ರಸ್ತೆ ಸುರಕ್ಷತಾ ವಿಶ್ವ ಸರಣಿ ಚಾಲೆಂಜ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಸಚಿನ್‌ ತೆಂಡುಲ್ಕರ್‌, ಯೂಸುಫ್ ಪಠಾಣ್‌ಗೆ ಕೋವಿಡ್‌ ಸೋಂಕು ದೃಢಪಟ್ಟ ಬೆನ್ನಲ್ಲೇ ಇದೀಗ ಮತ್ತೋರ್ವ ಮಾಜಿ ಕ್ರಿಕೆಟಿಗನಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.29): ಮಾಜಿ ಕ್ರಿಕೆಟಿಗ ಎಸ್‌.ಬದ್ರಿನಾಥ್‌ಗೆ ಕೊರೋನಾ ಸೋಂಕು ಹಬ್ಬಿರುವುದು ಭಾನುವಾರ ದೃಢಪಟ್ಟಿದ್ದು, ಇದರೊಂದಿಗೆ ಇತ್ತೀಚೆಗಷ್ಟೇ ರಾಯ್‌ಪುರದಲ್ಲಿ ನಡೆದ ರಸ್ತೆ ಸುರಕ್ಷತಾ ವಿಶ್ವ ಸರಣಿ ಚಾಲೆಂಜ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಭಾರತದ ಮೂವರು ಆಟಗಾರರಿಗೆ ಸೋಂಕು ಹಬ್ಬಿದಂತಾಗಿದೆ.

ಶನಿವಾರವಷ್ಟೇ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌, ಯೂಸುಫ್‌ ಪಠಾಣ್‌ಗೆ ಕೊರೋನಾ ಸೋಂಕು ತಗುಲಿರುವುದು ತಿಳಿದುಬಂದಿತ್ತು. ಇದೀಗ ಸರಣಿಯಲ್ಲಿ ಪಾಲ್ಗೊಂಡಿದ್ದ 3ನೇ ಆಟಗಾರನಲ್ಲಿ ಸೋಂಕು ಕಂಡುಬಂದಿದ್ದು, ಉಳಿದ ಆಟಗಾರರಲ್ಲಿ ಆತಂಕ ಶುರುವಾಗಿದೆ. 

ನಾನು ನಿತಂತರವಾಗಿ ಕೋವಿಡ್‌ 19 ಟೆಸ್ಟ್‌ ಮಾಡಿಸಿಕೊಳ್ಳುತ್ತಿದ್ದೆ ಹಾಗೂ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೆ. ಆದಾಗಿಯೂ ನನ್ನಲ್ಲಿ ಕೊಂಚ ಕೋವಿಡ್‌ ಲಕ್ಷಣಗಳು ಕಂಡು ಬಂದ ಬೆನ್ನಲ್ಲೇ ಟೆಸ್ಟ್‌ ಮಾಡಿಸಿಕೊಂಡಾಗಿ ಕೋವಿಡ್ 19 ಸೋಂಕು ತಗುಲಿರುವುದ ಖಚಿತವಾಗಿದೆ. ನಾನೀಗ ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದು, ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದು, ವೈದ್ಯರ ಸಲಹೆಯಂತೆಯೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಎಸ್‌.ಬದ್ರಿನಾಥ್‌ ತಿಳಿಸಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಕೋವಿಡ್‌ ಪಾಸಿಟಿವ್‌..!

Scroll to load tweet…

ವಿಶ್ವದ ದಿಗ್ಗಜ ಆಟಗಾರರು ಪಾಲ್ಗೊಂಡಿದ್ದ, ಈ ಟೂರ್ನಿಯಲ್ಲಿ ಕೋವಿಡ್‌ ನಿಯಮಗಳ ಪಾಲನೆ ಕಟ್ಟುನಿಟ್ಟಾಗಿ ಆಗಿರಲಿಲ್ಲ. ಇದರ ಪ್ರತಿಫಲ ಇದೀಗ ಕಂಡು ಬರುತ್ತಿದ್ದು, ಒಬ್ಬರ ಬಳಿಕ ಒಬ್ಬರಲ್ಲಿ ಸೋಂಕು ಕಾಣಿಸಿಕೊಳ್ಳ ತೊಡಗಿದೆ.