* ಸೆಪ್ಟೆಂಬರ್ ಮೊದಲ ವಾರದಿಂದ ಆರಂಭವಾಗಬೇಕಿದ್ದ ಪಾಕ್‌-ಆಫ್ಘನ್ ಏಕದಿನ ಸರಣಿ ಮುಂದೂಡಿಗೆ* ಆಫ್ಘಾನ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ತೀರ್ಮಾನ* 3 ಪಂದ್ಯಗಳ ಸರಣಿ ಸೆಪ್ಟೆಂಬರ್ 3ರಿಂದ ಆರಂಭವಾಗಬೇಕಿತ್ತು.

ಕಾಬೂಲ್(ಆ.25)‌: ಶ್ರೀಲಂಕಾದಲ್ಲಿ ನಿಗದಿಯಾಗಿದ್ದ ಅಫ್ಘಾನಿಸ್ತಾನ- ಪಾಕಿಸ್ತಾನ ನಡುವಿನ ಏಕದಿನ ಸರಣಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ತಾಲಿಬಾನ್‌ ಆಡಳಿತಕ್ಕೆ ಒಳಪಟ್ಟು ಆಘಾತಕ್ಕೊಳಗಾಗಿರುವ ಆಫ್ಘನ್‌ ಆಟಗಾರರ ಮಾನಸಿಕ ಆರೋಗ್ಯ ಇನ್ನೂ ಸುಧಾರಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 3 ಪಂದ್ಯಗಳ ಸರಣಿ ಸೆಪ್ಟೆಂಬರ್ 3ರಿಂದ ಆರಂಭವಾಗಬೇಕಿತ್ತು.

ಆಡಳಿತ ಬದಲಾವಣೆಯ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಟಗಾರರಿಗೆ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ ಹಾಗೂ ಸದ್ಯ ಕಾಬೂಲ್‌ ಏರ್‌ಪೋರ್ಟ್‌ ಕೂಡಾ ಮುಚ್ಚಿರುವುದರಿಂದ ಸರಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಫ್ಘಾನ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. 

ಕುತೂಹಲಘಟ್ಟದಲ್ಲಿ ಪಾಕ್‌-ವಿಂಡೀಸ್‌ 2ನೇ ಟೆಸ್ಟ್‌ ಪಂದ್ಯ..!

Scroll to load tweet…

ಆಪ್ಘಾನಿಸ್ತಾನ ಕ್ರಿಕೆಟ್‌ ಮಂಡಳಿಯ ಮನವಿಯನ್ನು ಒಪ್ಪಿಕೊಂಡಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವೀಟ್‌ ಮೂಲಕ ತಿಳಿಸಿದೆ. ಮುಂದಿನ ತಿಂಗಳಿನಿಂದ ಆರಂಭವಾಗಬೇಕಿದ್ದ ಏಕದಿನ ಸರಣಿಯನ್ನು ಮುಂದೂಡುವ ಪ್ರಸ್ತಾಪವನ್ನು ಪಿಸಿಬಿ ಒಪ್ಪಿಕೊಂಡಿದೆ. ಆಟಗಾರರ ಮಾನಸಿಕ ಸ್ಥಿತಿ, ಕಾಬೂಲ್‌ ಏರ್‌ಪೋರ್ಟ್‌ ಪರಿಸ್ಥಿತಿ ಹಾಗೂ ಬ್ರಾಡ್‌ಕಾಸ್ಟ್‌ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಕ್ರಿಕೆಟ್‌ ಮಂಡಳಿಗಳು ಒಮ್ಮತದಿಂದ ಈ ಸರಣಿಯನ್ನು 2022ರಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಟ್ವೀಟ್‌ ಮಾಡಿದೆ