ವಿಶ್ವಕಪ್‌ನಲ್ಲಿ ಭಾರತದ ಸೋಲಿನ ಬೆನ್ನಲ್ಲೇ 'ತಂಡದಲ್ಲಿ ಮೀಸಲಾತಿ ಬೇಕು..' ಎಂದ ಚೇತನ್ ಅಹಿಂಸಾ!
ಟೀಮ್ ಇಂಡಿಯಾ ಅಭಿಮಾನಿಗಳು ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತ ನಟ ಚೇತನ್ ಅಹಿಂಸಾ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ಅಗತ್ಯವಿದೆ ಎಂದು ಹೇಳಿದ್ದಾರೆ.
ಬೆಂಗಳೂರು (ನ.19): ಭಾರತದ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಮಡಿಯಾದ ಆರು ವಿಕೆಟ್ ಸೋಲಿನ ನಿರಾಸೆಯಲ್ಲಿದ್ದರೆ, ಈ ನಡುವೆ ತಂಡದ ಸೋಲಿನ ಪರಾಮರ್ಶೆ ಆರಂಭವಾಗಿದೆ. ಭಾರತ ಪಂದ್ಯದಲ್ಲಿ ಎಡವಿದ್ದೆಲ್ಲಿ, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಯಾವ ವಿಭಾಗದಲ್ಲಿ ಭಾರತ ಎಡವಿತು ಎನ್ನುವುದರ ಬಗ್ಗೆ ಚರ್ಚೆ ಆರಂಭವಾಗಿದೆ. ಇದರ ನಡುವೆ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಟ್ವಿಟರ್‌ನಲ್ಲಿ ಆಡಿರುವ ಮಾತುಗಳು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಂಡ 6 ವಿಕೆಟ್ ಸೋಲು ಕಂಡ ಬೆನ್ನಲ್ಲಿಯೇ ಟ್ವೀಟ್ ಮಾಡಿದ ಚೇತನ್ ಅಹಿಂಹಾ, ಭಾರತ ತಂಡದಲ್ಲಿ ಮೀಸಲಾತಿ ಅಗತ್ಯವಿದೆ ಎಂದು ಹೇಳಿದ್ದಾರೆ. ' ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು..' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಂದ್ಯದ ನಡೆಯುವ ವೇಳೆಯಲ್ಲಿಯೇ ಇನ್ನೊಂದು ಟ್ವೀಟ್ ಮಾಡಿದ್ದ ಚೇತನ್ ಅಹಿಂಸಾ, 'ಭಾರತೀಯ ಕ್ರಿಕೆಟಿಗರು ಇಂದು ಚೆಂಡನ್ನು ಎಸೆಯಬಹುದು/ಹಿಡಿಯಬಹುದು/ಹೊಡೆಯಬಹುದು ಆದರೆ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡುವುದಿಲ್ಲ. 100+ ವರ್ಷಗಳ ಹಿಂದೆ, ಪಲ್ವಾಂಕರ್ ಬಾಲೂ-ಧಾರವಾಡ ಮೂಲದ ಬೌಲರ್ ಮತ್ತು ಭಾರತದ 1 ನೇ ದಲಿತ ಕ್ರಿಕೆಟಿಗ-ಬಾಬಾಸಾಹೇಬ್ ಅವರ ಕಾರ್ಯಕರ್ತ ಮತ್ತು ಪರಿಚಯಸ್ಥರಾಗಿದ್ದರು.. ಭಾರತಕ್ಕೆ ಸಮಾಜವನ್ನು ಕಾಳಜಿ ವಹಿಸುವ ಕ್ರಿಕೆಟಿಗರು ಅಗತ್ಯವಿದೆ-ಹಣ ಮತ್ತು ವೈಭವವಲ್ಲ' ಎಂದು ಅವರು ಬರೆದಿದ್ದರು.
ಇನ್ನು ಚೇತನ್ ಅಹಿಂಸಾ ಅವರ ಅಭಿಪ್ರಾಯಕ್ಕೆ ಹೆಚ್ಚಿನವರು ಟೀಕೆ ಮಾಡಿದ್ದು, ಇಂದು ಇದೇ ಮೀಸಲಾತಿ ಇಟ್ಟುಕೊಂಡು ವಿಶ್ವಕಪ್ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಎಷ್ಟು ವಿಶ್ವಕಪ್ ಗೆದ್ದಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ಸೋಲಿನ ಬಳಿಕ ನೀವು ತಂಡದಲ್ಲಿ ಮೀಸಲಾತಿ ಬರಬೇಕು ಎಂದು ಹೇಳುತ್ತಿದ್ದೀರಿ, ಹಾಗಿದ್ದರೆ ಇಷ್ಟು ವರ್ಷ ತಂಡ ಪ್ರಶಸ್ತಿ ಗೆದ್ದಿದ್ದಕ್ಕೆ ಯಾವುದೇ ಬೆಲೆ ಇಲ್ಲವೇ ಎಂದು ಕೇಳಿದ್ದಾರೆ.
' ನಮ್ಮ ದೇಶದ ಕ್ರೀಡೆಯ ಬಗ್ಗೆ ಮಾತನಾಡಲು ನಿನಗೆ ಯಾವ ಹಕ್ಕಿದೆ? ನನ್ನ ದೇಶದ ಅನ್ನ ತಿಂದು ಮನೆ ಮುರಿಯೋ ಕೆಲಸ ಮಾಡಬೇಡ ಇದೇ ರೀತಿ ನಿನ್ನ ಹಂದಿ ಬುದ್ಧಿ ಮುಂದುವರಿಸಿದರೆ ದೇಶದ ಜನ ಮುಖದ ತುಂಬಾ ಉಗಿದು ದೇಶದಿಂದ ಆಚೆ ಒದ್ದು ಓಡಿಸುತ್ತಾರೆ' ಎಂದು ಇನ್ನೊಬ್ಬರು ಸಿಟ್ಟಿನಿಂದಲೇ ಪ್ರತಿಕ್ರಿಯೆ ಮಾಡಿದ್ದಾರೆ.
'ಮೀಸಲಾತಿ ಅಷ್ಟೇ ಅಲ್ಲ, ಗ್ರೇಸ್ ಮಾರ್ಕ್ಸ್ ಕೊಟ್ಟು ಸೋತವರನ್ನ ಗೆದ್ದವರು ಅಂತ ಘೋಷಿಸಬೇಕು. ಎದುರಾಳಿ ಪ್ಲೇಯರ್ಸ್ ಬ್ಯಾಟಿಂಗ್‌ನಲ್ಲಿ ಶತಕ ಬಾರಿಸಿದ್ದರೆ ಅದನ್ನ ಸೊನ್ನೆ ಅನ್ನಬೇಕು. ಅದೇ ರೀತಿ ಮೀಸಲಾತಿಯ ಬ್ಯಾಟ್ಸ್‌ಮನ್ ಸೊನ್ನೆ ರನ್ ಮಾಡಿದ್ದರೆ ಅದನ್ನ ಡಬಲ್ ಸೆಂಚುರಿ ಅಂತ ಪರಿಗಣಿಸಬೇಕು. ಮೀಸಲಾತಿ ಪಡೆದ ಬೌಲರ್ ಗೆ ಎದುರಾಳಿ ರನ್ ಮಾಡದ ಹಾಗೆ ನಿರ್ಬಂಧಿಸಬೇಕು' ಎಂದು ಚೇತನ್ ಟ್ವೀಟ್‌ಅನ್ನು ಲೇವಡಿ ಮಾಡಿದ್ದಾರೆ. 'ಇವತ್ತು ನಿಮ್ಮ ಮಾತು ನಿಜ ಅನ್ನಿಸುತ್ತಿದೆ. ಗ್ರೇಟ್ ಸರ್..' ಎಂದು ಕೆಲವರು ಚೇತನ್ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೇತನ್ ಅಹಿಂಸಾ: ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ, ಅಲ್ವಾ ನಾರಾಯಣ ಮೂರ್ತಿಯವರೇ?
'ಬಾಯಿಯನ್ನು ತೆರೆದು ಎಲ್ಲಾ ಸಂದೇಹಗಳನ್ನು ಹೋಗಲಾಡಿಸುವ ಬದಲು ಮೂರ್ಖನಾಗಿ ಕಾಣಿಸಿಕೊಳ್ಳುವುದು ಉತ್ತಮ' ಎಂದು ಇನ್ನೊಬ್ಬರು ಚೇತನ್‌ಗೆ ಸಲಹೆ ನೀಡಿದ್ದಾರೆ.
ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್ ಅಹಿಂಸಾ!