭಾರತೀಯ ಬೌಲರ್‌ಗಳು ವಿಫಲರಾದರು.